DC vs SRH, IPL 2022 : ಎಸ್​ಆರ್​ಹೆಚ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:May 05, 2022 | 11:37 PM

Delhi Capitals vs Sunrisers Hyderabad: ಟಾಸ್ ಗೆದ್ದ ಎಸ್​ಆರ್​ಹೆಚ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು.

DC vs SRH, IPL 2022 : ಎಸ್​ಆರ್​ಹೆಚ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ
DC vs SRH Live score IPL 2022

ಇಂಡಿಯನ್ ಪ್ರೀಮಿಯರ್ ಲೀಗ್​ನ 50ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಎಸ್​ಆರ್​ಹೆಚ್ ಬೌಲಿಂಗ್ ಆಯ್ದುಕೊಂಡಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಪರ ಅಬ್ಬರಿಸಿದ ಡೇವಿಡ್ ವಾರ್ನರ್ ಹಾಗೂ ರೋವ್​ಮನ್ ಪೊವೆಲ್ ಮೊದಲ ಇನಿಂಗ್ಸ್​ನಲ್ಲಿ ಹಿಡಿತ ಸಾಧಿಸಿದ್ದರು. ಅದರಂತೆ 58 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 12 ಬೌಂಡರಿಯೊಂದಿಗೆ ವಾರ್ನರ್ ಅಜೇಯ 92 ರನ್ ಬಾರಿಸಿದರೆ, ಪೊವೆಲ್ 35 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 3 ಬೌಂಡರಿಯೊಂದಿಗೆ 67 ರನ್​ ಸಿಡಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್​ ಕಲೆಹಾಕಿತು. 208 ರನ್​ಗಳ ಟಾರ್ಗೆಟ್ ಪಡೆದ ಎಸ್​ಆರ್​ಹೆಚ್ ಪರ ನಿಕೋಲಸ್ ಪೂರನ್ 34 ಎಸೆತಗಳಲ್ಲಿ 6 ಸಿಕ್ಸ್​ನೊಂದಿಗೆ 62 ರನ್ ಬಾರಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಅಂತಿಮವಾಗಿ ಎಸ್​ಆರ್​ಹೆಚ್​ ತಂಡವು 8 ವಿಕೆಟ್ ನಷ್ಟಕ್ಕೆ 186 ರನ್​ಗಳಿಸುವ ಮೂಲಕ 21 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್(ನಾಯಕ), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ರಿಪಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಕ್ ನೋಕಿಯಾ

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ , ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲಿಕ್

LIVE NEWS & UPDATES

The liveblog has ended.
  • 05 May 2022 11:34 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ 21 ರನ್​ಗಳ ಭರ್ಜರಿ ಜಯ

    DC 207/3 (20)

    SRH 186/8 (20)

  • 05 May 2022 11:31 PM (IST)

    ತ್ಯಾಗಿ ಔಟ್

    ಕುಲ್ದೀಪ್ ಯಾದವ್ ಎಸೆತದಲ್ಲಿ ಕಾರ್ತಿಕ್ ತ್ಯಾಗಿ ಬೌಲ್ಡ್

    DC 207/3 (20)

    SRH 181/8 (19.1)

     

  • 05 May 2022 11:24 PM (IST)

    ಪೂರನ್ ಔಟ್

    34 ಎಸೆತಗಳಲ್ಲಿ 62 ರನ್​ಗಳಿಸಿ ನಿಕೋಲಸ್ ಪೂರನ್ ಔಟ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಪೂರನ್

    SRH 165/7 (17.5)

      

  • 05 May 2022 11:21 PM (IST)

    ಪೂರನ್ ಪವರ್

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೂರನ್

    SRH 165/6 (17.4)

      

  • 05 May 2022 11:18 PM (IST)

    18 ಎಸೆತಗಳಲ್ಲಿ 55 ರನ್​ಗಳ ಅವಶ್ಯಕತೆ

    SRH 153/6 (17)

      

  • 05 May 2022 11:17 PM (IST)

    6ನೇ ವಿಕೆಟ್ ಪತನ

    ಖಲೀಲ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಅಬಾಟ್

    SRH 153/6 (16.4)

      

  • 05 May 2022 11:14 PM (IST)

    ಅರ್ಧಶತಕ ಪೂರೈಸಿದ ಪೂರನ್

    29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಿಕೋಲಸ್ ಪೂರನ್

    SRH 147/5 (16.2)

      

  • 05 May 2022 11:07 PM (IST)

    ರಾಕೆಟ್ ಹಿಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ರಾಕೆಟ್ ಹಿಟ್ ಸಿಕ್ಸ್​ ಸಿಡಿಸಿದ ಪೂರನ್

    SRH 137/5 (15.2)

      

  • 05 May 2022 11:03 PM (IST)

    15 ಓವರ್ ಮುಕ್ತಾಯ

    SRH 134/5 (15)

      

    30 ಎಸೆತಗಳಲ್ಲಿ 74 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಪೂರನ್-ಸೀನ್ ಅಬಾಟ್ ಬ್ಯಾಟಿಂಗ್

  • 05 May 2022 11:02 PM (IST)

    5 ವಿಕೆಟ್ ಪತನ

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಶಶಾಂಕ್ ಸಿಂಗ್ (10)

    SRH 134/5 (14.5)

      

  • 05 May 2022 10:50 PM (IST)

    ಪೂರನ್ ಪವರ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೂರನ್

    SRH 107/4 (13.1)

      

  • 05 May 2022 10:47 PM (IST)

    ಮಾರ್ಕ್ರಾಮ್ ಔಟ್

    ಖಲೀಲ್ ಅಹ್ಮದ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಐಡನ್ ಮಾರ್ಕ್ರಾಮ್ (42)

    SRH 97/4 (12.5)

      

  • 05 May 2022 10:42 PM (IST)

    ಪೂರನ್ ಫೋರ್

    ಖಲೀಲ್ ಅಹ್ಮದ್ ಎಸೆತದಲ್ಲಿ ಲೆಗ್​ ಸೈಡ್​ನತ್ತ ಫೋರ್ ಬಾರಿಸಿದ ಪೂರನ್

    SRH 94/3 (12.1)

      

  • 05 May 2022 10:39 PM (IST)

    ಐಡನ್ ಹಿಟ್

    ಕುಲ್ದೀಪ್ ಯಾದವ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸ್ ಸಿಡಿಸಿದ ಐಡನ್ ಮಾರ್ಕ್ರಾಮ್

    SRH 90/3 (12)

      

  • 05 May 2022 10:35 PM (IST)

    ಮತ್ತೊಂದು ಬೌಂಡರಿ

    ಮಿಚೆಲ್ ಮಾರ್ಷ್ ಓವರ್​ನಲ್ಲಿ ಒಟ್ಟು 3 ಫೋರ್ ಬಾರಿಸಿದ ಐಡನ್ ಮಾರ್ಕ್ರಾಮ್

    SRH 77/3 (11)

      

  • 05 May 2022 10:33 PM (IST)

    ಮಾರ್ಕ್ರಾಮ್ ಮಾರ್ಕ್​

    ಮಿಚೆಲ್ ಮಾರ್ಷ್ ಎಸೆತದಲ್ಲಿ ಆಫ್​ಸೈಡ್​ನತ್ತ ಬೌಂಡರಿ ಬಾರಿಸಿದ ಮಾರ್ಕ್ರಾಮ್

    SRH 69/3 (10.3)

     

  • 05 May 2022 10:28 PM (IST)

    ಪೂರನ್ ಪವರ್

    ಕುಲ್ದೀಪ್ ಯಾದವ್ ಎಸೆತದಲ್ಲಿ ಆಕರ್ಷಕ ಸಿಕ್ಸ್ ಸಿಡಿಸಿದ ಪೂರನ್

    SRH 62/3 (9.5)

     

  • 05 May 2022 10:26 PM (IST)

    ಭರ್ಜರಿ ಸಿಕ್ಸ್

    ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಾರ್ಕ್ರಾಮ್

    SRH 55/3 (9.2)

     

  • 05 May 2022 10:25 PM (IST)

    9 ಓವರ್ ಮುಕ್ತಾಯ

    SRH 48/3 (9)

     

    ಕ್ರೀಸ್​ನಲ್ಲಿ ಐಡನ್ ಮಾರ್ಕ್ರಾಮ್ ಹಾಗೂ ನಿಕೋಲಸ್ ಪೂರನ್ ಬ್ಯಾಟಿಂಗ್

  • 05 May 2022 10:14 PM (IST)

    ವೆಲ್ಕಂ ಬೌಂಡರಿ

    ಕುಲ್ದೀಪ್ ಯಾದವ್ ಎಸೆತದಲ್ಲಿ ಬೌಂಡರಿ ಬಾರಿಸಿದ ಐಡನ್ ಮಾರ್ಕ್ರಾಮ್

    SRH 42/3 (7.3)

     

  • 05 May 2022 10:12 PM (IST)

    3ನೇ ವಿಕೆಟ್ ಪತನ

    ಮಿಚೆಲ್ ಮಾರ್ಷ್ ಎಸೆತದಲ್ಲಿ ಶಾರ್ದೂಲ್ ಠಾಕೂರ್​ಗೆ ಕ್ಯಾಚ್ ನೀಡಿದ ರಾಹುಲ್ ತ್ರಿಪಾಠಿ (22)

    SRH 37/3 (7)

     

  • 05 May 2022 10:05 PM (IST)

    ವೆಲ್ಕಂ ಬೌಂಡರಿ

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ರಾಹುಲ್ ತ್ರಿಪಾಠಿ

    SRH 34/2 (5.5)

     

  • 05 May 2022 09:59 PM (IST)

    ವಿಲಿಯಮ್ಸನ್ ಔಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಅನ್ರಿಕ್ ನೋಕಿಯಾ (5)

    SRH 24/2 (4.2)

     

  • 05 May 2022 09:53 PM (IST)

    ತ್ರಿಪಾಠಿ ಸಿಕ್ಸ್

    ಖಲೀಲ್ ಅಹ್ಮದ್ ಎಸೆತದಲ್ಲಿ ಆನ್​ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಾಹುಲ್ ತ್ರಿಪಾಠಿ

    SRH 22/1 (3.3)

     

  • 05 May 2022 09:50 PM (IST)

    3 ಓವರ್ ಮುಕ್ತಾಯ

    SRH 16/1 (3)

     

    ಕ್ರೀಸ್​ನಲ್ಲಿ ಕೇನ್ ವಿಲಿಯಮ್ಸನ್-ರಾಹುಲ್ ತ್ರಿಪಾಠಿ ಬ್ಯಾಟಿಂಗ್

  • 05 May 2022 09:44 PM (IST)

    ಎಸ್​ಆರ್​ಹೆಚ್​ ಮೊದಲ ವಿಕೆಟ್ ಪತನ

    ಖಲೀಲ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಅಭಿಷೇಕ್ ಶರ್ಮಾ

    SRH 9/1 (1.4)

     

  • 05 May 2022 09:30 PM (IST)

    ಟಾರ್ಗೆಟ್- 208

  • 05 May 2022 09:22 PM (IST)

    ಡೇವಿಡ್ ವಾರ್ನರ್ (92), ರೋವ್​ಮನ್ ಪೊವೆಲ್ (67)

  • 05 May 2022 09:19 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಅಂತ್ಯ

    DC 207/3 (20)

     

  • 05 May 2022 09:17 PM (IST)

    ಮತ್ತೊಂದು ಬೌಂಡರಿ

    ಮಲಿಕ್ ಎಸೆತದಲ್ಲಿ ಬ್ಯಾಟ್ ಎಡ್ಜ್​…ಪೊವೆಲ್​ ಬ್ಯಾಟ್​ನಿಂದ ಮತ್ತೊಂದು ಫೋರ್

    DC 198/3 (19.3)

     

  • 05 May 2022 09:16 PM (IST)

    ಭರ್ಜರಿ ಸಿಕ್ಸ್-ಅರ್ಧಶತಕ

    ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೊವೆಲ್

    DC 194/3 (19.1)

     

  • 05 May 2022 09:12 PM (IST)

    ವಾರ್ನರ್ ಅಬ್ಬರ

    ಭುವಿ ಓವರ್​ನಲ್ಲಿ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್

    DC 184/3 (18.4)

     

  • 05 May 2022 09:08 PM (IST)

    ಪೊವೆಲ್ ಪವರ್

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿ ರೋವ್​ಮನ್ ಪೊವೆಲ್

    DC 174/3 (17.5)

      

  • 05 May 2022 09:02 PM (IST)

    ವಾರ್ನರ್ ರಾಕೆಟ್ ಹಿಟ್

    ಅಬಾಟ್ ಎಸೆತದಲ್ಲಿ ಭರ್ಜರಿ ಫೋರ್ ಬಾರಿಸಿದ ಡೇವಿಡ್ ವಾರ್ನರ್

    DC 165/3 (16.5)

      

  • 05 May 2022 09:00 PM (IST)

    ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಅಬಾಟ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಪೊವೆಲ್

    DC 160/3 (16.3)

      

  • 05 May 2022 09:00 PM (IST)

    ಭರ್ಜರಿ ಸಿಕ್ಸ್

    ಸೀನ್ ಅಬಾಟ್ ಎಸೆತದಲ್ಲಿ 104 ಮೀಟರ್ ದೂರದ ಸಿಕ್ಸ್​ ಸಿಡಿಸಿದ ಪೊವೆಲ್

    DC 154/3 (16.2)

  • 05 May 2022 08:53 PM (IST)

    ಪೊವೆಲ್ ಪವರ್

    ಭುವನೇಶ್ವರ್ ಕುಮಾರ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೊವೆಲ್

    DC 146/3 (15.4)

     

  • 05 May 2022 08:49 PM (IST)

    15 ಓವರ್ ಮುಕ್ತಾಯ

    DC 137/3 (15)

     

  • 05 May 2022 08:44 PM (IST)

    ವಾರ್ನರ್ ಹಿಟ್

    ಅಬಾಟ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ವಾರ್ನರ್

    DC 135/3 (14)

     

  • 05 May 2022 08:40 PM (IST)

    13 ಓವರ್ ಮುಕ್ತಾಯ

    DC 123/3 (13)

     

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್-ರೋವ್​ಮನ್ ಪೊವೆಲ್ ಬ್ಯಾಟಿಂಗ್

  • 05 May 2022 08:39 PM (IST)

    ಡೇಂಜರಸ್ ಡೇವಿಡ್

    ತ್ಯಾಗಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್

    DC 123/3 (13)

     

  • 05 May 2022 08:30 PM (IST)

    ಅರ್ಧಶತಕ ಬಾರಿಸಿದ ಡೇವಿಡ್ ವಾರ್ನರ್

    ಮಲಿಕ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾರ್ನರ್

  • 05 May 2022 08:29 PM (IST)

    ಪೊವೆಲ್ ಪವರ್

    ಶ್ರೇಯಸ್ ಗೋಪಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರೋವ್​ಮನ್ ಪೊವೆಲ್

    DC 101/3 (11)

     

  • 05 May 2022 08:22 PM (IST)

    ವಾರ್ನರ್ ಅಬ್ಬರ

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಡೇವಿಡ್ ವಾರ್ನರ್

    DC 89/3 (9.3)

      

  • 05 May 2022 08:19 PM (IST)

    ಪಂತ್ ಔಟ್

    16 ಎಸೆತಗಳಲ್ಲಿ 26 ರನ್ ಬಾರಿಸಿ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಬೌಲ್ಡ್ ಆದ ರಿಷಭ್ ಪಂತ್.

    ಔಟಾಗುವ ಮುನ್ನ 4 ಎಸೆತದಲ್ಲಿ 3 ಸಿಕ್ಸ್ ಒಂದು ಫೋರ್ ಬಾರಿಸಿದ್ದ ಪಂತ್…ಆ ಬಳಿಕ ಬೌಲ್ಡ್ ಆಗಿ ಹೊರನಡೆದ ರಿಷಭ್ ಪಂತ್

    DC 85/3 (9)

      

  • 05 May 2022 08:17 PM (IST)

    ಮತ್ತೊಂದು ಫೋರ್

    ಶ್ರೇಯಸ್ ಗೋಪಾಲ್ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಬಳಿಕ ಫೋರ್ ಬಾರಿಸಿ ರಿಷಭ್ ಪಂತ್

  • 05 May 2022 08:17 PM (IST)

    ಹ್ಯಾಟಿಕ್ ಸಿಕ್ಸ್

    ಶ್ರೇಯಸ್ ಗೋಪಾಲ್ ಓವರ್​ನಲ್ಲಿ ಹ್ಯಾಟ್ರಿಕ್​ ಸಿಕ್ಸ್ ಸಿಡಿಸಿದ ರಿಷಭ್ ಪಂತ್

    DC 85/2 (8.5)

      

  • 05 May 2022 08:16 PM (IST)

    ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಶ್ರೇಯಸ್ ಗೋಪಾಲ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್​ ಸಿಕ್ಸ್ ಸಿಡಿಸಿದ ರಿಷಭ್ ಪಂತ್

    DC 75/2 (8.3)

      

  • 05 May 2022 08:15 PM (IST)

    ವಾಟ್ ಎ ಶಾಟ್

    ಶ್ರೇಯಸ್ ಗೋಪಾಲ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ರಿಷಭ್ ಪಂತ್

    DC 69/2 (8.2)

      

  • 05 May 2022 08:10 PM (IST)

    ಭರ್ಜರಿ ಸಿಕ್ಸ್

    ಐಡನ್ ಮಾರ್ಕ್ರಾಮ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್

    DC 61/2 (7.5)

      

  • 05 May 2022 08:02 PM (IST)

    ಪವರ್​ಪ್ಲೇ ಮುಕ್ತಾಯ

    DC 50/2 (6)

      

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್-ರಿಷಭ್ ಪಂತ್ ಬ್ಯಾಟಿಂಗ್

  • 05 May 2022 08:01 PM (IST)

    ಡೇವಿಡ್-ಹಿಟ್

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್

    DC 49/2 (5.4)

      

  • 05 May 2022 07:52 PM (IST)

    ಡೆಲ್ಲಿ ತಂಡದ 2ನೇ ವಿಕೆಟ್ ಪತನ

    ಸೀನ್ ಅಬಾಟ್ ಎಸೆತದಲ್ಲಿ ಬೌಲರ್​ಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಮಿಚೆಲ್ ಮಾರ್ಷ್ (10)

    DC 37/2 (4.2)

      

  • 05 May 2022 07:50 PM (IST)

    21 ರನ್

    ಉಮ್ರಾನ್ ಮಲಿಕ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್

    ಈ ಓವರ್​ನಲ್ಲಿ ಮೂರು ಫೋರ್ ಒಂದು ಸಿಕ್ಸ್​ ಸೇರಿದಂತೆ ಒಟ್ಟು 21 ರನ್​ ಕಲೆಹಾಕಿದ ಡೆಲ್ಲಿ ಬ್ಯಾಟ್ಸ್​ಮನ್​ಗಳು

    DC 33/1 (4)

      

  • 05 May 2022 07:48 PM (IST)

    ವಾರ್ನರ್ ಅಬ್ಬರ

    ಉಮ್ರಾನ್ ಮಲಿಕ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್

    DC 27/1 (3.4)

      

  • 05 May 2022 07:47 PM (IST)

    ವಾರ್ನರ್ ಹಿಟ್​

    ಮಲಿಕ್ ಎಸೆತವನ್ನು ಭರ್ಜರಿಯಾಗಿ ಲೆಗ್​ ಸೈಡ್​ನತ್ತ ಬಾರಿಸಿದ ವಾರ್ನರ್…ಫೋರ್

    DC 23/1 (3.3)

      

  • 05 May 2022 07:46 PM (IST)

    ವೈಡ್+ಫೋರ್

    ವೈಡ್ ಎಸೆದ ವೇಗಿ ಉಮ್ರಾನ್ ಮಲಿಕ್…ಕೀಪರ್​ನ ವಂಚಿಸಿ ಚೆಂಡು ಬೌಂಡರಿಗೆ…ಫೋರ್

  • 05 May 2022 07:40 PM (IST)

    2 ಓವರ್ ಮುಕ್ತಾಯ

    DC 11/1 (2)

      

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್-ಮಿಚೆಲ್ ಮಾರ್ಷ್ ಬ್ಯಾಟಿಂಗ್

  • 05 May 2022 07:37 PM (IST)

    ಭರ್ಜರಿ ಶಾಟ್

    ಅಬಾಟ್ ಎಸೆತದಲ್ಲಿ ಲೆಗ್​ ಸೈಡ್​​ನತ್ತ ಭರ್ಜರಿ ಬೌಂಡರಿ ಬಾರಿಸಿ ಖಾತೆ ತೆರೆದ ಮಿಚೆಲ್ ಮಾರ್ಷ್

  • 05 May 2022 07:36 PM (IST)

    ಮೊದಲ ಬೌಂಡರಿ

    ಸೀನ್ ಅಬಾಟ್ ಎಸೆತದಲ್ಲಿ ಮೊದಲ ಬೌಂಡರಿ ಬಾರಿಸಿದ ಡೇವಿಡ್ ವಾರ್ನರ್

  • 05 May 2022 07:34 PM (IST)

    ಎಸ್​ಆರ್​ಹೆಚ್​ಗೆ ಮೊದಲ ಯಶಸ್ಸು

    ಮೊದಲ ಓವರ್​ನಲ್ಲಿ ಮೊದಲ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್

    ವಿಕೆಟ್ ಕೀಪರ್​ಗೆ ಸುಲಭ ಕ್ಯಾಚ್ ನೀಡಿ ಹೊರನಡೆದ ಮಂದೀಪ್ ಸಿಂಗ್ (0)

    DC 0/1 (0.5)

  • 05 May 2022 07:12 PM (IST)

    ಎಸ್​ಆರ್​ಹೆಚ್ ಪ್ಲೇಯಿಂಗ್ 11

    ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ , ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲಿಕ್

  • 05 May 2022 07:11 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇಯಿಂಗ್ 11

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್(ನಾಯಕ), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ರಿಪಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಕ್ ನೋಕಿಯಾ

  • 05 May 2022 07:07 PM (IST)

    ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮನ್‌ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್(ನಾಯಕ), ಲಲಿತ್ ಯಾದವ್, ರೋವ್‌ಮನ್ ಪೊವೆಲ್, ರಿಪಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಕ್ ನೋಕಿಯಾ

    ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ , ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲಿಕ್

  • 05 May 2022 07:05 PM (IST)

    ಟಾಸ್ ವಿಡಿಯೋ

  • 05 May 2022 07:04 PM (IST)

    ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 4 ಬದಲಾವಣೆ

    ಮಂದೀಪ್ ಸಿಂಗ್, ರಿಪಲ್ ಪಟೇಲ್, ಅನ್ರಿಕ್ ನೋಕಿಯಾ ಹಾಗೂ ಖಲೀಲ್ ಅಹ್ಮದ್ ಇಂದು ಆಡಲಿದ್ದಾರೆ.

  • 05 May 2022 07:03 PM (IST)

    ಎಸ್​ಆರ್​ಹೆಚ್ ತಂಡದಲ್ಲಿ ಮೂರು ಬದಲಾವಣೆ

    ಎಸ್​ಆರ್​ಹೆಚ್ ಪರ ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಹಾಗೂ ಸೀನ್ ಅಬಾಟ್ ಪದಾರ್ಪಣೆ ಮಾಡಲಿದ್ದಾರೆ.

  • 05 May 2022 07:01 PM (IST)

    ಟಾಸ್ ಗೆದ್ದ ಎಸ್​ಆರ್​ಹೆಚ್​

    ಟಾಸ್ ಗೆದ್ದ ಎಸ್​ಆರ್​ಹೆಚ್​ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 05 May 2022 06:04 PM (IST)

    ಸನ್​ರೈಸರ್ಸ್​ ಹೈದರಾಬಾದ್ ತಂಡ ಹೀಗಿದೆ

    ಸನ್​ರೈಸರ್ಸ್​ ಹೈದರಾಬಾದ್ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ) , ನಿಕೋಲಸ್ ಪೂರನ್, ಅಭಿಷೇಕ್ ಶರ್ಮಾ , ರಾಹುಲ್ ತ್ರಿಪಾಠಿ , ಏಡೆನ್ ಮಾರ್ಕ್ರಾಮ್ , ಶಶಾಂಕ್ ಸಿಂಗ್ , ವಾಷಿಂಗ್ಟನ್ ಸುಂದರ್ , ಮಾರ್ಕೊ ಯಾನ್ಸೆನ್ , ಭುವನೇಶ್ವರ್ ಕುಮಾರ್ , ಉಮ್ರಾನ್ ಮಲಿಕ್ , ಟಿ ನಟರಾಜನ್ , ಸೀನ್ ಅಬಾಟ್ , ರವಿಕುಮಾರ್ ಸಮರ್ಥ್ , ಶ್ರೇಯಸ್ ಗೋಪಾಲ್, ಗ್ಲೆನ್ ಫಿಲಿಪ್ಸ್ , ವಿಷ್ಣು ವಿನೋದ್ , ಪ್ರಿಯಂ ಗಾರ್ಗ್ , ಕಾರ್ತಿಕ್ ತ್ಯಾಗಿ , ರೊಮಾರಿಯೋ ಶೆಫರ್ಡ್ ,ಫಜಲ್ಹಕ್ ಫಾರೂಕಿ , ಅಬ್ದುಲ್ ಸಮದ್ , ಸೌರಭ್ ದುಬೆ

  • 05 May 2022 06:04 PM (IST)

    ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ

    ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ: ರಿಷಭ್ ಪಂತ್ (ನಾಯಕ) , ಪೃಥ್ವಿ ಶಾ , ಡೇವಿಡ್ ವಾರ್ನರ್ , ಮಿಚೆಲ್ ಮಾರ್ಷ್ , ಲಲಿತ್ ಯಾದವ್ , ರೋವ್ಮನ್ ಪೊವೆಲ್ , ಅಕ್ಷರ್ ಪಟೇಲ್ , ಶಾರ್ದೂಲ್ ಠಾಕೂರ್ , ಕುಲದೀಪ್ ಯಾದವ್ , ಮುಸ್ತಾಫಿಜುರ್ ರೆಹಮಾನ್ , ಚೇತನ್ ಸಕರಿಯಾ , ಮನ್ದೀಪ್ ಸಿಂಗ್ , ಸರ್ಫರಾಜ್ ಖಾನ್ , ಶ್ರೀಕರ್ ಭರತ್, ಲುಂಗಿ ಎನ್‌ಗಿಡಿ , ಅಶ್ವಿನ್ ಹೆಬ್ಬಾರ್ , ಪ್ರವೀಣ್ ದುಬೆ , ಖಲೀಲ್ ಅಹ್ಮದ್ , ಅನ್ರಿಕ್ ನೋಕಿಯಾ, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್ , ಯಶ್ ಧುಲ್ , ವಿಕ್ಕಿ ಒಸ್ತ್ವಾಲ್.

  • 05 May 2022 06:03 PM (IST)

    DC: ಡೆಲ್ಲಿ ಪಡೆ

  • 05 May 2022 06:03 PM (IST)

    SRH: ಆರೆಂಜ್ ಆರ್ಮಿಯ ಆಗಮನ

  • 05 May 2022 06:02 PM (IST)

    SRH ಗೆ DC ಹುಡುಗರ ಸವಾಲು

  • Published On - May 05,2022 5:59 PM

    Follow us