
ವಯಸ್ಸು ಜಸ್ಟ್ ನಂಬರ್ ಎಂಬುದನ್ನು ಇಂಗ್ಲೆಂಡ್‌ನ ದಿಗ್ಗಜ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 43ನೇ ವಯಸ್ಸಿನಲ್ಲೂ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಬೆಚ್ಚಿಬೀಳಿಸುತ್ತಿರುವ ಅ್ಯಂಡರ್ಸನ್, 2026ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಒಂದು ಅದ್ಭುತ ಮತ್ತು ಅಪರೂಪದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಲಂಕಾಶೈರ್ ಪರ ಆಡುತ್ತಿರುವ ಅ್ಯಂಡರ್ಸನ್, ನಾರ್ಥಾಂಪ್ಟನ್‌ಶೈರ್ ತಂಡದ ಯುವ ಬ್ಯಾಟರ್ ಜೇಮ್ಸ್ ಸೇಲ್ಸ್ (James Sales) ಅವರನ್ನು ಔಟ್ ಮಾಡುವ ಮೂಲಕ ಇತಿಹಾಸ ಬರೆದಿದ್ದಾರೆ.
ವಿಶೇಷವೆಂದರೆ, ಬರೋಬ್ಬರಿ 21 ವರ್ಷಗಳ ಹಿಂದೆ ಅಂದರೆ 2005ರಲ್ಲಿ, ಅ್ಯಂಡರ್ಸನ್ ಇದೇ ಜೇಮ್ಸ್ ಸೇಲ್ಸ್ ಅವರ ತಂದೆ ಡೇವಿಡ್ ಸೇಲ್ಸ್ (David Sales) ಅವರನ್ನು ಸಹ ಔಟ್ ಮಾಡಿದ್ದರು.
ಒಬ್ಬನೇ ಬೌಲರ್ ತಂದೆ ಮತ್ತು ಮಗ ಇಬ್ಬರನ್ನೂ ವೃತ್ತಿಪರ ಕ್ರಿಕೆಟ್‌ನಲ್ಲಿ ಔಟ್ ಮಾಡುವುದು ಅತ್ಯಂತ ವಿರಳ. ಜೇಮ್ಸ್ ಅ್ಯಂಡರ್ಸನ್ ಅವರ ಸುದೀರ್ಘ ವೃತ್ತಿಜೀವನ ಮತ್ತು ಫಿಟ್‌ನೆಸ್‌ಗೆ ಇದು ಹಿಡಿದ ಕನ್ನಡಿಯಾಗಿದೆ.
ನಾರ್ಥಾಂಪ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅ್ಯಂಡರ್ಸನ್ ಕೇವಲ ಈ ದಾಖಲೆಗೆ ಸೀಮಿತವಾಗಲಿಲ್ಲ. ಅವರು ಅಮೋಘ ಬೌಲಿಂಗ್ ಪ್ರದರ್ಶನ ನೀಡಿ 64 ರನ್‌ಗಳಿಗೆ 5 ವಿಕೆಟ್ ಪಡೆಯುವ ಮೂಲಕ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ 56ನೇ ‘ಫೈಫರ್’ (ಐದು ವಿಕೆಟ್ ಗೊಂಚಲು) ಪೂರ್ಣಗೊಳಿಸಿದರು.
ಜೇಮ್ಸ್ ಅ್ಯಂಡರ್ಸನ್ ಕ್ರಿಕೆಟ್ ಇತಿಹಾಸದಲ್ಲಿ ತಂದೆ-ಮಗನನ್ನು ಔಟ್ ಮಾಡಿದ ಮೊದಲ ಬೌಲರ್ ಅಲ್ಲ. ಈ ಹಿಂದೆ ತಂದೆ ಮತ್ತು ಮಗ ಇಬ್ಬರನ್ನೂ ಔಟ್ ಮಾಡಿದ ವಿಶೇಷ ದಾಖಲೆಯನ್ನು ಐವರು ಬೌಲರ್‌ಗಳು ನಿರ್ಮಿಸಿದ್ದಾರೆ. ಆದರೆ, ಅ್ಯಂಡರ್ಸನ್ ಅವರ ಈ ಸಾಧನೆ ವಿಶೇಷವಾಗಿರುವುದು ಏಕೆಂದರೆ, ಅವರು 21 ವರ್ಷಗಳ ಸುದೀರ್ಘ ಅಂತರದಲ್ಲಿ (2005 ಮತ್ತು 2026) ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ತಂದೆ-ಮಗನನ್ನು ಔಟ್ ಮಾಡಿದ ಬೌಲರ್ಗಳ ಪಟ್ಟಿ ಈ ಕೆಳಗಿನಂತಿದೆ…
ಇದನ್ನೂ ಓದಿ: James Anderson: 3 ವಿಶ್ವ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಜೇಮ್ಸ್ ಅ್ಯಂಡರ್ಸನ್
ಹೆಚ್ಚಿನ ಬೌಲರ್‌ಗಳು ಒಂದೇ ದಶಕದಲ್ಲಿ ಅಥವಾ ಅಲ್ಪ ಅವಧಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ಜೇಮ್ಸ್ ಅ್ಯಂಡರ್ಸನ್ 2005ರಲ್ಲಿ ತಂದೆಯನ್ನು ಔಟ್ ಮಾಡಿ, 2026ರಲ್ಲಿ ಮಗನನ್ನು ಔಟ್ ಮಾಡಿರುವುದು ಅವರ ಅಸಾಧಾರಣ ಫಿಟ್‌ನೆಸ್ ಮತ್ತು ಸುದೀರ್ಘ ವೃತ್ತಿಜೀವನಕ್ಕೆ ಸಾಕ್ಷಿಯಾಗಿದೆ.