
ವೈಭವ್ ಸೂರ್ಯವಂಶಿ ( Vaibhav Suryavanshi) ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುದ್ದಿಯಲ್ಲಿರುವ ಭಾರತದ ಯುವ ಕ್ರಿಕೆಟಿಗ. ಐಪಿಎಲ್ (IPL 2025) ಮೆಗಾ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಿಗೆ ಸಂಚಲನ ಸೃಷ್ಟಿಸಿದ್ದ ವೈಭವ್, ರಾಜಸ್ಥಾನ್ ರಾಯಲ್ಸ್ ಪರ ಆಡುವ ಅವಕಾಶ ಪಡೆದು ಸಂಚಲನ ಸೃಷ್ಟಿಸಿದ್ದರು. ಐಪಿಎಲ್ ವೃತ್ತಿಜೀವನದಲ್ಲಿ ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಆ ನಂತರದ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ್ದರು. ವೈಭವ್ ಆಟವನ್ನು ನೋಡಿದ್ದವರು, 14 ವರ್ಷದ ಹುಡುಗನ ಪವರ್ ಹಿಟ್ಗೆ ದಂಗಾಗಿ ಹೋಗಿದ್ದರು. ಇನ್ನು ಕೆಲವರು ವೈಭವ್ ತಮ್ಮ ನಿಜವಾದ ವಯಸ್ಸನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಇದರ ಜೊತೆಗೆ ವೈಭವ್ ಅವರಿಗೆ ಗಡ್ಡ- ಮೀಸೆ ಇರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮೇಲೆ ಹೇಳಿದಂತೆ ವೈಭವ್ ಐಪಿಎಲ್ಗೆ ಕಾಲಿಟ್ಟಾಗಿನಿಂದ ಒಂದಿಲ್ಲೊಂದು ವಿವಾದಗಳು ಸೃಷ್ಟಿಯಾಗುತ್ತಿವೆ. ಮೊದಲಿಗೆ ವೈಭವ್ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವರು. ಆ ಬಳಿಕ ವೈಭವ್ 10ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿಸಿದ್ದರು. ಇದೀಗ ವೈಭವ್ಗೆ ಗಡ್ಡ ಮತ್ತು ಮೀಸೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ವೈಭವ್ ಸೂರ್ಯವಂಶಿ ತನಗೆ 14 ವರ್ಷ ಎಂದು ಸುಳ್ಳು ಹೇಳುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಫೋಟೋದ ಸತ್ಯಾಸತ್ಯತೆಯನ್ನು ಹುಡುಕಿ ಹೊರಟಾಗ ಸಿಕ್ಕಿದ್ದೇನು ಎಂಬುದನ್ನು ನೋಡುವುದಾದರೆ..
Vaibhav Sooryavanshi with Beard ☠️ pic.twitter.com/h6KZc0qZrw
— V. (@Mybrovirat) May 2, 2025
ಮೊದಲಿಗೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೈಭವ್ ಸೂರ್ಯವಂಶಿ ಅವರ ಫೋಟೋದ ಹಿಂದಿನ ಸತ್ಯವನ್ನು ನೋಡುವುದಾದರೆ.. ವೈರಲ್ ಫೋಟೋದಲ್ಲಿ ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋದಲ್ಲಿ, ಅವರು ಗಡ್ಡ ಮತ್ತು ಮೀಸೆ ಎರಡನ್ನೂ ಹೊಂದಿರುವುದು ಕಂಡುಬರುತ್ತದೆ. ಫೋಟೋದಲ್ಲಿರುವ ಅವರ ಗಡ್ಡ ಮತ್ತು ಮೀಸೆಯನ್ನು ನೋಡಿದರೆ, ವೈಭವ್ ಸೂರ್ಯವಂಶಿಗೆ 14 ವರ್ಷ ವಯಸ್ಸಾಗಿದೆ ಎಂದು ಅನಿಸುತ್ತಿಲ್ಲ.
IPL 2025: ಒಂದೇ ಒಂದು ರನ್ ಓಡದೆ 40 ರನ್ ಚಚ್ಚಿದ ವೈಭವ್; ವಿಡಿಯೋ
X ಖಾತೆಯಿಂದ ಪೋಸ್ಟ್ ಮಾಡಲಾದ ಗಡ್ಡ ಮತ್ತು ಮೀಸೆ ಹೊಂದಿರುವ ವೈಭವ್ ಸೂರ್ಯವಂಶಿಯ ಫೋಟೋವನ್ನು ನೀವು ನೋಡಿದಾಗ, ಅದು ನಕಲಿ ಖಾತೆ ಎಂದು ನಿಮಗೆ ಅರಿವಾಗುತ್ತದೆ. ಇದರರ್ಥ ವೈರಲ್ ಆಗುತ್ತಿರುವ ಫೋಟೋ ವೈಭವ್ ಸೂರ್ಯವಂಶಿ ಅವರ ನಿಜವಾದ ಫೋಟೋ ಅಲ್ಲ. ಅದು ನಕಲಿ ಫೋಟೋ. ಬಹುಶಃ ಅದನ್ನು ಕೇವಲ ವಿಡಂಬನೆಗಾಗಿ ಮಾಡಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Mon, 19 May 25