IPL 2022: RCB ಪಾಲಿಗೆ ಹೊರೆಯಾದ್ರಾ ವಿರಾಟ್ ಕೊಹ್ಲಿ? ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

IPL 2022: ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾದರೂ ವಿರಾಟ್ ಕೊಹ್ಲಿಯಿಂದ ಸ್ಪೋಟಕ ಇನಿಂಗ್ಸ್ ಮೂಡಿಬರದಿರುವುದು ಕೂಡ ಆರ್​ಸಿಬಿ ತಂಡದ ಚಿಂತೆಗೆ ಕಾರಣವಾಗಿದೆ. ಏಕೆಂದರೆ ತಂಡದ ನಿಧಾನಗತಿಯ ಆರಂಭದಿಂದಾಗಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ.

IPL 2022: RCB ಪಾಲಿಗೆ ಹೊರೆಯಾದ್ರಾ ವಿರಾಟ್ ಕೊಹ್ಲಿ? ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ
Virat Kohli
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 05, 2022 | 4:39 PM

IPL 2022: ಈ ಬಾರಿಯ ಐಪಿಎಲ್​ನಲ್ಲಿ ಸತತವಾಗಿ ವೈಫಲ್ಯ ಹೊಂದಿದ್ದ ಆಟಗಾರರ ಪಟ್ಟಿ ತೆಗೆದುಕೊಂಡರೆ ಅದರಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) ಹೆಸರು ಕೂಡ ಕಾಣ ಸಿಗುತ್ತದೆ. ಏಕೆಂದರೆ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಕಲೆಹಾಕಿದ್ದು ಕೇವಲ 216 ರನ್​ ಮಾತ್ರ. ಅಂದರೆ ತಂಡದ ಪ್ರಮುಖ ಆಟಗಾರ ರನ್​ಗಳಿಸಲು ಪರದಾಡುತ್ತಿರುವುದು ಇದೀಗ ಆರ್​ಸಿಬಿ (RCB) ಚಿಂತೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಇದೀಗ ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದರೂ ಪವರ್​ಪ್ಲೇನಲ್ಲಿ ಕೊಹ್ಲಿ ಅಬ್ಬರಿಸುತ್ತಿಲ್ಲ. ಇದಕ್ಕೆ ಸಾಕ್ಷಿಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕೊಹ್ಲಿ 33 ಎಸೆತಗಳನ್ನು ಎದುರಿಸಿ ಕೇವಲ 30 ರನ್​ಗಳಿಸಿರುವುದು. ಇದೇ ಕಾರಣಕ್ಕೆ, ಐಪಿಎಲ್‌ನ ಒಂದು ಸೀಸನ್‌ನಲ್ಲಿ 973 ರನ್ ಗಳಿಸಿದ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಪ್ರಸಕ್ತ ಫಾರ್ಮ್​ ಬಗ್ಗೆ ವೆಸ್ಟ್ ಇಂಡೀಸ್ ನ ಮಾಜಿ ಕ್ರಿಕೆಟಿಗ ಇಯಾನ್ ಬಿಷಪ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿಗೆ ಸ್ಥಿರವಾಗಿ ಸ್ಕೋರ್ ಮಾಡಲು ಸಾಧ್ಯವಾಗುತ್ತಿಲ್ಲ. ವಿವಿಧ ರೀತಿಯ ಬೌಲರ್‌ಗಳು ಅವರನ್ನು ಔಟ್ ಮಾಡುತ್ತಿರುವುದು ಆತಂಕಕಾರಿ ಸಂಗತಿ. ಬುಧವಾರ ಸಿಎಸ್​ಕೆ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ 30 ರನ್ ಗಳಿಸಿ ಔಟಾದರು. ಅವರನ್ನು ಮೊಯೀನ್ ಅಲಿ ಕ್ಲೀನ್ ಬೌಲ್ಡ್ ಮಾಡಿದ್ದರು. ಕೊಹ್ಲಿಗೆ ಈ ಪಂದ್ಯದ ಆರಂಭದಲ್ಲಿ ಚೆಂಡಿನೊಂದಿಗೆ ಸಮಾನ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಹಾಗೆ ಮಾಡಬೇಕೆಂಬ ತುಡಿತವನ್ನೂ ಅವರು ತೋರಿಸುತ್ತಿಲ್ಲ. ಇದುವೇ ಅವರು ಕೆಟ್ಟ ಫಾರ್ಮ್​ನಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಇಯಾನ್ ಬಿಷಪ್ ಹೇಳಿದ್ದಾರೆ.

ವಿರಾಟ್ ಕಳೆದ ಪಂದ್ಯದಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಸ್ಟ್ರೈಕ್ ರೇಟ್ ಅನ್ನು ಸುಧಾರಿಸಿದರು. ಆದರೆ ನಂತರ ಅವರ ರನ್ ಗತಿ ಕಡಿಮೆಯಾಯಿತು. ಈ ಸೀಸನ್‌ನಲ್ಲಿ ಮಾತ್ರವಲ್ಲ, ಕಳೆದ ಸೀಸನ್‌ನಲ್ಲೂ ವಿರಾಟ್ ಕೊಹ್ಲಿ ಇದೇ ರೀತಿಯಲ್ಲಿ ಆಡಿದ್ದರು. ಇದು ಅವರ ಕೆರಿಯರ್​ಗೆ ಆತಂಕಕಾರಿ ಎಂದು ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಸ್ಪಿನ್ನರ್‌ಗಳ ವಿರುದ್ಧ ಆಡಲು ಹೆಣಗಾಡುತ್ತಿದ್ದಾರೆ. ರೋಸ್ಟನ್ ಚೇಸ್ ವೆಸ್ಟ್ ಇಂಡೀಸ್ ಭಾರತ ಪ್ರವಾಸದ ಸಮಯದಲ್ಲಿ ಕೊಹ್ಲಿಯನ್ನು ಔಟ್ ಮಾಡಿದ್ದರು.ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಆಫ್ ಸ್ಪಿನ್ನರ್‌ಗಳ ಬಾಲ್‌ಗೆ ಔಟಾಗುವುದನ್ನು ನಾವು ನೋಡಿದ್ದೇವೆ. ಇದರಿಂದ ನಾನು ಚಿಂತಿತನಾಗಿದ್ದೇನೆ. ವಿವಿಧ ರೀತಿಯ ಬೌಲರ್‌ಗಳು ವಿರಾಟ್ ಕೊಹ್ಲಿಯನ್ನು ಔಟ್ ಮಾಡುತ್ತಿರುವ ಬಗ್ಗೆ ನನಗೂ ಕಾಳಜಿ ಇದೆ. ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಇದುವೇ ದೊಡ್ಡ ನಿದರ್ಶನ ಎಂದು ಇಯಾನ್ ಬಿಷಪ್ ಹೇಳಿದ್ದಾರೆ.

ಇತ್ತ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾದರೂ ವಿರಾಟ್ ಕೊಹ್ಲಿಯಿಂದ ಸ್ಪೋಟಕ ಇನಿಂಗ್ಸ್ ಮೂಡಿಬರದಿರುವುದು ಕೂಡ ಆರ್​ಸಿಬಿ ತಂಡದ ಚಿಂತೆಗೆ ಕಾರಣವಾಗಿದೆ. ಏಕೆಂದರೆ ತಂಡದ ನಿಧಾನಗತಿಯ ಆರಂಭದಿಂದಾಗಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಮುಂದಿನ ನಿರ್ಣಾಯಕ ಪಂದ್ಯಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್