AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

James Anderson: ಭಾರತದಲ್ಲೇ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಅ್ಯಂಡರ್ಸನ್

James Anderson: ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ 2 ವಿಕೆಟ್ ಕಬಳಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಹಾಗೆಯೇ ಮುತ್ತಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.

James Anderson: ಭಾರತದಲ್ಲೇ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಅ್ಯಂಡರ್ಸನ್
James Anderson
TV9 Web
| Edited By: |

Updated on: Feb 28, 2024 | 12:15 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮ್ಯಾಚ್ ಮಾರ್ಚ್ 7 ರಿಂದ ಶುರುವಾಗಲಿದೆ. ಧರ್ಮಶಾಲಾದ ಹೆಚ್​ಪಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿಶ್ವ ದಾಖಲೆ ಬರೆಯುವ ಅವಕಾಶ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಮುಂದಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಈಗಾಗಲೇ 698 ವಿಕೆಟ್​ಗಳನ್ನು ಕಬಳಿಸಿರುವ ಅ್ಯಂಡರ್ಸನ್ ಇನ್ನೆರಡು ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 700 ವಿಕೆಟ್ ಕಬಳಿಸಿದ ಮೊದಲ ವೇಗಿ ಎನಿಸಿಕೊಳ್ಳಲಿದ್ದಾರೆ.

ಸ್ಪಿನ್ನರ್​ಗಳ ನಡುವೆ ವೇಗಿಯ ಮಿಂಚಿಂಗ್:

  • ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700+ ವಿಕೆಟ್ ಕಬಳಿಸಿರುವುದು ಕೇವಲ ಇಬ್ಬರು ಬೌಲರ್​ಗಳು ಮಾತ್ರ. ಆದರೆ ಈ ಇಬ್ಬರೂ ಕೂಡ ಸ್ಪಿನ್ನರ್​ಗಳು ಎಂಬುದು ವಿಶೇಷ.
  • ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಟೆಸ್ಟ್​ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಹೊಂದಿದ್ದಾರೆ. 133 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮುರಳೀಧರನ್ ಒಟ್ಟು 800 ವಿಕೆಟ್ ಕಬಳಿಸಿ ಈ ದಾಖಲೆ ನಿರ್ಮಿಸಿದ್ದಾರೆ.
  • ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸೀಸ್ ಪರ 145 ಟೆಸ್ಟ್ ಪಂದ್ಯಗಳನ್ನಾಡಿರುವ ವಾರ್ನ್ ಒಟ್ಟು 708 ವಿಕೆಟ್​ಗಳನ್ನು ಕಬಳಿಸಿದ್ದಾರೆ.
  • ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ 186 ಟೆಸ್ಟ್ ಪಂದ್ಯಗಳಿಂದ ಇದುವರೆಗೆ 698 ವಿಕೆಟ್ ಕಬಳಿಸಿದ್ದಾರೆ. ಇನ್ನೆರಡು ವಿಕೆಟ್ ಪಡೆದ ಟೆಸ್ಟ್ ಕ್ರಿಕೆಟ್​ನಲ್ಲಿ 700 ವಿಕೆಟ್ ಪಡೆದ ಮೊದಲ ವೇಗಿ ಹಾಗೂ 3ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಶೇನ್ ದಾಖಲೆ ಶೇಕಿಂಗ್:

41ನೇ ಹಿರಿ ವಯಸ್ಸಿನಲ್ಲೂ ಕರಾರುವಾಕ್ ದಾಳಿ ಸಂಘಟಿಸುತ್ತಿರುವ ಜೇಮ್ಸ್ ಅ್ಯಂಡರ್ಸನ್ ಇನ್ನೊಂದೆರೆಡು ವರ್ಷ ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಇದರ ನಡುವೆ 11 ವಿಕೆಟ್ ಕಬಳಿಸಿದರೆ ಶೇನ್ ವಾರ್ನ್ (708) ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವಿಶ್ವ ದಾಖಲೆಯನ್ನು ನಿರ್ಮಿಸಬಹುದು.

ಇದನ್ನೂ ಓದಿ: James Anderson: 1111 ವಿಕೆಟ್ಸ್​: ಸಾಟಿಯಿಲ್ಲದ ಸರದಾರ ಜೇಮ್ಸ್ ಅ್ಯಂಡರ್ಸನ್

ಭಾರತದಲ್ಲಿ ಕೊನೆಯ ಟೆಸ್ಟ್:

ಜೇಮ್ಸ್ ಅ್ಯಂಡರ್ಸನ್​ಗೆ ಇದು ಭಾರತದಲ್ಲಿನ ಕೊನೆಯ ಟೆಸ್ಟ್ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಇಂಗ್ಲೆಂಡ್ ತಂಡ ಭಾರತದಲ್ಲಿ ತನ್ನ ಮುಂದಿನ ಟೆಸ್ಟ್​ ಸರಣಿಯನ್ನು 2027-28 ರಲ್ಲಿ ಆಡಲಿದೆ. ಈ ವೇಳೆಗೆ ಜೇಮ್ಸ್ ಅ್ಯಂಡರ್ಸನ್ ತಂಡದಲ್ಲಿರುವುದು ಅನುಮಾನ. ಹೀಗಾಗಿಯೇ ಭಾರತದಲ್ಲೇ ವಿಶ್ವ ದಾಖಲೆ ನಿರ್ಮಿಸಲು ಇದು ಜೇಮ್ಸ್ ಅ್ಯಂಡರ್ಸನ್ ಅವರಿಗೆ ಕೊನೆಯ ಅವಕಾಶ. ಅದರಂತೆ ಧರ್ಮಶಾಲಾ ಮೈದಾನದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ ಮೂಲಕ ಅ್ಯಂಡರ್ಸನ್ 700 ವಿಕೆಟ್​ಗಳ ಸಾಧನೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು