Virat Kohli: ವಿರಾಟ್ ಕೊಹ್ಲಿ ಹಣೆ-ಕೆನ್ನೆ ಮೇಲೆ ಗಾಯ, ಮೂಗಿನ ಮೇಲೆ ಬ್ಯಾಂಡೇಜ್: ವೈರಲ್ ಆಗ್ತಿದೆ ಫೋಟೋ
Virat Kohli Instagram Story Photo Viral: ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಫೋಟೋ ಒಂದು ಎಲ್ಲೆಡೆ ಭರ್ಜರಿ ವೈರಲ್ ಆಗುತ್ತಿದೆ. ಇದನ್ನು ಕಂಡು ಕೊಹ್ಲಿ ಫ್ಯಾನ್ಸ್ ಕೂಡ ಆಘಾತಕ್ಕೊಳಗಾಗಿದ್ದಾರೆ. ಕೊಹ್ಲಿ ಹಣೆ-ಕೆನ್ನೆ ಮೇಲೆ ಗಾಯಗಳಿವೆ, ಮೂಗಿನ ಮೇಲೆ ಬ್ಯಾಂಡೇಜ್ ಹಾಕಲಾಗಿದೆ.
ಭಾರತದ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ ಇತ್ತೀಚಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋ ಕಂಡು ಅವರ ಅಭಿಮಾನಿಗಳು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಸೋಮವಾರ, ನವೆಂಬರ್ 27 ರಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೊಹ್ಲಿ ಹಾಕಿರುವ ಒಂದು ಫೋಟೋ ಇದಕ್ಕೆಲ್ಲ ಕಾರಣ. ಇದರಲ್ಲಿ ವಿರಾಟ್ ಕೊಹ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಮೂಗಿನ ಮೇಲೆ ಬ್ಯಾಂಡೇಜ್ ಹಾಕಲಾಗಿದೆ. ಹಣೆ ಮತ್ತು ಕೆನ್ನೆಯ ಮೇಲೆ ಗಾಯದ ಗುರುತುಗಳಿವೆ. ಇದನ್ನು ಕಂಡು ಕೊಹ್ಲಿ ಫ್ಯಾನ್ಸ್ ಆಘಾತಕ್ಕೊಳಗಾಗಿದ್ದಾರೆ.
ಆದರೆ, ಫೋಟೋವನ್ನು ಸೂಕ್ಷ್ಮವಾಗಿ ನೋಡಿದ ನಂತರ, ವಿರಾಟ್ ಕೊಹ್ಲಿ ಬಗ್ಗೆ ಚಿಂತಿಸಬೇಕಾಗಿಲ್ಲ. ಕೊಹ್ಲಿಗೆ ಏನೂ ಆಗಿಲ್ಲ, ಸಂಪೂರ್ಣ ಫಿಟ್ ಆಗಿದ್ದಾರೆ. ಇದು ಕೇವಲ ಮೇಕಪ್ ಅಷ್ಟೆ. ಪ್ರತಿಷ್ಠಿತ ಕಂಪನಿ ಜಾಹೀರಾತುವಿಗಾಗಿ ಈ ಫೋಟೋವನ್ನು ಕೊಹ್ಲಿ ಪೋಸ್ಟ್ ಮಾಡಿದ್ದಾರೆ. ಇದು ಪ್ರಚಾರಕ್ಕಾಗಿ ಮಾತ್ರ. ಹಣೆ-ಕೆನ್ನೆ ಮೇಲೆ ಗಾಯ, ಮೂಗಿನ ಮೇಲೆ ಬ್ಯಾಂಡೇಜ್ ಇದ್ದರೂ ಕೊಹ್ಲಿ ಈ ಫೋಟೋದಲ್ಲಿ ನಗುತ್ತಿದ್ದಾರೆ. ಈ ಫೋಟೋವನ್ನು ಪೋಸ್ಟ್ ಮಾಡುವ ಉದ್ದೇಶವನ್ನು ಸಹ ಕೊಹ್ಲಿ ಬರೆದಿದ್ದಾರೆ.
ಕೊಹ್ಲಿ ದಾಖಲೆ ಪುಡಿ ಪುಡಿ: RCB ಸೇರಿದ ತಕ್ಷಣ ಇತಿಹಾಸ ರಚಿಸಿದ ಗ್ರೀನ್
ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಫೋಟೋ:
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡಿರುವ ಕೊಹ್ಲಿ, “ನೀವು ಇನ್ನೊಬ್ಬ ವ್ಯಕ್ತಿಯನ್ನು ನೋಡಬೇಕು” ಎಂದು ಬರೆದಿದ್ದಾರೆ. ಕೊಹ್ಲಿಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಕೂಡ ಮಾಡಿದ್ದಾರೆ.
VIRAT KOHLI Instagram Story’ Is Everything Okay My King 🫣.#ViratKohli #KingKohli pic.twitter.com/ECtLtEAlvp
— ViraT Fan (@RANJIIT999) November 27, 2023
ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಮುರಿದಿದರು. ಅವರು ವಿಶ್ವಕಪ್ 2023 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಸರಣಿಯ ಆಟಗಾರ ಪ್ರಶಸ್ತಿಯನ್ನೂ ಬಾಚಿಕೊಂಡರು. 11 ಪಂದ್ಯಗಳಿಂದ 95.62 ಸರಾಸರಿಯಲ್ಲಿ 765 ರನ್ ಗಳಿಸಿದ ಸಾಧನೆ ಮಾಡಿದರು. ಇವರ ಖಾತೆಯಿಂದ 3 ಶತಕ ಮತ್ತು 6 ಅರ್ಧಶತಕ ಬಂದಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:24 am, Tue, 28 November 23