James Anderson: 1111 ವಿಕೆಟ್ಸ್: ಸಾಟಿಯಿಲ್ಲದ ಸರದಾರ ಜೇಮ್ಸ್ ಅ್ಯಂಡರ್ಸನ್
James Anderson Record: ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೊಸ ವಿಶ್ವ ದಾಖಲೆ ಬರೆಯಲು ಜೇಮ್ಸ್ ಅ್ಯಂಡರ್ಸನ್ಗೆ ಕೇವಲ 3 ವಿಕೆಟ್ಗಳ ಅವಶ್ಯಕತೆಯಿದೆ. ಈಗಾಗಲೇ 697 ಟೆಸ್ಟ್ ವಿಕೆಟ್ ಪಡೆದಿರುವ ಅ್ಯಂಡರ್ಸನ್ 4ನೇ ಮತ್ತು 5ನೇ ಟೆಸ್ಟ್ ಪಂದ್ಯಗಳ ಮೂಲಕ ಮೂರು ವಿಕೆಟ್ ಕಬಳಿಸಿದರೆ ಟೆಸ್ಟ್ನಲ್ಲಿ 700 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ.
Updated on: Feb 24, 2024 | 1:05 PM

ರಾಂಚಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (Jimmy Anderson) ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (2) ಅವರ ವಿಕೆಟ್ ಕಬಳಿಸಿದ್ದಾರೆ. ಈ ವಿಕೆಟ್ನೊಂದಿಗೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಅ್ಯಂಡರ್ಸನ್ ಅವರ ವಿಕೆಟ್ಗಳ ಸಂಖ್ಯೆ 1111 ಕ್ಕೆ ಏರಿದೆ.

ಇದುವರೆಗೆ 295 ಪಂದ್ಯಗಳನ್ನಾಡಿರುವ ಜೇಮ್ಸ್ ಅ್ಯಂಡರ್ಸನ್ ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ 697 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಲಂಕಾಶೈರ್, ಇಂಗ್ಲೆಂಡ್ ಪ್ರಥಮ ದರ್ಜೆ, ಆಕ್ಲೆಂಡ್ ಮತ್ತು ಇಂಗ್ಲೆಂಡ್ ಎ ತಂಡಗಳ ಪರ ಒಟ್ಟು 586 ವಿಕೆಟ್‌ಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ.

ಈ ಮೂಲಕ 21ನೇ ಶತಮಾನದಲ್ಲಿ ಪಾದಾರ್ಪಣೆ ಮಾಡಿ 1111 ಫಸ್ಟ್ ಕ್ಲಾಸ್ ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 1 ಸಾವಿರಕ್ಕಿಂತ ಅಧಿಕ ವಿಕೆಟ್ ಕಬಳಿಸಿದ ವಿಶ್ವದ 216 ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಇಂಗ್ಲೆಂಡ್‌ನ ವಿಲ್ಫ್ರೆಡ್ ರೋಡ್ಸ್ ಹೆಸರಿನಲ್ಲಿದೆ. 1,110 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರೋಡ್ಸ್ ಒಟ್ಟು 4,204 ವಿಕೆಟ್‌ಗಳನ್ನು ಕಬಳಿಸಿ ಈ ವಿಶ್ವ ದಾಖಲೆ ನಿರ್ಮಿಸಿಟ್ಟಿದ್ದಾರೆ. ಹಾಗೆಯೇ 592 ಪಂದ್ಯಗಳಲ್ಲಿ 3,776 ವಿಕೆಟ್‌ಗಳನ್ನು ಪಡೆದಿರುವ ಇಂಗ್ಲೆಂಡ್‌ನ ಟಿಚ್ ಫ್ರೀಮನ್ ನಂತರದ ಸ್ಥಾನದಲ್ಲಿದ್ದಾರೆ.

ಇದೀಗ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 1111 ವಿಕೆಟ್ ಪಡೆದಿರುವ ಜೇಮ್ಸ್ ಅ್ಯಂಡರ್ಸನ್ ಹೊಸ ವಿಶ್ವ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಅಂದರೆ ಟೀಮ್ ಇಂಡಿಯಾ ವಿರುದ್ಧದ ಸರಣಿಯಲ್ಲಿ 3 ವಿಕೆಟ್ ಕಬಳಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದ ಮೊದಲ ವೇಗಿ ಎಂಬ ವಿಶ್ವ ದಾಖಲೆ ಜೇಮ್ಸ್ ಅ್ಯಂಡರ್ಸನ್ ಪಾಲಾಗಲಿದೆ.

ಹೀಗಾಗಿ ಭಾರತದ ವಿರುದ್ಧದ ಸರಣಿಯಲ್ಲಿ ಸಾಟಿಯಿಲ್ಲದ ಸರದಾರ ಜೇಮ್ಸ್ ಅ್ಯಂಡರ್ಸನ್ ಕಡೆಯಿಂದ ಹೊಸ ವಿಶ್ವ ದಾಖಲೆಯನ್ನು ನಿರೀಕ್ಷಿಸಬಹುದು.



















