Karun Nair: ಇಂದು ಪ್ಲೇಯಿಂಗ್ XI ನಲ್ಲಿ ಕರುಣ್ ನಾಯರ್​ಗೆ ಸಿಗುತ್ತ ಅವಕಾಶ: ಸಿಗಲೇ ಬೇಕು ಎಂದ ಮಾಜಿ ಆಟಗಾರ

England vs India 3rd Test: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಜನಪ್ರಿಯ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಒತ್ತಾಯಿಸಿದ್ದಾರೆ.

Karun Nair: ಇಂದು ಪ್ಲೇಯಿಂಗ್ XI ನಲ್ಲಿ ಕರುಣ್ ನಾಯರ್​ಗೆ ಸಿಗುತ್ತ ಅವಕಾಶ: ಸಿಗಲೇ ಬೇಕು ಎಂದ ಮಾಜಿ ಆಟಗಾರ
Karun Nair
Edited By:

Updated on: Jul 16, 2025 | 6:35 PM

ಬೆಂಗಳೂರು (ಜು. 10): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಸುಮಾರು 7 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಕರುಣ್ ನಾಯರ್ (Karun Nair) ಟೀಮ್ ಇಂಡಿಯಾಕ್ಕೆ ಮರಳಿದರು. ಅಷ್ಟೇ ಅಲ್ಲದೆ ಆಂಗ್ಲರ ವಿರುದ್ಧದ ಮೊದಲ ಎರಡೂ ಟೆಸ್ಟ್​ನಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ 11 ರಲ್ಲಿ ನೇರವಾಗಿ ಸ್ಥಾನ ಪಡೆದರು. ಆದರೆ ಇಲ್ಲಿಯವರೆಗೆ ಕರುಣ್ ನಾಯರ್ ಎರಡು ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ ವಿಶೇಷವಾದದ್ದನ್ನು ಮಾಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ಪ್ಲೇಯಿಂಗ್ 11 ರಿಂದ ಕೈಬಿಡುವ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಆದರೆ ಈಗ ಆಕಾಶ್ ಚೋಪ್ರಾ ಅವರ ಬೆಂಬಲಕ್ಕೆ ನಿಂತು ದೊಡ್ಡ ಹೇಳಿಕೆ ನೀಡಿದ್ದಾರೆ.

ಕರುಣ್ ಅವರನ್ನು ಸಮರ್ಥಿಸಿಕೊಂಡ ಆಕಾಶ್ ಚೋಪ್ರಾ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಜನಪ್ರಿಯ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಒತ್ತಾಯಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್ ಚೋಪ್ರಾ, ‘ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ನಾಯರ್‌ಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿದೆ. ಬ್ಯಾಟಿಂಗ್ ಮಾಡುವಾಗ ಅವರು ಉತ್ತಮವಾಗಿ ಕಾಣುತ್ತಿದ್ದಾರೆ. ಆದರೆ, ಉತ್ತಮ ಆರಂಭವನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರಿಗೆ ಖಂಡಿತವಾಗಿಯೂ ಮತ್ತೊಂದು ಅವಕಾಶ ನೀಡಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ
ಲಾರ್ಡ್ಸ್‌ ಟೆಸ್ಟ್ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರಪ್ರಸಾರ?
2026 ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯುವ ಸನಿಹದಲ್ಲಿ ಇಟಲಿ
ಲಾರ್ಡ್ಸ್‌ ಟೆಸ್ಟ್​ಗೆ ಬುಮ್ರಾ ಅಗಮನ.; ಕನ್ನಡಿಗನಿಗೆ ಗೇಟ್​​ಪಾಸ್?
ಭಾರತ- ಇಂಗ್ಲೆಂಡ್ ಲಾರ್ಡ್ಸ್‌ ಟೆಸ್ಟ್; 5 ದಿನಗಳ ಹವಾಮಾನ ವರದಿ

ಕರುಣ್ ನಾಯರ್‌ಗೆ ನಿರಂತರ ಅವಕಾಶಗಳು ಸಿಗಬೇಕು

‘ಕರುಣ್ ನಾಯರ್ ಅವರಿಗೆ ಮೊದಲೇ ಅವಕಾಶ ನೀಡಲಾಗಿತ್ತು, ಅವರು ತ್ರಿಶತಕ ಬಾರಿಸಿದ್ದರು. ಆ ಸಮಯದಲ್ಲಿ ಅವರನ್ನು ತಂಡದಿಂದ ಕೈಬಿಡಲಾಯಿತು, ಅಂದು ಅನ್ಯಾಯವಾಗಿತ್ತು. ಆದರೆ, ಈಗ ಅವರನ್ನು ಮತ್ತೆ ತಂಡಕ್ಕೆ ಸೇರಿಸಿರುವುದರಿಂದ, ಅವರಿಗೆ ಸಾಕಷ್ಟು ಅವಕಾಶ ನೀಡಬೇಕು’ ಎಂದು ಆಕಾಶ್ ಹೇಳಿದರು. “ದೀರ್ಘಕಾಲ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಕರುಣ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಪುನರಾಗಮನ ಎಂದಿಗೂ ಸುಲಭವಲ್ಲ. ಅವರು ಮುಂದಿನ ಟೆಸ್ಟ್ ಆಡಿದರೆ, ಅದು 6 ಇನ್ನಿಂಗ್ಸ್‌ಗಳಾಗಿರುತ್ತದೆ. ಅದರ ನಂತರ ಅವರನ್ನು ಮೌಲ್ಯಮಾಪನ ಮಾಡಬಹುದು” ಎಂದು ಮಾಜಿ ಕ್ರಿಕೆಟಿಗ ಹೇಳಿದರು.

IND vs ENG: ಲಾರ್ಡ್ಸ್‌ ಟೆಸ್ಟ್ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರಪ್ರಸಾರ?

ದೇಶೀಯ ಕ್ರಿಕೆಟ್‌ನಲ್ಲಿ ಹೇರಳವಾಗಿ ರನ್ ಗಳಿಸಿದ್ದಕ್ಕಾಗಿ 8 ವರ್ಷಗಳ ನಂತರ ಕರುಣ್ ನಾಯರ್‌ಗೆ ಭಾರತೀಯ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಯಿತು. ಆದರೆ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ 2 ಪಂದ್ಯಗಳಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದರು. ಅವರು 4 ಇನ್ನಿಂಗ್ಸ್‌ಗಳಲ್ಲಿ 0, 20, 31, 26 ರನ್ ಗಳಿಸಲು ಸಾಧ್ಯವಾಯಿತು. ಅವರ ನಿರಾಶಾದಾಯಕ ಪ್ರದರ್ಶನದ ನಂತರ ಅವರನ್ನು ಟೀಕಿಸಲು ಪ್ರಾರಂಭಿಸಲಾಗಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸೇರಿಸಿಕೊಂಡ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಆಕಾಶ್ ಒಪ್ಪಲಿಲ್ಲ. ರೆಡ್ಡಿ ನಿಸ್ಸಂದೇಹವಾಗಿ ಆಲ್‌ರೌಂಡರ್, ಆದರೆ ಅವರು ಶಾರ್ದೂಲ್‌ನಷ್ಟು ಪರಿಣಾಮಕಾರಿ ಬೌಲರ್ ಅಲ್ಲ ಎಂದು ಅವರು ಹೇಳಿದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ ಪ್ರಾರಂಭವಾಗುತ್ತಿದೆ. ಸದ್ಯ ಸರಣಿ 1-1 ರಲ್ಲಿ ಸಮಬಲಗೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:15 am, Thu, 10 July 25