Irani Trophy: ಮಿಂಚಿದ ಯಶಸ್ವಿ ಜೈಸ್ವಾಲ್; ಕನ್ನಡಿಗ ಮಯಾಂಕ್ ತಂಡಕ್ಕೆ ಇರಾನಿ ಕಪ್..!
Irani Trophy: ಗ್ವಾಲಿಯರ್ನಲ್ಲಿ ನಡೆದ ಇರಾನಿ ಕಪ್ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡ ಮಧ್ಯಪ್ರದೇಶವನ್ನು 238 ರನ್‌ಗಳಿಂದ ಸೋಲಿಸುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಗ್ವಾಲಿಯರ್ನಲ್ಲಿ ನಡೆದ ಇರಾನಿ ಕಪ್ನಲ್ಲಿ (Irani Cup) ಮಧ್ಯಪ್ರದೇಶವನ್ನು (Rest of India beat Madhya Pradesh) 238 ರನ್‌ಗಳಿಂದ ಸೋಲಿಸುವುದರೊಂದಿಗೆ ರೆಸ್ಟ್ ಆಫ್ ಇಂಡಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೆಲ್ಲಲು 437 ರನ್‌ಗಳ ಗುರಿ ಪಡೆದ ಮಧ್ಯಪ್ರದೇಶ ತಂಡ ಕೇವಲ 198 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ಸೋಲೊಪ್ಪಿಕೊಂಡಿತು. ಇದರೊಂದಿಗೆ ರಣಜಿ ಟ್ರೋಫಿ (Ranji Trophy) ಗೆದ್ದ ತಂಡಕ್ಕೆ ಇರಾನಿ ಕಪ್ ಮತ್ತೊಮ್ಮೆ ಕೈತಪ್ಪಿದಂತ್ತಾಗಿದೆ. ಅಂದರೆ ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ ತಂಡ, ಇರಾನಿ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ವಾಸ್ತವವಾಗಿ 2000-01ನೇ ಸಾಲಿನಿಂದ ಇಲ್ಲಿಯವರೆಗೆ ಕೇವಲ 3 ಬಾರಿ ರಣಜಿ ಟ್ರೋಫಿ ಗೆದ್ದ ತಂಡಗಳು ಇರಾನಿ ಕಪ್ ಗೆಲ್ಲಲು ಶಕ್ತವಾಗಿವೆ.
357 ರನ್ ಗಳಿಸಿ ಪಂದ್ಯ ಶ್ರೇಷ್ಠರಾದ ಯಶಸ್ವಿ
ಮಧ್ಯಪ್ರದೇಶದ ವಿರುದ್ಧ ರೆಸ್ಟ್ ಆಫ್ ಇಂಡಿಯಾ ಗೆಲ್ಲುವಲ್ಲಿ 21ರ ಹರೆಯದ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಪಾತ್ರ ಪ್ರಮುಖವಾಗಿತ್ತು. ಈ ಪಂದ್ಯದಲ್ಲಿ ಯಶಸ್ವಿ ಒಬ್ಬರೆ ದ್ವಿಶತಕ ಮತ್ತು ಶತಕದೊಂದಿಗೆ 357 ರನ್ ಗಳಿಸಿದ್ದರು. ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್ ಗಳಿಸಿದ ಯಶಸ್ವಿ, ಎರಡನೇ ಇನ್ನಿಂಗ್ಸ್‌ನಲ್ಲಿ 144 ರನ್ ಬಾರಿಸಿದರು. ಯಶಸ್ವಿ ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
That winning feeling ??#IraniCup | #MPvROI | @mastercardindia
Scorecard ? https://t.co/UMUCM30e11 pic.twitter.com/5Nxt4DhLXg
— BCCI Domestic (@BCCIdomestic) March 5, 2023
ಯಶಸ್ವಿ ಹೊರತಾಗಿ, ಅಭಿಮನ್ಯು ಈಶ್ವರನ್ ಮೊದಲ ಇನ್ನಿಂಗ್ಸ್‌ನಲ್ಲಿ 159 ರನ್ ಗಳಿಸಿದ್ದು, ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ನೆರವಾಯಿತು. ಈ ಇನ್ನಿಂಗ್ಸ್‌ನಲ್ಲಿ, ಅಭಿಮನ್ಯು ಎರಡನೇ ವಿಕೆಟ್‌ಗೆ ಯಶಸ್ವಿ ಜೊತೆ ದೊಡ್ಡ ಜೊತೆಯಾಟವನ್ನು ಮಾಡಿದರು. ಇದು ಮಧ್ಯಪ್ರದೇಶದ ಮೇಲೆ ಒತ್ತಡ ಹೇರುವಂತೆ ಮಾಡಿತು.
ಸಾಥ್ ನೀಡಿದ ಬೌಲರ್‌ಗಳು
ಇರಾನಿ ಕಪ್ ಗೆಲ್ಲುವಲ್ಲಿ ಬ್ಯಾಟ್ಸ್‌ಮನ್‌ಗಳಲ್ಲದೆ, ರೆಸ್ಟ್ ಆಫ್ ಇಂಡಿಯಾದ ಬೌಲರ್‌ಗಳು ಸಹ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ರೆಸ್ಟ್ ಆಫ್ ಇಂಡಿಯಾದ ಬಹುತೇಕ ಪ್ರತಿಯೊಬ್ಬ ಬೌಲರ್ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅದರಲ್ಲೂ ಇಬ್ಬರೂ ಬೌಲರ್‌ಗಳು ದಿಟ್ಟ ಪ್ರದರ್ಶನ ತೋರಿದರು. ಇಡೀ ತಂಡದ ಸಾಂಘೀಕ ಹೋರಾಟದಿಂದಾಗಿ ಮಧ್ಯಪ್ರದೇಶ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Sun, 5 March 23