ಆಸ್ಟ್ರೇಲಿಯಾ-ಇಂಗ್ಲೆಂಡ್ (Australia vs England) ನಡುವಣ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ (Ashes Test) ಸರಣಿಯ 2ನೇ ಪಂದ್ಯವು ಅಡಿಲೇಡ್ನಲ್ಲಿ ಶುರುವಾಗಿದೆ. ಡೇ-ನೈಟ್ ಪಂದ್ಯವಾಗಿರುವುದರಿಂದ 2ನೇ ಟೆಸ್ಟ್ ಪಂದ್ಯವು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅತ್ತ ಮೊದಲ ಟೆಸ್ಟ್ನಲ್ಲಿ ಭರ್ಜರಿ ಜಯ ಸಾಧಿಸಿರುವ ಆಸ್ಟ್ರೇಲಿಯಾ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ಮುಂದುವರೆಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ತಂಡದ ಮೊತ್ತ 4 ರನ್ ಆಗಿದ್ದ ವೇಳೆ ಇಂಗ್ಲೆಂಡ್ ತಂಡವು ಮೊದಲ ವಿಕೆಟ್ ಉರುಳಿಸಿ ಆಸೀಸ್ ಪಡೆಗೆ ಶಾಕ್ ನೀಡಿದ್ದರು.
ಅದರಲ್ಲೂ ಇಂಗ್ಲೆಂಡ್ ಮೊದಲ ವಿಕೆಟ್ ಕಬಳಿಸಿದ್ದು ಪ್ರೇಕ್ಷಕರ ಅಚ್ಚರಿಗೆ ಕಾರಣವಾಗಿತ್ತು. ಏಕೆಂದರೆ ಆಸ್ಟ್ರೇಲಿಯಾ ತಂಡದ ಆರಂಭಿಕರಾದ ಮಾರ್ಕಸ್ ಹ್ಯಾರಿಸ್ ಮತ್ತು ಡೇವಿಡ್ ವಾರ್ನರ್ ಜೋಡಿಯು ಆರಂಭದಲ್ಲೇ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಎಸೆತಗಳನ್ನು ರಕ್ಷಣಾತ್ಮಕವಾಗಿ ಎದುರಿಸಿದ್ದರು. ಇದಾಗ್ಯೂ ಸ್ಟುವರ್ಟ್ ಬ್ರಾಡ್ ಎಸೆದ ಎಂಟನೇ ಓವರ್ ನ ಮೂರನೇ ಎಸೆತದಲ್ಲಿ ಎಡಗೈ ದಾಂಡಿಗ ಮಾರ್ಕಸ್ ಲೆಗ್ ಸೈಡ್ನತ್ತ ಪುಲ್ ಶಾಟ್ ಹೊಡೆದಿದ್ದರು.
ಇತ್ತ ಸ್ಲಿಪ್ನಲ್ಲಿ ಫೀಲ್ಡರ್ ಇದ್ದ ಕಾರಣ ಮಾರ್ಕಸ್ ಹ್ಯಾರಿಸ್ ಕೂಡ ಲೆಗ್ ಸೈಡ್ ಪುಲ್ ಶಾಟ್ ಬೌಂಡರಿಗಿಟ್ಟಿಸಿಕೊಳ್ಳಬಹುದು ಅಂದುಕೊಂಡಿದ್ದರು. ಆದರೆ ಚೆಂಡು ಬ್ಯಾಟ್ ಸವರಿ ವಿಕೆಟ್ ಹಿಂದೆ ಸಾಗುತ್ತಿದ್ದಂತೆ ವಿಕೆಟ್ ಕೀಪರ್ ಜೋಸ್ ಬಟ್ಲರ್ ಬಲಕ್ಕೆ ಫುಲ್ ಲೆಂಗ್ತ್ ಡೈವ್ ಹೊಡೆದು ಅದ್ಭುತವಾಗಿ ಕ್ಯಾಚ್ ಹಿಡಿದರು. ಅತ್ತ ಫೋರ್ ನಿರೀಕ್ಷೆಯಲ್ಲಿದ್ದ ಮಾರ್ಕಸ್ ಹ್ಯಾರಿಸ್ ಶಾಕ್. ಏಕೆಂದರೆ ಅಂತಹದೊಂದು ಸೂಪರ್ ಮ್ಯಾನ್ ಕ್ಯಾಚ್ ಅನ್ನು ಯಾರು ಕೂಡ ನಿರೀಕ್ಷಿಸಿರಲಿಲ್ಲ. ಇದೀಗ ಜೋಸ್ ಬಟ್ಲರ್ ಅವರ ಈ ಅಧ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
INSANE! Buttler pulls in an all-timer behind the stumps! #Ashes pic.twitter.com/v96UgK42ce
— cricket.com.au (@cricketcomau) December 16, 2021
4 ರನ್ಗೆ ಮೊದಲ ವಿಕೆಟ್ ಕಳೆದುಕೊಂಡರೂ ಆ ಬಳಿಕ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಉತ್ತಮ ಸಾಥ್ ನೀಡಿದರು. ಅದರಂತೆ ಎರಡನೇ ವಿಕೆಟ್ ವಾರ್ನರ್ (96) ಹಾಗೂ ಲಾಬುಶೇನ್ (90*) 172 ರನ್ಗಳ ಜೊತೆಯಾಟವಾಡಿದರು. ಇತ್ತೀಚಿನ ಮಾಹಿತಿ ಪ್ರಕಾರ ಆಸ್ಟ್ರೇಲಿಯಾ 75 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 206 ರನ್ಗಳಿಸಿದೆ.
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!
(Jos Buttler turns into Superman, grabs exceptional catch to dismiss Marcus Harris in 2nd Ashes Test)