ಕರ್ನಾಟಕ ತಂಡವನ್ನು ತೊರೆದ ಕರುಣ್ ನಾಯರ್

Karun Nair: 2016 ರಿಂದ 2017 ರ ನಡುವೆ ಕರುಣ್ ನಾಯರ್ ಭಾರತದ ಪರ 6 ಟೆಸ್ಟ್ ಪಂದ್ಯಗಳನ್ನು ಮತ್ತು 2 ODI ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಟೆಸ್ಟ್​ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು. ಇನ್ನು ಒಟ್ಟು 85 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 48.94 ರ ಸರಾಸರಿಯಲ್ಲಿ 5922 ರನ್ ಗಳಿಸಿದ್ದಾರೆ.

ಕರ್ನಾಟಕ ತಂಡವನ್ನು ತೊರೆದ ಕರುಣ್ ನಾಯರ್
Karun Nair
Follow us
| Updated By: ಝಾಹಿರ್ ಯೂಸುಫ್

Updated on: Aug 27, 2023 | 7:50 PM

ಕರುಣ್ ನಾಯರ್ (Karun Nair) ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು (ಕೆಎಸ್‌ಸಿಎ) ತೊರೆದಿದ್ದು, ಮುಂಬರುವ ದೇಶೀಯ ಟೂರ್ನಿಯಲ್ಲಿ ವಿದರ್ಭ ಪರ ಆಡಲಿದ್ದಾರೆ. ಕಳೆದ ಎರಡು ದಶಕಗಳ ಕಾಲ ಕರ್ನಾಟಕ ರಾಜ್ಯ ತಂಡದ ಭಾಗವಾಗಿದ್ದ ಕರುಣ್ ನಾಯರ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೇ ಕಾರಣದಿಂದಾಗಿ ಇದೀಗ ವಿದರ್ಭ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಈ ಬಾರಿಯ ರಣಜಿ ಸೀಸನ್​ಗೂ ಮುನ್ನ ಹಲವು ರಾಜ್ಯಗಳ ಪ್ರಮುಖ ಆಟಗಾರರು ವರ್ಗಾವಣೆಯಾಗಿದ್ದಾರೆ. ಇತ್ತೀಚೆಗಷ್ಟೇ ನಿತೀಶ್ ರಾಣಾ ದೆಹಲಿಯಿಂದ ಉತ್ತರ ಪ್ರದೇಶ ತಂಡಕ್ಕೆ ಸೇರಿದ್ದರು. ಇದೀಗ ಕರುಣ್ ನಾಯರ್ ಕೂಡ ಹೊಸ ತಂಡದ ಪರ ಇನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.

ಕಳೆದ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರುಣ್ ನಾಯರ್​ಗೆ ಅವಕಾಶ ನೀಡಲಾಗಿರಲಿಲ್ಲ. ಅಷ್ಟೇ ಅಲ್ಲದೆ ಜೂನ್ 2022 ರಿಂದ ರಾಜ್ಯ ತಂಡದ ಪರ ಯಾವುದೇ ಕ್ರಿಕೆಟ್ ಆಡಿರಲಿಲ್ಲ. ಇತ್ತ ಕರ್ನಾಟಕ ತಂಡದಲ್ಲಿ ಅವಕಾಶಗಳ ಕೊರತೆಯ ಬೆನ್ನಲ್ಲೇ ವಿದರ್ಭ ಪರ ಆಡಲು ಕರುಣ್ ನಾಯರ್ ನಿರ್ಧರಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿರುವ ಕರುಣ್ ನಾಯರ್, “ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗಿನ ನನ್ನ ಅದ್ಭುತ ಪ್ರಯಾಣಕ್ಕಾಗಿ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೂ, KSCA ಒಂದು ಮಾರ್ಗದರ್ಶಿ ಬೆಳಕಾಗಿದೆ. ಇಲ್ಲಿನ ಅಚಲವಾದ ಬೆಂಬಲವು ನನ್ನನ್ನು ಇಂದಿನ ಆಟಗಾರನನ್ನಾಗಿ ರೂಪಿಸಲು ಸಹಾಯ ಮಾಡಿತು.

“ನನ್ನ ಗಮನಾರ್ಹ ತರಬೇತುದಾರರು, ನಾಯಕರು ಮತ್ತು ಸಹ ಆಟಗಾರರಿಗೆ ವಿಶೇಷ ಧನ್ಯವಾದಗಳು. ನಾನು ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ಇದೇ ವೇಳೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗಿನ ನೆನಪುಗಳು, ಸ್ನೇಹ ಮತ್ತು ಕೌಶಲ್ಯಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನನ್ನ ಕ್ರಿಕೆಟ್ ಪ್ರಯಾಣದ ಅವಿಭಾಜ್ಯ ಅಂಗವಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಕರುಣ್ ನಾಯರ್ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಪರ ಆಡಿದ್ದ ಕರುಣ್:

2016 ರಿಂದ 2017 ರ ನಡುವೆ ಕರುಣ್ ನಾಯರ್ ಭಾರತದ ಪರ 6 ಟೆಸ್ಟ್ ಪಂದ್ಯಗಳನ್ನು ಮತ್ತು 2 ODI ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಟೆಸ್ಟ್​ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು. ಇನ್ನು ಒಟ್ಟು 85 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 48.94 ರ ಸರಾಸರಿಯಲ್ಲಿ 5922 ರನ್ ಗಳಿಸಿದ್ದಾರೆ. ಹಾಗೆಯೇ 90 ಲಿಸ್ಟ್ ಎ ಪಂದ್ಯಗಳಲ್ಲಿ 30.71 ಸರಾಸರಿಯಲ್ಲಿ 2119 ರನ್ ಗಳಿಸಿದ್ದಾರೆ. ಇದೀಗ ವಿದರ್ಭ ಪರ ಹೊಸ ಇನಿಂಗ್ಸ್​ ಆರಂಭಿಸಲು ನಿರ್ಧರಿಸಿದ್ದು, ಅದರಂತೆ ಮುಂದಿನ ದೇಶೀಯ ಟೂರ್ನಿಯಲ್ಲಿ ಕರುಣ್ ನಾಯರ್ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿ
ಹೆದ್ದಾರಿ ಬಳಿ ಒಡೆದೋಯ್ತು ಪೈಪ್‌ಲೈನ್‌; ಆಗಸದೆತ್ತರಕ್ಕೆ ಚಿಮ್ಮಿದ ನೀರು
ಹೆದ್ದಾರಿ ಬಳಿ ಒಡೆದೋಯ್ತು ಪೈಪ್‌ಲೈನ್‌; ಆಗಸದೆತ್ತರಕ್ಕೆ ಚಿಮ್ಮಿದ ನೀರು
ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿ ಕೆಲಸಕ್ಕೂ ದರ ಫಿಕ್ಸ್ ಮಾಡಿದ ದಲ್ಲಾಳಿಗಳು
ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿ ಕೆಲಸಕ್ಕೂ ದರ ಫಿಕ್ಸ್ ಮಾಡಿದ ದಲ್ಲಾಳಿಗಳು
ರಾಯಚೂರಿನಲ್ಲಿ ರೈಲಿನ ಕೆಳಗೆ ಸಿಲುಕಿದ್ದ ಹಸು ರಕ್ಷಣೆ: ಸಾವು, ವಿಡಿಯೋ
ರಾಯಚೂರಿನಲ್ಲಿ ರೈಲಿನ ಕೆಳಗೆ ಸಿಲುಕಿದ್ದ ಹಸು ರಕ್ಷಣೆ: ಸಾವು, ವಿಡಿಯೋ
ಜಲಗ್ರಾಮವಾದ ಗುರುಗ್ರಾಮ; ಭಾರೀ ಮಳೆಯಿಂದ ಕೆರೆಯಂತಾದ ರಸ್ತೆಗಳು
ಜಲಗ್ರಾಮವಾದ ಗುರುಗ್ರಾಮ; ಭಾರೀ ಮಳೆಯಿಂದ ಕೆರೆಯಂತಾದ ರಸ್ತೆಗಳು
ದರ್ಶನ್​ ಅನುಪಸ್ಥಿತಿಯಲ್ಲಿ ನಡೆಯಿತು ಮದುವೆ: ಎಮೋಷನಲ್​ ಆದ​ ತರುಣ್​ ಸುಧೀರ್
ದರ್ಶನ್​ ಅನುಪಸ್ಥಿತಿಯಲ್ಲಿ ನಡೆಯಿತು ಮದುವೆ: ಎಮೋಷನಲ್​ ಆದ​ ತರುಣ್​ ಸುಧೀರ್
ಮಂಡ್ಯ: ರೈತರಿಗೆ ಒಂದು ಮಾತು ಕೊಟ್ಟ ಹೆಚ್​ಡಿ ಕುಮಾರಸ್ವಾಮಿ; ಏನದು?
ಮಂಡ್ಯ: ರೈತರಿಗೆ ಒಂದು ಮಾತು ಕೊಟ್ಟ ಹೆಚ್​ಡಿ ಕುಮಾರಸ್ವಾಮಿ; ಏನದು?
ನೈಸರ್ಗಿಕ ಕೃಷಿಗೆ ಆದ್ಯತೆ; ರೈತರು, ವಿಜ್ಞಾನಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನೈಸರ್ಗಿಕ ಕೃಷಿಗೆ ಆದ್ಯತೆ; ರೈತರು, ವಿಜ್ಞಾನಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ಸೋನಲ್​ಗೆ ಅರುಂಧತಿ ನಕ್ಷತ್ರ ತೋರಿಸಿದ ತರುಣ್ ಸುಧೀರ್; ದಂಪತಿಗೆ ನಗುವೋ ನಗು
ಸೋನಲ್​ಗೆ ಅರುಂಧತಿ ನಕ್ಷತ್ರ ತೋರಿಸಿದ ತರುಣ್ ಸುಧೀರ್; ದಂಪತಿಗೆ ನಗುವೋ ನಗು
ತರುಣ್-ಸೋನಲ್ ಮದುವೆ live: ಹಿಂದು ಸಂಪ್ರದಾಯದಂತೆ ವಿವಾಹ
ತರುಣ್-ಸೋನಲ್ ಮದುವೆ live: ಹಿಂದು ಸಂಪ್ರದಾಯದಂತೆ ವಿವಾಹ
ಕಿತ್ತುಹೋದ ತುಂಗಭದ್ರಾ ಡ್ಯಾಂನ19ನೇ ಗೇಟ್.. ಎಷ್ಟು ನೀರು ಖಾಲಿ ಮಾಡ್ಬೇಕು?
ಕಿತ್ತುಹೋದ ತುಂಗಭದ್ರಾ ಡ್ಯಾಂನ19ನೇ ಗೇಟ್.. ಎಷ್ಟು ನೀರು ಖಾಲಿ ಮಾಡ್ಬೇಕು?