Irani Cup 2022: ಶೇಷ ಭಾರತ ತಂಡ ಪ್ರಕಟ: ಕನ್ನಡಿಗನಿಗೂ ಸ್ಥಾನ

| Updated By: ಝಾಹಿರ್ ಯೂಸುಫ್

Updated on: Sep 28, 2022 | 6:28 PM

Irani Cup 2022: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಇರಾನಿ ಕಪ್ ಅನ್ನು ಆಯೋಜಿಸಿರಲಿಲ್ಲ. ಇದೀಗ ಬಿಸಿಸಿಐ 3 ವರ್ಷಗಳ ಬಳಿಕ ಚಾಂಪಿಯನ್ಸ್ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವಿನ ಪಂದ್ಯವನ್ನು ಆಯೋಜಿಸುತ್ತಿರುವುದು ವಿಶೇಷ.

Irani Cup 2022: ಶೇಷ ಭಾರತ ತಂಡ ಪ್ರಕಟ: ಕನ್ನಡಿಗನಿಗೂ ಸ್ಥಾನ
ಸಾಂದರ್ಭಿಕ ಚಿತ್ರ
Follow us on

Irani Cup 2022: ಇರಾನಿ ಕಪ್ 2022ರ ಪಂದ್ಯಕ್ಕೆ ಶೇಷ ಭಾರತ ತಂಡವನ್ನು (Rest of India Squad)
ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಹನುಮ ವಿಹಾರಿ (Hanuma Vihari) ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗನೆಂದರೆ ಮಯಾಂಕ್ ಅಗರ್ವಾಲ್. ಹಾಗೆಯೇ ತಂಡದಲ್ಲಿ ಅಂಡರ್ 19 ವಿಶ್ವಕಪ್​ ಗೆದ್ದ ತಂಡದ ನಾಯಕರಾಗಿದ್ದ ಯುವ ಬ್ಯಾಟ್ಸ್​ಮನ್ ಯಶ್​ ಧುಲ್ ಸ್ಥಾನ ಸಹ ಪಡೆದಿದ್ದಾರೆ. ಇರಾನಿ ಕಪ್​ನಲ್ಲಿ ಶೇಷ ಭಾರತ ತಂಡವು ರಣಜಿ ಟ್ರೋಫಿ ಚಾಂಪಿಯನ್ ತಂಡದ ವಿರುದ್ಧ ಸೆಣಸಲಿದೆ. ಅದರಂತೆ ಹಾಲಿ ಚಾಂಪಿಯನ್ ಸೌರಾಷ್ಟ್ರ ಹಾಗೂ ಶೇಷ ಭಾರತ ತಂಡ ಅಕ್ಟೋಬರ್ 1 ರಂದು ರಾಜ್‌ಕೋಟ್‌ನಲ್ಲಿ ಮುಖಾಮುಖಿಯಾಗಲಿದೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಇರಾನಿ ಕಪ್ ಅನ್ನು ಆಯೋಜಿಸಿರಲಿಲ್ಲ. ಇದೀಗ ಬಿಸಿಸಿಐ 3 ವರ್ಷಗಳ ಬಳಿಕ ಚಾಂಪಿಯನ್ಸ್ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವಿನ ಪಂದ್ಯವನ್ನು ಆಯೋಜಿಸುತ್ತಿರುವುದು ವಿಶೇಷ. ಅದರಂತೆ ಈ ಬಾರಿ ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಶೇಷ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

ಈ ಟೆಸ್ಟ್ ಪಂದ್ಯಕ್ಕೆ ಸೌರಾಷ್ಟ್ರ ಇನ್ನೂ ತಂಡವನ್ನು ಘೋಷಿಸಿಲ್ಲ. ಇದಾಗ್ಯೂ ರಣಜಿ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರೇ ಶೇಷ ಭಾರತ ತಂಡವನ್ನು ಎದುರಿಸಲಿದೆ. ಒಂದು ವೇಳೆ ಆಟಗಾರರು ಗಾಯಗೊಂಡಿದ್ದರೆ ಮಾತ್ರ ತಂಡದಲ್ಲಿ ಬದಲಾವಣೆ ಕಂಡು ಬರಲಿದೆ.

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಶೇಷ ಭಾರತ ತಂಡ ಹೀಗಿದೆ:

ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ (ನಾಯಕ), ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ಯಶ್ ಧುಲ್, ಕೆಎಸ್ ಭರತ್, ಉಪೇಂದ್ರ ಯಾದವ್ (ವಿಕೆಟ್ ಕೀಪರ್‌ಗಳು), ಕುಲದೀಪ್ ಸೇನ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್, ಅರ್ಝಾನ್ ನಾಗ್ವಾಸ್ವಲ್ಲಾ, ಜಯಂತ್ ಯಾದವ್, ಸೌರಭ್ ಕುಮಾರ್

 

 

Published On - 6:28 pm, Wed, 28 September 22