AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಭರ್ಜರಿ ಸಿಕ್ಸ್, 14 ಫೋರ್: ಮೊದಲ ದಿನವೇ ಶತಕ ಸಿಡಿಸಿದ ಇಶಾನ್ ಕಿಶನ್

Ranji Trophy 2025: 91ನೇ ರಣಜಿ ಟ್ರೋಫಿ ಟೂರ್ನಿ ಶುರುವಾಗಿದೆ. ಈ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಕಣಕ್ಕಿಳಿಯುತ್ತಿವೆ. ಇಲ್ಲಿ 32 ಟೀಮ್​​ಗಳು ಎಲೈಟ್ ಗ್ರೂಪ್​ನಲ್ಲಿ ಕಣಕ್ಕಿಳಿದರೆ, 6 ತಂಡಗಳು ಪ್ಲೇಟ್ ಗ್ರೂಪ್​ನಲ್ಲಿ ಮೊದಲ ಸುತ್ತಿನ ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ದ್ವಿತೀಯ ಸುತ್ತಿನ ಪಂದ್ಯಗಳು ನಡೆಯಲಿದೆ.

2 ಭರ್ಜರಿ ಸಿಕ್ಸ್, 14 ಫೋರ್: ಮೊದಲ ದಿನವೇ ಶತಕ ಸಿಡಿಸಿದ ಇಶಾನ್ ಕಿಶನ್
Ishan Kishan
ಝಾಹಿರ್ ಯೂಸುಫ್
|

Updated on: Oct 16, 2025 | 9:56 AM

Share

ರಣಜಿ ಟೂರ್ನಿಯ (Ranji Trophy 2025) ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಕೊಯಬಂತ್ತೂರಿನ ಶ್ರೀ ರಾಮಕೃಷ್ಣ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ತಮಿಳುನಾಡು ಹಾಗೂ ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಜಾರ್ಖಂಡ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಶಿಖರ್ ಮೋಹನ್ ಕೇವಲ 10 ರನ್​ಗಳಿಸಿ ಔಟಾಗಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಮಾರ್ ಸೂರಜ್ 3 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್ ಸಿಂಗ್ 28 ರನ್​ಗಳಿಸಲಷ್ಟೇ ಶಕ್ತರಾದರು.

ಈ ಹಂತದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಕಿಶನ್, ಆ ಬಳಿಕ ತಮಿಳುನಾಡು ಬೌಲರ್​ಗಳನ್ನು ದಂಡಿಸಲು ಪ್ರಾರಂಭಿಸಿದರು.

ಪರಿಣಾಮ ಇಶಾನ್ ಕಿಶನ್ ಬ್ಯಾಟ್​ನಿಂದ ಭರ್ಜರಿ ಶತಕ ಮೂಡಿಬಂತು. ಶತಕದ ಬಳಿಕ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಇಶಾನ್ 183 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ ಅಜೇಯ 125 ರನ್​ ಬಾರಿಸಿದರು.

ಈ ಭರ್ಜರಿ ಶತಕದ ನೆರವಿನೊಂದಿಗೆ ಜಾರ್ಖಂಡ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 307 ರನ್​​ಗಳಿಸಿದೆ. ದ್ವಿತೀಯ ದಿನದಾಟದಲ್ಲಿ ಇಶಾನ್ ಕಿಶನ್ (125) ಹಾಗೂ ಸಾಹಿಲ್ ರಾಜ್ (64) ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

ತಮಿಳುನಾಡು ಪ್ಲೇಯಿಂಗ್ 11: ಎನ್ ಜಗದೀಸನ್ (ನಾಯಕ) , ಪ್ರದೋಶ್ ರಂಜನ್ ಪಾಲ್ , ಶಾರುಖ್ ಖಾನ್ , ಬಾಬಾ ಇಂದ್ರಜಿತ್ , ಬಾಲಸುಬ್ರಮಣ್ಯಂ ಸಚಿನ್ , ಆಂಡ್ರೆ ಸಿದ್ದಾರ್ಥ್ ಸಿ , ಆರ್ ಎಸ್ ಅಂಬ್ರಿಶ್ , ಡಿ ಟಿ ಚಂದ್ರಶೇಖರ್ , ಸಂದೀಪ್ ವಾರಿಯರ್ , ಗುರ್ಜಪ್ನೀತ್ ಸಿಂಗ್ , ಹೇಮಚೂಡೇಶನ್ ಜೆ.

ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್​ಗೆ 19 ತಂಡಗಳು ಫೈನಲ್

ಜಾರ್ಖಂಡ್ ಪ್ಲೇಯಿಂಗ್ 11: ಶಿಖರ್ ಮೋಹನ್ , ಶರಣದೀಪ್ ಸಿಂಗ್ , ಕುಮಾರ್ ಕುಶಾಗ್ರಾ , ಇಶಾನ್ ಕಿಶನ್ (ನಾಯಕ) , ಸಾಹಿಲ್ ರಾಜ್ , ರಿಷವ್ ರಾಜ್ , ಜತಿನ್ ಪಾಂಡೆ , ವಿಕಾಶ್ ಸಿಂಗ್ , ಕುಮಾರ್ ಸೂರಜ್ , ಅನುಕುಲ್ ರಾಯ್ , ವಿರಾಟ್ ಸಿಂಗ್.

Follow Us