ಗುರುವಾರ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ (IPL 2022) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (DC vs SRH) ತಂಡ ದೊಡ್ಡ ಮೊತ್ತ ಚೇಸ್ ಮಾಡಲು ಸಾಧ್ಯವಾಗದೆ ಸೋಲು ಕಂಡಿತು. ಡೆಲ್ಲಿ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ (92*ರನ್, 58 ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ರೋವ್ಮನ್ ಪೋವೆಲ್ (67*ರನ್, 35 ಎಸೆತ, 3 ಬೌಂಡರಿ,6 ಸಿಕ್ಸರ್) ಜೋಡಿಯ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 207 ರನ್ ಕಲೆಹಾಕಿತು. ಪ್ರತಿಯಾಗಿ ಸನ್‌ರೈಸರ್ಸ್ ತಂಡ ನಿಕೋಲಸ್ ಪೂರನ್ (62ರನ್, 34 ಎಸೆತ, 2 ಬೌಂಡರಿ, 6 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 8 ವಿಕೆಟ್‌ಗೆ 186 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲಿಗೆ ಶರಣಾಯಿತು. ಇದೀಗ ಆಡಿದ 10 ಪಂದ್ಯಗಳಲ್ಲಿ ಎಸ್ಆರ್ಹೆಚ್ ಐದು ಗೆಲುವು ಐದು ಸೋಲು ಕಂಡಿದ್ದು ಮುಂದಿನ ಹಾದಿ ಕಠಿಣವಾಗಿದೆ. ಪಂದ್ಯ ಮುಗಿದ ಬಳಿಕ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಮಾತನಾಡಿದ್ದು ಏನು ಹೇಳಿದರು ಕೇಳಿ.
“ಡೆಲ್ಲಿ ತಂಡದ ಮೊತ್ತ ಅದ್ಭುತವಾಗಿತ್ತು. ಆದರೆ, ನಮ್ಮ ಬ್ಯಾಟಿಂಗ್ ಶಕ್ತಿಯಿಂದ ಆ ಮೊತ್ತವನ್ನು ಚೇಸ್ ಮಾಡಬಹುದು ಎಂದು ಬಂದಿದ್ದೆ. ಡೇವಿಡ್ ವಾರ್ನರ್ ಹಾಗೂ ರೋವ್ಮನ್ ಪೋವೆಲ್ ಅವರ ಆಟ ಅತ್ಯುತ್ತಮವಾಗಿತ್ತು. ಈ ಪಂದ್ಯದಿಂದ ಎಲ್ಲರೂ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ. ಉಮ್ರಾನ್ ಮಲಿಕ್ ಕೂಡ ಇದರಿಂದ ಸಾಕಷ್ಟು ವಿಚಾರಗಳಲ್ಲಿ ಕಲಿಯುತ್ತಿದ್ದಾರೆ. ಈರೀತಿಯ ಪಂದ್ಯಗಳಲ್ಲಿ ಎದುರಾಳಿಯ ತಂಡದಿಂದ ಅನೇಕ ವಿಚಾರಗಳಲ್ಲಿ ತಿಳಿದುಕೊಳ್ಳಲಾಗುತ್ತದೆ. ನಾವು ಎಲ್ಲ ವಿಷಯಗಳನ್ನು ಒಟ್ಟಾಗಿ ನೋಡಿದರೆ ಸಮಸ್ಯೆಯನ್ನು ಬಗೆಹರಿಸಬಹುದು. ಡೆಲ್ಲಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಶಕ್ತಿಯಿದೆ. ನಮ್ಮ ತಂಡದ ಪರ ಪೂರನ್ ಮತ್ತು ಮರ್ಕ್ರಮ್ ಉತ್ತಮ ಆಟವಾಡಿದರು,” ಎಂದು ಹೇಳಿದ್ದಾರೆ.
David Warner: ಅಜೇಯ 92 ರನ್: ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್ಗೆ ಗೇಲ್ ದಾಖಲೆ ಉಡೀಸ್
“ನಾನು ಫಾರ್ಮ್ಗೆ ಮರಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೇನೆ. ತಂಡಕ್ಕೆ ನನ್ನಿಂದ ಏನು ಅಗತ್ಯವೊ ಅದನ್ನು ನೀಡಲು ಕೆಲಸ ಮಾಡುತ್ತಿದ್ದೇನೆ. ತಾಳ್ಮೆಯಿಂದ ಇದ್ದು ನನ್ನ ನೈಜ್ಯ ಆಟ ನಾನು ಆಡಬೇಕಿದೆ. ಪ್ರತಿ ತಂಡ ಕೂಡ ಬಲಿಷ್ಠವಾಗಿದೆ. ತಂಡ ಮುಂದಿನ ಹಂತಕ್ಕೆ ಹೋಗಲು ನಾವೇನು ಮಾಡಬೇಕು, ನಮ್ಮಿಂದ ಏನು ಕೊಡುಗೆ ಬರಬೇಕು ಎಂದು ಯೋಚಿಸಬೇಕಿದೆ,” ಎಂಬುದು ಕೇನ್ ವಿಲಿಯಮ್ಸನ್ ಮಾತು.
ಇನ್ನು ಗೆದ್ದ ತಂಡದ ನಾಯಕ ರಿಷಭ್ ಪಂತ್ ಮಾತನಾಡಿ, “ತಪ್ಪುಗಳನ್ನು ತಿದ್ದಿ ಸುಧಾರಿಸಲು ಯಾವಾಗಲು ಕೊಂಚ ಸಮಯ ಬೇಕಾಗುತ್ತದೆ. ಇದು ನಮ್ಮ ಬ್ಯಾಟಿಂಗ್ ಶಕ್ತಿಗೆ ಹೇಳಿ ಮಾಡಿಸಿದ ಪಂದ್ಯವಾಗಿತ್ತು. ನಾನು ತಾಳ್ಮೆಯಿಂದ ಇದ್ದೆ. ಈರೀತಿಯ ಹೈ ಸ್ಕೋರ್ ಪಂದ್ಯದಲ್ಲಿ ಚೇಸ್ ಮಾಡುವಾಗ ಓವರ್ಗೆ 10-12 ರನ್ಗಳ ಅವಶ್ಯಕತೆಯಿರುತ್ತದೆ. 20 ಓವರ್ ವರೆಗೆ ಅದೇರೀತಿ ಬ್ಯಾಟಿಂಗ್ ಮಾಡುವುದು ಕಷ್ಟ. ನಾನು ಬೌಲರ್ಗಳಿಗೆ ತಾಳ್ಮೆಯಿಂದ ಇರಲು ಸೂಚಿಸಿದೆ. ಇದು ವಾರ್ನರ್ ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿತ್ತು. ಪೋವೆಲ್ ನಮಗೆ ಸಿಕ್ಕಿರವುದು ಅದೃಷ್ಟ. ನಾವು ಒಂದು ಪಂದ್ಯದ ಬಗ್ಗೆ ಮಾತ್ರ ಗಮನ ಹರಿಸಿ ಶೇ. 100 ರಷ್ಟು ನೀಡಲು ಬಯಸುತ್ತೇವೆ. ಈ ಗೆಲುವು ಉತ್ತಮ ಮತ್ತು ನಮಗೆ ಅಗತ್ಯವಿತ್ತು,” ಎಂದು ಪಂತ್ ಹೇಳಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Fri, 6 May 22