Maharaja Trophy 2023: ಟೈಗರ್ಸ್ vs ವಾರಿಯರ್ಸ್ ನಡುವೆ ಫೈನಲ್ ಫೈಟ್
Hubli Tigers vs Mysore Warriors: ಆಗಸ್ಟ್ 29 ರಂದು (ಮಂಗಳವಾರ) ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡವು ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಎದುರಿಸಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೋಮವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಜಯ ಸಾಧಿಸಿ ಹುಬ್ಬಳ್ಳಿ ಟೈಗರ್ಸ್ ಫೈನಲ್ ಪ್ರವೇಶಿಸಿದೆ. ಇನ್ನು ಎರಡನೇ ಸೆಮಿಫೈನಲ್ನಲ್ಲಿ ಮೈಸೂರು ವಾರಿಯರ್ಸ್ ತಂಡವು ಗುಲ್ಬರ್ಗ ಮಿಸ್ಟಿಕ್ಸ್ ತಂಡಕ್ಕೆ ಸೋಲುಣಿಸಿ ನಿರ್ಣಾಯಕ ಹಂತಕ್ಕೇರಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿತು.
150 ರನ್ಗಳ ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ಪರ ಮೊಹಮ್ಮದ್ ತಾಹ (69) ಹಾಗೂ ಕೃಷ್ಣನ್ ಶ್ರೀಜಿತ್ (61) ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ 14 ಓವರ್ಗಳಲ್ಲಿ ಗುರಿ ಮುಟ್ಟಿದ ಹುಬ್ಬಳ್ಳಿ ಟೈಗರ್ಸ್ 8 ವಿಕೆಟ್ಗಳ ಜಯದೊಂದಿಗೆ ಫೈನಲ್ಗೆ ಪ್ರವೇಶಿಸಿದೆ.
𝗛𝘂𝗯𝗹𝗶 𝗧𝗶𝗴𝗲𝗿𝘀 𝗮𝗿𝗲 𝘁𝗵𝗲 𝗳𝗶𝗿𝘀𝘁 𝗳𝗶𝗻𝗮𝗹𝗶𝘀𝘁𝘀 𝗼𝗳 𝘁𝗵𝗲 𝗦𝗵𝗿𝗶𝗿𝗮𝗺 𝗖𝗮𝗽𝗶𝘁𝗮𝗹 𝗠𝗮𝗵𝗮𝗿𝗮𝗷𝗮 𝗧𝗿𝗼𝗽𝗵𝘆 𝗞𝗦𝗖𝗔 𝗧𝟮𝟬 𝗣𝗼𝘄𝗲𝗿𝗲𝗱 𝗯𝘆 𝗙𝗮𝗻𝗖𝗼𝗱𝗲.🔥🔝#IlliGeddavareRaja #MaharajaTrophy #KSCA #Karnataka pic.twitter.com/dbTUUnjrud
— Maharaja Trophy T20 (@maharaja_t20) August 28, 2023
ಇನ್ನು ದ್ವಿತೀಯ ಸೆಮಿಫೈನಲ್ನಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ಪರ ನಾಯಕ ಕರುಣ್ ನಾಯರ್ ಅಕ್ಷರಶಃ ಅಬ್ಬರಿಸಿದರು. ಕೇವಲ 42 ಎಸೆತಗಳಲ್ಲಿ ಅಜೇಯ 107 ರನ್ ಬಾರಿಸಿದ ನಾಯರ್ ತಂಡದ ಮೊತ್ತವನ್ನು 2 ವಿಕೆಟ್ ನಷ್ಟಕ್ಕೆ 248 ಕ್ಕೆ ತಂದು ನಿಲ್ಲಿಸಿದರು.
249 ರನ್ಗಳ ಕಠಿಣ ಗುರಿ ಪಡೆದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಉತ್ತಮ ಪ್ರದರ್ಶನ ನೀಡಿದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ. ಅಂತಿಮವಾಗಿ 212 ರನ್ಗಳಿಸಿ 36 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಮೈಸೂರು ವಾರಿಯರ್ಸ್ ತಂಡವು ಫೈನಲ್ ಪ್ರವೇಶಿಸಿದೆ.
The Warriors sail into the BIG FINALE. 🔥🤩#IlliGeddavareRaja #MaharajaTrophy #KSCA #Karnataka pic.twitter.com/n5GN4SAjvQ
— Maharaja Trophy T20 (@maharaja_t20) August 28, 2023
ಫೈನಲ್ ಫೈಟ್ ಯಾವಾಗ?
ಆಗಸ್ಟ್ 29 ರಂದು (ಮಂಗಳವಾರ) ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡವು ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಎದುರಿಸಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ 2 ಹಾಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಫ್ಯಾನ್ ಕೋಡ್ ಆ್ಯಪ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.
ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ (ನಾಯಕ),ಪ್ರವೀಣ್ ದುಬೆ, ಕೆಸಿ ಕಾರ್ಯಪ್ಪ, ಲವ್ನಿತ್ ಸಿಸೋಡಿಯಾ, ಶ್ರೀಜಿತ್ ಕೆಎಲ್, ಮೊಹಮ್ಮದ್ ತಾಹ, ವಿದ್ವತ್ ಕಾವೇರಪ್ಪ, ದರ್ಶನ್ ಎಂಬಿ, ಶಿವಂ ಎಂಬಿ, ನಾಗ ಭರತ್, ಸಂತೋಖ್ ಸಿಂಗ್, ಮನ್ವಂತ್ ಕುಮಾರ್ ಎಲ್, ಮಿತ್ರಕಾಂತ್ ಯಾದವ್, ಮಲ್ಲಿಕ್ ಸಾಬ್, ರಾಜಶೇಖರ್ ಹರಿಕಾಂತ್, ಕ್ಲೆಮೆಂಟ್ ರಾಜು.
ಇದನ್ನೂ ಓದಿ: IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?
ಮೈಸೂರು ವಾರಿಯರ್ಸ್: ಕರುಣ್ ನಾಯರ್ (ನಾಯಕ), ಜಗದೀಶ ಸುಚಿತ್, ಪ್ರಸಿದ್ಧ್ ಕೃಷ್ಣ, ಶೋಯೆಬ್ ಮ್ಯಾನೇಜರ್, ರವಿಕುಮಾರ್ ಸಮರ್ಥ್, ಕಾರ್ತಿಕ್ ಸಿಎ, ಮನೋಜ್ ಭಾಂಡಗೆ, ವೆಂಕಟೇಶ್ ಎಂ, ತುಷಾರ್ ಸಿಂಗ್, ಕುಶಾಲ್ ವಾಧ್ವಾನಿ, ಶಶಿಕುಮಾರ್ ಕೆ, ರಕ್ಷಿತ್ ಎಸ್, ಗೌತಮ್ ಮಿಶ್ರಾ, ಶ್ರೀಶ ಆಚಾರ್, ಮೋನಿಶ್ ರೆಡ್ಡಿ, ಭರತ್ ಮಣಿ, ರಾಹುಲ್ ಸಿಂಗ್ ರಾವತ್, ಭರತ್ ಧುರಿ.