ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 2ನೇ ಸೆಮಿಫೈನಲ್ನಲ್ಲಿ ಕರುಣ್ ನಾಯರ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡಕ್ಕೆ ಕಾರ್ತಿಕ್ ಹಾಗೂ ರವಿಕುಮಾರ್ ಸಮರ್ಥ್ ಉತ್ತಮ ಆರಂಭ ಒದಗಿಸಿದ್ದರು.
ತಂಡದ ಮೊತ್ತ 82 ರನ್ ಆಗಿದ್ದ ವೇಳೆ ಕಾರ್ತಿಕ್ (41) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಕರುಣ್ ಗುಲ್ಬರ್ಗ ಮಿಸ್ಟಿಕ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಸಂಪೂರ್ಣ ಲಯ ತಪ್ಪಿದ ಎದುರಾಳಿ ಬೌಲರ್ಗಳು ಬಲಗೈ ದಾಂಡಿಗನ ದಂಡಕ್ಕೆ ಗುರಿಯಾದರು.
ಅಷ್ಟೇ ಅಲ್ಲದೆ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹಾಫ್ ಸೆಂಚುರಿ ಬಳಿಕ ಕರುಣ್ ಅಕ್ಷರಶಃ ಅಬ್ಬರಿಸಲಾರಂಭಿಸಿದರು.
ಸಿಕ್ಸ್-ಫೋರ್ಗಳ ಸುರಿಮಳೆಗೈದ ಕರುಣ್ ನಾಯರ್ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ಬರೆದರು.
CRUNCHED 💥@karun126 sends it straight out of the park. 🔥🔝#IlliGeddavareRaja #MaharajaTrophy #KSCA #Karnataka pic.twitter.com/tQWsXAME9M
— Maharaja Trophy T20 (@maharaja_t20) August 28, 2023
ಮತ್ತೊಂದೆಡೆ ನಾಯಕನಿಗೆ ಉತ್ತಮ ಸಾಥ್ ನೀಡಿದ ರವಿಕುಮಾರ್ ಸಮರ್ಥ್ 50 ಎಸೆತಗಳಲ್ಲಿ 80 ರನ್ ಬಾರಿಸಿದರು. ಅಂತಿಮವಾಗಿ 42 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 7 ಆಕರ್ಷಕ ಫೋರ್ಗಳೊಂದಿಗೆ ಅಜೇಯ 107 ರನ್ ಬಾರಿಸಿದ ಕರುಣ್ ನಾಯರ್ ತಂಡದ ಮೊತ್ತವನ್ನು 248 ಕ್ಕೆ ತಂದು ನಿಲ್ಲಿಸಿದರು. ಈ ಮೂಲಕ ಬೃಹತ್ ಮೊತ್ತದ ಗುರಿಯನ್ನು ಗುಲ್ಬರ್ಗ ಮಿಸ್ಟಿಕ್ಸ್ ತಂಡದ ಮುಂದಿಟ್ಟಿದ್ದಾರೆ.
ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ಎಸ್ಯು ಕಾರ್ತಿಕ್ , ರವಿಕುಮಾರ್ ಸಮರ್ಥ್ , ಕರುಣ್ ನಾಯರ್ (ನಾಯಕ) , ಲಂಕೇಶ್ ಕೆ ಎಸ್ , ಕೋದಂಡ ಅಜಿತ್ ಕಾರ್ತಿಕ್ , ಶಿವಕುಮಾರ್ ರಕ್ಷಿತ್ ( ವಿಕೆಟ್ ಕೀಪರ್ ) , ಮನೋಜ್ ಭಾಂಡಗೆ , ಜಗದೀಶ ಸುಚಿತ್ , ಮೋನಿಶ್ ರೆಡ್ಡಿ , ಶಶಿ ಕುಮಾರ್ ಕೆ , ಕುಶಾಲ್ ವಾಧ್ವಾನಿ.
ಇದನ್ನೂ ಓದಿ: ಏಕದಿನ ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್: ನಾಲ್ವರು ಗಾಯಾಳು..!
ಗುಲ್ಬರ್ಗ ಮಿಸ್ಟಿಕ್ಸ್ ಪ್ಲೇಯಿಂಗ್ 11: ಅನೀಶ್ ಕೆ ವಿ , ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ , ಸ್ಮರಣ್ ಆರ್ , ಅಮಿತ್ ವರ್ಮಾ , ಶ್ರೀನಿವಾಸ್ ಶರತ್ ( ವಿಕೆಟ್ ಕೀಪರ್ ) , ಅಬುಲ್ ಹಸನ್ ಖಾಲಿದ್ , ವಿಜಯ್ ಕುಮಾರ್ ವೈಶಾಕ್ (ನಾಯಕ) , ಅವಿನಾಶ್ ಡಿ , ಶರಣ್ ಗೌಡ , ಹಾರ್ದಿಕ್ ರಾಜ್ , ಅಭಿಲಾಷ್ ಶೆಟ್ಟಿ.