RCB vs MI: ಆರ್​ಸಿಬಿ-ಮುಂಬೈ ಪಂದ್ಯ ನಡೆಯುತ್ತಿರುವಾಗ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಕಾಂತಾರ ಪಂಜುರ್ಲಿ ದೈವದ ವೇಷ

|

Updated on: Apr 03, 2023 | 2:09 PM

Kantara Kannada Movie: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಅಭಿಮಾನಿಗಳು ವಿಶೇಷ ವೇಷ-ಭೂಷಣ ಧರಿಸಿ ಸ್ಟೇಡಿಯಂನಲ್ಲಿ ಹಾಜರಿದ್ದರು. ಇದರಲ್ಲಿ ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಅಭಿಮಾನಿಯೊಬ್ಬರು ಕಾಣಿಸಿಕೊಂಡಿದ್ದಾರೆ.

RCB vs MI: ಆರ್​ಸಿಬಿ-ಮುಂಬೈ ಪಂದ್ಯ ನಡೆಯುತ್ತಿರುವಾಗ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಕಾಂತಾರ ಪಂಜುರ್ಲಿ ದೈವದ ವೇಷ
Kantara and RCB vs MI Match
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವಣ ಐಪಿಎಲ್ 2023ರ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ಹೈವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಿರಾಟ್ ಕೊಹ್ಲಿ (Virat Kohli) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು 16.1 ಓವರ್​ನಲ್ಲೇ ಗೆಲುವಿನ ದಡ ಸೇರಿತು. ಈ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಆರ್​ಸಿಬಿ ಅಭಿಮಾನಿಗಳು ವಿಶೇಷ ವೇಷ-ಭೂಷಣ ಧರಿಸಿ ಸ್ಟೇಡಿಯಂನಲ್ಲಿ ತುಂಬಿ ತುಳುಕುತ್ತಿದ್ದರು. ಇದರಲ್ಲಿ ಕಾಂತಾರ (Kantara Movie) ಸಿನಿಮಾದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಅಭಿಮಾನಿಯೊಬ್ಬರು ಕಾಣಿಸಿಕೊಂಡಿದ್ದಾರೆ.

ಇಡೀ ವಿಶ್ವವೇ ಒಂದು ಭಾರಿ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕಾಂತಾರ’. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ಈ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈಗಲೂ ಈ ಸಿನಿಮಾ ಕ್ರೇಜ್ ನಿಂತಿಲ್ಲ. ಇದಕ್ಕೆ ಸಾಕ್ಷಿ ಭಾನುವಾರ ಚಿನ್ನಸ್ವಾಮಿಯಲ್ಲಿ ಭಾನುವಾರ ನಡೆದ ಆರ್​ಸಿಬಿ ಹಾಗೂ ಮುಂಬೈ ನಡುವಣ ಪಂದ್ಯ. ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಕ್ರಿಕೆಟ್​ ನೋಡುತ್ತಾ ಎಂಜಾಯ್​ ಮಾಡುತ್ತಿರುವ ವ್ಯಕ್ತಿಯೊಬ್ಬರು ಈ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ
Yuzvendra Chahal: ಆರ್​ಸಿಬಿ vs ಮುಂಬೈ ಪಂದ್ಯದ ಮಧ್ಯೆ ಸುದ್ದಿಯಾಗದೆ ಹೋಯ್ತು ಯುಜ್ವೇಂದ್ರ ಚಹಲ್ ನಿರ್ಮಿಸಿದ ಇತಿಹಾಸ
CSK vs LSG, IPL 2023: ಧೋನಿ vs ರಾಹುಲ್: ಐಪಿಎಲ್​ನಲ್ಲಿಂದು ಚೆನ್ನೈ-ಲಖನೌ ನಡುವೆ ಹೈವೋಲ್ಟೇಜ್ ಕದನ
Tilak Varma: ತಿಲಕ್ ವರ್ಮಾ ಸಿಡಿಸಿದ ಹೆಲಿಕಾಫ್ಟರ್ ಶಾಟ್​ಗೆ ಸ್ತಬ್ಧವಾದ ಚಿನ್ನಸ್ವಾಮಿ ಸ್ಟೇಡಿಯಂ: ರೋಚಕ ವಿಡಿಯೋ ನೋಡಿ
Virat Kohli RCB: ಮುಂಬೈ ಸೋತ ತಕ್ಷಣ ವಿರಾಟ್ ಕೊಹ್ಲಿ ಬಳಿ ಬಂದು ರೋಹಿತ್ ಶರ್ಮಾ ಮಾಡಿದ್ದೇನು ನೋಡಿ

Faf Duplessis: ಪಂದ್ಯ ಮುಗಿದ ಬಳಿಕ ಆರ್​ಸಿಬಿ ಗೆಲುವಿನ ಬಗ್ಗೆ ನಾಯಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿಗೆ ಹುರಿದುಂಬಿಸಲು ಬಂದಿದ್ದ ಅಭಿಮಾನಿಗಳ ಫೋಟೋವನ್ನು ಹಂಚಿಕೊಂಡಿದೆ. ಇದರಲ್ಲಿ ಪಂಜುರ್ಲಿ ದೈವದ ವೇಷವನ್ನು ಧರಿಸಿರುವ ಅಭಿಮಾನಿಯ ಫೋಟೋ ಕೂಡ ಇದೆ. ಅನೇಕರು ಈ ಫೋಟೋವನ್ನು ಕಂಡು ಕಾಂತಾರವೆಂದು ಹೊಗಳಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

 

ತುಳುನಾಡಿನ ದೈವಾರಾಧನೆ ಒಂದು ವಿಶಿಷ್ಟವಾದ ಆರಾಧನಾ ರಂಗ ಕಲೆ, ಧಾರ್ಮಿಕ ಆರಾಧನಾ ಪದ್ಧತಿ. ಹಿಂದೂ, ಮುಸ್ಲಿಂ, ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ. ಹೀಗಿದ್ದಾಗ ಕ್ರಿಕೆಟ್ ಮೈದಾನದಲ್ಲಿ ಈರೀತಿಯ ವೇಷ ಧರಿಸಿ ಬರುವುದು ಸರಿಯಲ್ಲ ಎಂದು ಕೆಲವು ಹೇಳುತ್ತಿದ್ದಾರೆ.

ಆರ್​ಸಿಬಿಗೆ 8 ವಿಕೆಟ್​ಗಳ ಜಯ:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಲು ಬಂದ ಮುಂಬೈ ಇಂಡಿಯನ್ಸ್ 50 ರನ್​ಗು ಮೊದಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರೋಹಿತ್ ಶರ್ಮಾ ಪಡೆಯ ಮೊತ್ತ 100 ದಾಟುವುದು ಕಷ್ಟವಾಗಿತ್ತು. ಆದರೆ, 20ನೇ ಓವರ್ ವರೆಗೂ ಟೊಂಕ ಕಟ್ಟಿ ಕ್ರೀಸ್​ನಲ್ಲಿ ನಿಂತ ಯುವ ಬ್ಯಾಟರ್ ತಿಲಕ್ ವರ್ಮಾ 171 ರನ್​ಗಳ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. 46 ಎಸೆತಗಳಲ್ಲಿ 9 ಫೋರ್ ಹಾಗೂ 4 ಸಿಕ್ಸರ್​ನೊಂದಿಗೆ ಇವರು ಅಜೇಯ 84 ರನ್ ಸಿಡಿಸಿದರು. 16ನೇ ಓವರ್ ವರೆಗೂ ಆರ್​ಸಿಬಿ ಹಿಡಿತದಲ್ಲೇ ಇದ್ದ ಪಂದ್ಯದಲ್ಲಿ ಮುಂಬೈ ಅನ್ನು ಕಡಿಮ ಮೊತ್ತಕ್ಕೆ ಕಟ್ಟು ಹಾಕುವ ಪ್ಲಾನ್​ನಲ್ಲಿತ್ತು. ಆದರೆ, ಕೊನೆಯ ಮೂರು ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳ ಬೆವರಿಳಿಸಿದ್ದು ತಿಲಕ್ ವರ್ಮಾ ಮನಬಂದಂತೆ ಬ್ಯಾಟ್ ಬೀಸಿ ಫೋರ್-ಸಿಕ್ಸರ್​ಗಳ ಮಳೆ ಸುರಿಸಿದರು.

172 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಓಪನರ್​ಗಳಾದ ವಿರಾಟ್ ಕೊಹ್ಲಿ (ಅಜೇಯ 82) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ (73) ಅವರ ಅಮೋಘ ಬ್ಯಾಟಿಂಗ್ ವೈಭವದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿತು. ಇದೀಗ ಪಾಯಿಂಟ್ ಟೇಬಲ್​ನಲ್ಲಿ 2 ಅಂಕದೊಂದಿಗೆ ರನ್​ರೇಟ್ ಆಧಾರದ ಮೇಲೆ ಆರ್​ಸಿಬಿ ಮೂರನೇ ಸ್ಥಾನದಲ್ಲಿದೆ. ಫಾಫ್ ಪಡೆ ತನ್ನ ಮುಂದಿನ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಪ್ರಿಲ್ 6 ಗುರುವಾರದಂದು ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Mon, 3 April 23