IPL 2022: ಅಂದು RCBಗೆ ಕೈ ಕೊಟ್ಟಿದಕ್ಕೆ ಈ ಸಲ ಯಾರೂ ಖರೀದಿಸಿಲ್ಲ..!

| Updated By: ಝಾಹಿರ್ ಯೂಸುಫ್

Updated on: Feb 16, 2022 | 4:58 PM

ಈ ಸಲ ನಾನು ಹಾಗೂ ಝಂಪಾ ಹರಾಜಾಗಿಲ್ಲ. ಅದರಲ್ಲೂ ಝಂಪಾ ಹರಾಜಾಗದೇ ಉಳಿದಾಗ ಅಚ್ಚರಿಯಾಗಿತ್ತು. ನಿಜ ಹೇಳಬೇಕೆಂದರೆ, ಕಳೆದ ವರ್ಷ ನಾವು (ಐಪಿಎಲ್) ತೊರೆದಾಗ ನಾನು ಅವರೊಂದಿಗೆ ನಡೆಸಿದ ಸಂಭಾಷಣೆ ನನಗೆ ನೆನಪಿದೆ.

IPL 2022: ಅಂದು RCBಗೆ ಕೈ ಕೊಟ್ಟಿದಕ್ಕೆ ಈ ಸಲ ಯಾರೂ ಖರೀದಿಸಿಲ್ಲ..!
Kane Richardson
Follow us on

ಐಪಿಎಲ್ ಮೆಗಾ ಹರಾಜು ಮುಗಿದಿದೆ. ಆದರೆ ಈ ಬಾರಿ ಹರಾಜಿನಲ್ಲಿ ಅನ್​ಸೋಲ್ಡ್ ಆಗಿ ಉಳಿದ ಆಟಗಾರರ ಪಟ್ಟಿಯಲ್ಲಿ ಕೆಲ ಸ್ಟಾರ್ ಆಟಗಾರರಿದ್ದಾರೆ. ಅದರಲ್ಲೂ ಕಳೆದ ಸೀಸನ್​ನಲ್ಲಿ ಆಡಿದ್ದ ಕೆಲ ಆಟಗಾರರ ಖರೀದಿಗೆ ಈ ಬಾರಿ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ವಿದೇಶಿ ಆಟಗಾರರೆಂದರೆ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಝಂಪಾ. ಆಸ್ಟ್ರೇಲಿಯಾದ ಈ ಇಬ್ಬರು ಆಟಗಾರರು ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡದಲ್ಲಿದ್ದರು. ಆದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಅಂದು ಅರ್ಧದಲ್ಲೇ ಆರ್​ಸಿಬಿಗೆ ಕೈಕೊಟ್ಟ ಪರಿಣಾಮ ಇದೀಗ ಈ ಇಬ್ಬರು ಸ್ಟಾರ್ ಆಟಗಾರರು ಹರಾಜಾಗದೇ ಉಳಿದಿದ್ದಾರೆ. ಇದನ್ನು ಖುದ್ದು ಕೇನ್ ರಿಚರ್ಡ್ಸನ್ ಕೂಡ ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ರಿಚರ್ಡ್ಸನ್, ಈ ಸಲ ನಾನು ಹಾಗೂ ಝಂಪಾ ಹರಾಜಾಗಿಲ್ಲ. ಅದರಲ್ಲೂ ಝಂಪಾ ಹರಾಜಾಗದೇ ಉಳಿದಾಗ ಅಚ್ಚರಿಯಾಗಿತ್ತು. ನಿಜ ಹೇಳಬೇಕೆಂದರೆ, ಕಳೆದ ವರ್ಷ ನಾವು (ಐಪಿಎಲ್) ತೊರೆದಾಗ ನಾನು ಅವರೊಂದಿಗೆ ನಡೆಸಿದ ಸಂಭಾಷಣೆ ನನಗೆ ನೆನಪಿದೆ. ನಾನು ಅವನಿಗೆ ಹೇಳಿದ್ದೆ, ಮುಂದೆ ಇದರ ಪರಿಣಾಮ ಎದುರಿಸಬೇಕಾಗಿ ಬರಬಹುದು ಎಂದು. ಆದರೆ ಆ ಸಮಯದಲ್ಲಿ ನಮ್ಮ ಆದ್ಯತೆ ಸುರಕ್ಷತೆಯಾಗಿತ್ತು. ಅದರಂತೆ ನಾವು ಆಸ್ಟ್ರೇಲಿಯಾಕ್ಕೆ ಹಿಂತಿರುಗಿದ್ದೆವು. ಈ ಬಾರಿ ಕೂಡ ನಾವು ಅರ್ಧದಲ್ಲೇ ಟೂರ್ನಿ ತೊರೆದರೆ ಎಂದು ಭಾವಿಸಿ ಈ ಬಾರಿ ಯಾರು ಕೂಡ ಖರೀದಿಸಿಲ್ಲ ಎಂದು ಭಾವಿಸುತ್ತೇನೆ ಎಂದು ರಿಚರ್ಡ್ಸನ್ ತಿಳಿಸಿದ್ದಾರೆ.

‘ಒಂದು ವರ್ಷದ ಹಿಂದೆ ನಾನು ಮಗನ ಜನನದ ಕಾರಣಕ್ಕೆ ಐಪಿಎಲ್ ಆಡಿರಲಿಲ್ಲ. ಹಾಗಾಗಿ ಕಳೆದ ಎರಡು ವರ್ಷಗಳಲ್ಲಿ ನನ್ನ ಇಮೇಜ್‌ ನನಗೆ ಆಟವಾಡಲು ಬಾರದಂತಾಯಿತು. ಆದರೆ ನಾನು ಹಾಗಲ್ಲ. ನಾನು ಹೆಚ್ಚು ಹೆಚ್ಚು ಕ್ರಿಕೆಟ್ ಆಡಲು ಬಯಸುತ್ತೇನೆ. ಆದರೆ ಕಳೆದೆರಡು ಐಪಿಎಲ್‌ಗಳಲ್ಲಿ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ರಿಚರ್ಡ್ಸನ್ ಹೇಳಿದರು. ಆಸ್ಟ್ರೇಲಿಯದ ಸ್ಪಿನ್ನರ್ ಆಶ್ಟನ್ ಅಗರ್ ಕೂಡ ಝಂಪಾ ಹರಾಜಾಗದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ ಇದು ಅವನ ದುರದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಝಂಪಾ-ರಿಚರ್ಡ್ಸನ್ ಅವರ ಐಪಿಎಲ್ ವೃತ್ತಿಜೀವನ:
ಆಡಮ್ ಝಂಪಾ ಐಪಿಎಲ್ ನಲ್ಲಿ ಇದುವರೆಗೆ 14 ಪಂದ್ಯಗಳನ್ನು ಆಡಿದ್ದು, 21 ವಿಕೆಟ್ ಪಡೆದಿದ್ದಾರೆ. ಈ ಹಿಂದೆ ರೈಸಿಂಗ್ ಪುಣೆ ಸೂಪರ್‌ಜೈಂಟ್ ಮತ್ತು ಆರ್‌ಸಿಬಿಯಂತಹ ತಂಡಗಳ ಭಾಗವಾಗಿದ್ದಾರೆ. ಹಾಗೆಯೇ ಕೇನ್ ರಿಚರ್ಡ್ಸನ್ 15 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 19 ವಿಕೆಟ್​ಗಳನ್ನು ಪಡೆದಿದ್ದಾರೆ. ಕೇನ್ ರಿಚರ್ಡ್ಸನ್ ಪುಣೆ ವಾರಿಯರ್ಸ್, ರಾಜಸ್ಥಾನ ರಾಯಲ್ಸ್ ಮತ್ತು RCB ತಂಡಗಳ ಭಾಗವಾಗಿದ್ದರು.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Kane Richardson reveal why he and Adam Zampa snubbed in IPL 2022 auction)