ಹಬ್ಬಕ್ಕೆಂದು ಪಾಕ್ ಕ್ರಿಕೆಟಿಗ ತಂದಿದ್ದ ದುಬಾರಿ ಮೇಕೆಯನ್ನೇ ಕದ್ದ ಭೂಪರು! ಲಾಹೋರ್ ನಿವಾಸದಿಂದ ಕಳವು

| Updated By: ಪೃಥ್ವಿಶಂಕರ

Updated on: Jul 08, 2022 | 5:12 PM

ಕಮ್ರಾನ್ ಅಕ್ಮಲ್ ತಂದೆ ಆರು ಮೇಕೆಗಳನ್ನು ಮುಂಗಡವಾಗಿ ಖರೀದಿಸಿದ್ದರು. ಆದರೆ ಅದರಲ್ಲಿ ಒಂದು ಮೇಕೆ ಜುಲೈ 7ರ (ಗುರುವಾರ) ರಾತ್ರಿ ಕಳ್ಳತನವಾಗಿದೆ.

ಹಬ್ಬಕ್ಕೆಂದು ಪಾಕ್ ಕ್ರಿಕೆಟಿಗ ತಂದಿದ್ದ ದುಬಾರಿ ಮೇಕೆಯನ್ನೇ ಕದ್ದ ಭೂಪರು! ಲಾಹೋರ್ ನಿವಾಸದಿಂದ ಕಳವು
ಕಮ್ರಾನ್ ಅಕ್ಮಲ್
Follow us on

ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಕಮ್ರಾನ್ ಅಕ್ಮಲ್ (Kamran Akmal) ಮನೆಯಲ್ಲಿ ಕಳ್ಳತನನವಾಗಿದೆ. ಹಬ್ಬದ ಸಂದರ್ಭದಲ್ಲಿ ಬಲಿ ನೀಡಲು ಖರೀದಿಸಿದ ಮೇಕೆಯನ್ನು ಹಬ್ಬದ ಒಂದು ದಿನ ಮುಂಚಿತವಾಗಿ ಕಳವು ಮಾಡಲಾಗಿದೆ. ಬಕ್ರೀದ್ (Bakrid) ಹಬ್ಬವನ್ನು ಪ್ರಪಂಚದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ ಮತ್ತು ಈ ದಿನದಂದು ಅವರು ಮೇಕೆ, ಕುರಿ, ಹಸು ಅಥವಾ ಒಂಟೆ ಇತರೆ ಪ್ರಾಣಿಗಳನ್ನು ಬಲಿಕೊಡುತ್ತಾರೆ. ಇದು ಹಜರತ್ ಇಬ್ರಾಹಿಂ (ಎಎಸ್) ಅವರ ಸುನ್ನತ್ ಅನ್ನು ನಿರ್ವಹಿಸುವ ಮಾರ್ಗವಾಗಿದೆ. ಇದನ್ನು ಜುಲೈ 10 ರಂದು ಭಾನುವಾರ ಆಚರಿಸಲಾಗುತ್ತದ್ದು, ಹಬ್ಬಕ್ಕೆ ಮೂರು ದಿನಗಳ ಮೊದಲು, ಅಕ್ಮಲ್ ಮನೆಯವರು ಮೇಕೆಯನ್ನು ಕಳೆದುಕೊಂಡಿದ್ದಾರೆ.

ಹಬ್ಬದ ದಿನ ಸಮೀಪಿಸುತ್ತಿದ್ದಂತೆ ಬೇಡಿಕೆ ಹೆಚ್ಚಾದಂತೆ ಮುಸ್ಲಿಂ ಕುಟುಂಬಗಳು ಮಾರುಕಟ್ಟೆಗೆ ಭೇಟಿ ನೀಡುವ ಮೂಲಕ ಒಂದು ವಾರ ಮುಂಚಿತವಾಗಿ ಬಲಿ ಪ್ರಾಣಿಗಳನ್ನು ಖರೀದಿಸಲು ಪ್ರಯತ್ನಿಸುತ್ತವೆ. ಅದನ್ನೇ ಗಮನದಲ್ಲಿಟ್ಟುಕೊಂಡು ಕಮ್ರಾನ್ ಅಕ್ಮಲ್ ತಂದೆ ಆರು ಮೇಕೆಗಳನ್ನು ಮುಂಗಡವಾಗಿ ಖರೀದಿಸಿದ್ದರು. ಆದರೆ ಅದರಲ್ಲಿ ಒಂದು ಜುಲೈ 7ರ (ಗುರುವಾರ) ರಾತ್ರಿ ಕಳ್ಳತನವಾಗಿದೆ. ಇದೀಗ ಮೇಕೆ ಕಳ್ಳತನವಾಗಿರುವ ಬಗ್ಗೆ ಕುಟುಂಬಸ್ಥರು ವಾಸವಾಗಿರುವ ಖಾಸಗಿ ಹೌಸಿಂಗ್ ಸೊಸೈಟಿಯ ಭದ್ರತಾ ವಿಭಾಗದವರಿಗೆ ತಿಳಿಸಿರುವುದರಿಂದ ಕಳ್ಳರಿಗಾಗಿ ಹುಡುಕಾಟ ನಡೆದಿದೆ.

ಇದನ್ನೂ ಓದಿ
Retirement: 8 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್..!
ಗಂಗೂಲಿ ಫಾರ್ಮ್ ಕಳೆದುಕೊಂಡರು, ಜನ ನನ್ನ ದೂರಿದರು’; ದಾದಾ- ನಗ್ಮಾ ಭಗ್ನ ಪ್ರೇಮಕಥೆ ಬಗ್ಗೆ ನಿಮಗೆಷ್ಟು ಗೊತ್ತು?
IND VS ENG 2nd T20 Playing 11: ಹಳಬರ ಎಂಟ್ರಿ, ಹೊಸಬರಿಗೆ ಕೋಕ್; 2ನೇ ಟಿ20ಗೆ ಟೀಂ ಇಂಡಿಯಾದಲ್ಲಿ 4 ಬದಲಾವಣೆ?

ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಕಮ್ರಾನ್ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅದರಲ್ಲಿ ಪ್ರಪಂಚದಾದ್ಯಂತ ನಡೆಯುತ್ತಿರುವ ವಿವಿಧ ಕ್ರಿಕೆಟ್ ಪಂದ್ಯಗಳ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಆದಾಗ್ಯೂ ಕಮ್ರಾನ್ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ.

ಕಮ್ರಾನ್ ಪಾಕಿಸ್ತಾನದ ಪರವಾಗಿ 53 ಟೆಸ್ಟ್‌ಗಳಲ್ಲಿ ಆಡಿದ್ದು 30.79 ಸರಾಸರಿಯಲ್ಲಿ 2648 ರನ್ ಗಳಿಸಿದ್ದಾರೆ. ಅವರು ಈ ಮಾದರಿಯಲ್ಲಿ 6 ಶತಕ ಮತ್ತು 12 ಅರ್ಧಶತಕಗಳನ್ನು ಬಾರಿಸಿದ್ದಾರೆ. ಜೊತೆಗೆ 157 ODI ಪಂದ್ಯಗಳನ್ನು ಆಡಿದ್ದು, 26.09 ಸರಾಸರಿಯಲ್ಲಿ 3236 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 5 ಶತಕ ಮತ್ತು 10 ಅರ್ಧಶತಕಗಳು ಸೇರಿವೆ. ಅಲ್ಲದೆ ಕಮ್ರಾನ್ 58 ಟಿ20 ಪಂದ್ಯಗಳಲ್ಲಿ 987 ರನ್ ಗಳಿಸಿದ್ದಾರೆ.