Jasprit Bumrah: ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಲ್ಲೋಲ-ಕಲ್ಲೋಲ?: ಅನ್​ಫಾಲೋ ಮಾಡಿದ ಜಸ್​ಪ್ರಿತ್ ಬುಮ್ರಾ

Hardik Pandya vs Jasprit Bumrah Mumbai Indians: ಐಪಿಎಲ್ 2024 ಹರಾಜಿಗು ಮುನ್ನ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಸೇರಿದ ಬಳಿಕ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಕಾಣುತ್ತಿದೆ. ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್ ಎಕ್ಸ್, ಇನ್​ಸ್ಟಾ ಖಾತೆಯನ್ನು ಅನ್​ಫಾಲೋ ಮಾಡಿದ್ದಾರೆ.

Jasprit Bumrah: ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಲ್ಲೋಲ-ಕಲ್ಲೋಲ?: ಅನ್​ಫಾಲೋ ಮಾಡಿದ ಜಸ್​ಪ್ರಿತ್ ಬುಮ್ರಾ
jasprit bumrah
Follow us
Vinay Bhat
|

Updated on:Nov 28, 2023 | 1:41 PM

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಗುಜರಾತ್ ಟೈಟಾನ್ಸ್​ನಿಂದ ಕರೆತರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎರಡು ಸೀಸನ್​ಗಳ ನಂತರ ಪಾಂಡ್ಯ ಮರಳಿ ಎಂಐ ಟೀಮ್ ಸೇರಿದ್ದು, ಐಪಿಎಲ್ 2024 ರಲ್ಲಿ ರೋಹಿತ್ ತಂಡದಲ್ಲಿ ಆಡಲಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿದ ಬೆನ್ನಲ್ಲೇ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹಾರ್ದಿಕ್ ಕರೆತಂದ ಮುಂಬೈ ಫ್ರಾಂಚೈಸಿ ಮೇಲೆ ಅವರದ್ದೇ ತಂಡದ ಆಟಗಾರರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ, ‘ಕೆಲವೊಮ್ಮೆ ಮೌನವು ಅತ್ಯುತ್ತಮ ಉತ್ತರವಾಗಿದೆ’ ಎಂದು ಬರೆದಿದ್ದಾರೆ. ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಮರಳುವುದರೊಂದಿಗೆ ಬುಮ್ರಾ ಈರೀತಿ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಾರೆ ಎಂದು ಜನರು ಲಿಂಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
ಕೊಹ್ಲಿ ಹಣೆ-ಕೆನ್ನೆ ಮೇಲೆ ಗಾಯ, ಮೂಗಿನ ಮೇಲೆ ಬ್ಯಾಂಡೇಜ್: ಫೋಟೋ ವೈರಲ್
Image
ನೂತನ ದಾಖಲೆಯತ್ತ ಕ್ಯಾಪ್ಟನ್ ಸೂರ್ಯ: ಬೇಕಿರುವುದು ಕೇವಲ 60 ರನ್
Image
ಆರ್​ಸಿಬಿ ಸೇರಿದ ತಕ್ಷಣ ಸ್ಫೋಟಕ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಹೇಳಿದ್ದೇನು
Image
ಇಂದು IND vs AUS ತೃತೀಯ ಟಿ20 ಪಂದ್ಯ: ಸೂರ್ಯ ಪಡೆಯ ಟೀಮ್ ಬದಲಾಗುತ್ತಾ?

ಇದಿಷ್ಟೆ ಅಲ್ಲದೆ ಇನ್​ಸ್ಟಾ ಮತ್ತು ಎಕ್ಸ್ (ಟ್ವಿಟ್ಟರ್) ನಲ್ಲಿ ಮುಂಬೈ ಇಂಡಿಯನ್ಸ್ ಖಾತೆಯನ್ನು ಅನ್ ಫಾಲೋ ಮಾಡಿದ್ದಾರೆ. ಅಭಿಮಾನಿಗಳು ಹೇಳುವ ಪ್ರಕಾರ, ಪಾಂಡ್ಯ ಮುಂಬೈ ತಂಡಕ್ಕೆ ಮರಳಿರುವುದು ಬುಮ್ರಾಗೆ ದೊಡ್ಡ ನಷ್ಟ ಉಂಟುಮಾಡಬಹುದು. ಏಕೆಂದರೆ ರೋಹಿತ್ ನಂತರ ಬುಮ್ರಾ ಅವರನ್ನು ಮುಂಬೈ ತಂಡದ ನಾಯಕ ಎಂದು ಪರಿಗಣಿಸಲಾಗಿತ್ತು. ಆದರೆ, ಈ ಜಾಗಕ್ಕೆ ಪಾಂಡ್ಯ ಸ್ಪರ್ಧಿಯಾಗಿದ್ದಾರೆ.

MI ತಂಡದಲ್ಲಿ ಬಿರುಕು?: ಇನ್​ಸ್ಟಾದಲ್ಲಿ ಬಾಂಬ್ ಸಿಡಿಸಿದ ಬುಮ್ರಾ

ಅಲ್ಲದೆ ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಸೇರಿಸಿಕೊಳ್ಳುವ ಬಗ್ಗೆ ನಾಯಕ ರೋಹಿತ್ ಶರ್ಮಾ ಅವರನ್ನು ಕೇಳಲಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ. ಮುಂಬೈ ಇಂಡಿಯನ್ಸ್, ಭವಿಷ್ಯದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಪರಿಗಣಿಸುತ್ತಿದೆ ಎಂಬ ಊಹಾಪೋಹವೂ ಇದೆ. ಐಪಿಎಲ್ 2024 ರಲ್ಲಿ ನಾಯಕರಾಗುತ್ತಾರೆಯೇ ಎಂಬ ಬಗ್ಗೆ ಅಧಿಕೃತ ಉತ್ತರವಿಲ್ಲ. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಹಾರ್ದಿಕ್ ಗುಜರಾತ್ ನಾಯಕರಾಗಿದ್ದರು. ಮೊದಲ ಋತುವಿನಲ್ಲಿ ಚಾಂಪಿಯನ್ ಆದರೆ, ಕೊನೆಯ ಸೀಸನ್’ನಲ್ಲಿ ಫೈನಲ್ ತಲುಪಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Tue, 28 November 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ