AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026 qualifier: ಫುಟ್‌ಬಾಲ್‌ ಜೊತೆಗೆ ಕ್ರಿಕೆಟ್​ನಲ್ಲೂ ಜಾದೂ ಮಾಡುತ್ತಿದೆ ಇಟಲಿ

T20 World Cup 2026 qualifier: ಐಸಿಸಿ ಟಿ20 ವಿಶ್ವಕಪ್ ಯುರೋಪಿಯನ್ ಕ್ವಾಲಿಫೈಯರ್‌ನಲ್ಲಿ ಇಟಲಿ ತಂಡವು ಸ್ಕಾಟ್ಲೆಂಡ್ ತಂಡವನ್ನು ಸೋಲಿಸುವ ಮೂಲಕ 2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವತ್ತ ಮುನ್ನಡೆಯುತ್ತಿದೆ. ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಪ್ರಬಲ ತಂಡಗಳಾಗಿದ್ದರೂ, ಇಟಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಗೆಲುವಿನಿಂದ ಇಟಲಿ ಟೂರ್ನಮೆಂಟ್‌ನಲ್ಲಿ ಅಗ್ರ ಸ್ಥಾನದಲ್ಲಿದೆ.

T20 World Cup 2026 qualifier: ಫುಟ್‌ಬಾಲ್‌ ಜೊತೆಗೆ ಕ್ರಿಕೆಟ್​ನಲ್ಲೂ ಜಾದೂ ಮಾಡುತ್ತಿದೆ ಇಟಲಿ
Italy
ಪೃಥ್ವಿಶಂಕರ
|

Updated on: Jul 09, 2025 | 10:24 PM

Share

ಐಸಿಸಿ ಟಿ20 ವಿಶ್ವಕಪ್ ಯುರೋಪಿಯನ್ ಕ್ವಾಲಿಫೈಯರ್‌ನಲ್ಲಿ (ICC T20 World Cup 2026 European Qualifier) ಇಟಲಿ ತಂಡವು ಸ್ಕಾಟ್ಲೆಂಡ್ ತಂಡವನ್ನು (Italy Vs Scotland) ಸೋಲಿಸುವ ಮೂಲಕ 2026 ರ ಟಿ20 ವಿಶ್ವಕಪ್​ಕ್ಕೆ ಅರ್ಹತೆ ಪಡೆಯುವ ಸನಿಹದಲ್ಲಿದೆ. ವಾಸ್ತವವಾಗಿ ಇಟಲಿ ಫುಟ್‌ಬಾಲ್‌ನಲ್ಲಿ ಹಲವು ಬಾರಿ ಸಾಧನೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಈ ಬಾರಿ ಕ್ರಿಕೆಟ್‌ನಲ್ಲಿಯೂ ಇಟಲಿ ಸದ್ದು ಮಾಡಿದೆ. ಬುಧವಾರ ನಡೆದ ಪಂದ್ಯದಲ್ಲಿ, ಇಟಾಲಿಯನ್ ತಂಡವು ಅದ್ಭುತ ಪ್ರದರ್ಶನ ನೀಡಿ 12 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಯುರೋಪಿಯನ್ ಕ್ವಾಲಿಫೈಯರ್‌ನಲ್ಲಿ ಅಗ್ರ 2 ರಲ್ಲಿ ಸ್ಥಾನ ಪಡೆದ ತಂಡಗಳು ಮುಂದಿನ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ. ಈ ಪಂದ್ಯಾವಳಿಯಿಂದ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅತಿದೊಡ್ಡ ಸ್ಪರ್ಧಿಗಳೆಂದು ಸ್ಕಾಟ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ಪರಿಗಣಿಸಲ್ಪಟ್ಟಿದ್ದವು. ಆದರೆ ಈ ಎರಡು ತಂಡಗಳ ನಡುವೆ ಇಟಲಿ ನೀಡುತ್ತಿರುವ ಪ್ರದರ್ಶನ ಎಲ್ಲರನ್ನೂ ಅಚ್ಚರಿಪಡಿಸಿದೆ.

ಐಸಿಸಿ ಟಿ20 ವಿಶ್ವಕಪ್ ಯುರೋಪಿಯನ್ ಕ್ವಾಲಿಫೈಯರ್‌ನಲ್ಲಿ, ಇಟಲಿ ಪ್ರಸ್ತುತ 3 ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇಟಲಿ ಇಲ್ಲಿಯವರೆಗೆ ಟೂರ್ನಮೆಂಟ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ತಂಡವು ಇನ್ನೂ ಕೊನೆಯ ಪಂದ್ಯವನ್ನು ಸ್ಕಾಟ್ಲೆಂಡ್ ವಿರುದ್ಧ ಆಡಬೇಕಾಗಿದೆ. ಆ ಪಂದ್ಯವನ್ನೂ ತಂಡ ಗೆದ್ದರೆ, 2026 ರ ಟಿ20 ವಿಶ್ವಕಪ್‌ನಲ್ಲಿ ಆಡುವುದು ಖಚಿತವಾಗುತ್ತದೆ. ಆದಾಗ್ಯೂ ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಇನ್ನೂ ಚೇತರಿಸಿಕೊಳ್ಳುವ ಅವಕಾಶವನ್ನು ಹೊಂದಿವೆ.

ಪಂದ್ಯ ಹೇಗಿತ್ತು?

ಇಟಲಿ ಮತ್ತು ಸ್ಕಾಟ್ಲೆಂಡ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಟಲಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು. ಆರಂಭಿಕ ಜಸ್ಟಿನ್ ಮೊಸ್ಕಾ ಕೇವಲ 11 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನಾಯಕ ಜೋ ಬರ್ನ್ಸ್ ಕೂಡ 8 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಆದಾಗ್ಯೂ ಮತ್ತೊಬ್ಬ ಆರಂಭಿಕ ಆಟಗಾರ ಎಮಿಲಿಯೊ ಗೇ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 21 ಎಸೆತಗಳಲ್ಲಿ 50 ರನ್ ಗಳಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಇವರನ್ನು ಹೊರತುಪಡಿಸಿ ಹ್ಯಾರಿ ಮಾನೆಂಟಿ 38 ರನ್‌ಗಳ ಕೊಡುಗೆ ನೀಡಿದರೆ, ಗ್ರಾಂಟ್ ಸ್ಟೀವರ್ಟ್ ತಂಡದ ಪರವಾಗಿ 44 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇತ್ತ ಸ್ಕಾಟ್ಲೆಂಡ್ ಪರ ಮೈಕೆಲ್ ಲೀಸ್ಕ್ ಮೂರು ಓವರ್‌ಗಳಲ್ಲಿ 18 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು.

IND vs SL: ಆಗಸ್ಟ್‌ನಲ್ಲಿ ಭಾರತ- ಶ್ರೀಲಂಕಾ ನಡುವೆ ಏಕದಿನ, ಟಿ20 ಸರಣಿ

5 ವಿಕೆಟ್ ಪಡೆದ ಹ್ಯಾರಿ ಮಾನೆಟ್ಟಿ

ಇದಕ್ಕೆ ಉತ್ತರವಾಗಿ, ಸ್ಕಾಟ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಕೇವಲ 155 ರನ್ ಗಳಿಸಲು ಸಾಧ್ಯವಾಯಿತು. ಆರಂಭಿಕ ಜಾರ್ಜ್ ಮುನ್ಸೆ 61 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 72 ರನ್ ಗಳಿಸಿದರಾದರೂ ತಮ್ಮ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ನಾಯಕ ರಿಚಿ ಬ್ಯಾರಿಂಗ್ಟನ್ ಕೂಡ 46 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.ಈ ಇಬ್ಬರೂ ಆಟಗಾರರು ಮೂರನೇ ವಿಕೆಟ್‌ಗೆ 105 ರನ್‌ಗಳ ಅಮೂಲ್ಯ ಪಾಲುದಾರಿಕೆಯನ್ನು ನೀಡಿದರು. ಆದಾಗ್ಯೂ, ಅವರಿಗೆ ಇತರ ಆಟಗಾರರಿಂದ ಬೆಂಬಲ ಸಿಗಲಿಲ್ಲ. ಹ್ಯಾರಿ ಮಾನೆಟ್ಟಿ ಇಟಲಿ ಪರ ಎಲ್ಲಾ ಐದು ವಿಕೆಟ್‌ಗಳನ್ನು ಪಡೆದರು.