KPL ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ವಿರಾಟ್ ಕೊಹ್ಲಿಗೆ ಪಾಕ್ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: May 17, 2022 | 5:48 PM

Kashmir Premier League: ಕಳೆದ ಸೀಸನ್​ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಯೋಜಿಸಿದ್ದ ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು.

KPL ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ವಿರಾಟ್ ಕೊಹ್ಲಿಗೆ ಪಾಕ್ ಆಹ್ವಾನ
Virat Kohli
Follow us on

ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಆಯೋಜಿಸುತ್ತಿರುವ ಕಾಶ್ಮೀರ ಪ್ರೀಮಿಯರ್ ಲೀಗ್‌ನ (KPL) ಎರಡನೇ ಸೀಸನ್‌ಗೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನು ಆಹ್ವಾನಿಸಲಿದ್ದೇವೆ ಎಂದು ಕೆಪಿಎಲ್ ಅಧ್ಯಕ್ಷ ಆರಿಫ್ ಮಲಿಕ್ ಖಚಿತಪಡಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ವರ್ಷದಿಂದ ಕೆಪಿಎಲ್ (ಕಾಶ್ಮೀರ ಪ್ರೀಮಿಯರ್ ಲೀಗ್) ಆಯೋಜಿಸಲಾಗುತ್ತಿದೆ. ಈ ಟೂರ್ನಿಗೆ ಇದೀಗ ವಿರಾಟ್ ಕೊಹ್ಲಿಯನ್ನು ಆಹ್ವಾನಿಸಲು ಕೆಪಿಎಲ್ ಆಯೋಜಕರು ಮುಂದಾಗಿದ್ದಾರೆ.

ಉಭಯ ದೇಶಗಳ ನಡುವಣ ಶಾಂತಿ ಸಂದೇಶದ ದ್ಯೋತಕವಾಗಿ ವಿರಾಟ್ ಕೊಹ್ಲಿಗೆ ಕೆಪಿಎಲ್​ನಲ್ಲಿ ಆಹ್ವಾನ ನೀಡಲಾಗಿದೆ. ಅವರು ಟೂರ್ನಿಯಲ್ಲಿ ಕಾಣಿಸಿಕೊಂಡರೆ ಎರಡೂ ದೇಶಗಳಲ್ಲಿ ಶಾಂತಿ ಸಂದೇಶ ರವಾನೆಯಾಗುತ್ತದೆ. ಏಕೆಂದೆರೆ ಕ್ರಿಕೆಟ್ ಎಲ್ಲವನ್ನು ಮೀರಿ ಇರಬೇಕು. ಅದಕ್ಕಾಗಿಯೇ ನಾವು ವಿರಾಟ್ ಕೊಹ್ಲಿಯನ್ನು ಲೀಗ್‌ನಲ್ಲಿ ಆಡಲು ಅಥವಾ ಕನಿಷ್ಠ ಒಂದು ಪಂದ್ಯವನ್ನು ವೀಕ್ಷಿಸಲು ಆಹ್ವಾನಿಸಲು ನಿರ್ಧರಿಸಿದ್ದೇವೆ. ಇದು ನಮ್ಮ ಕಡೆಯಿಂದ ನೀಡಲಾಗುತ್ತಿರುವ ಶಾಂತಿಯ ಸಂದೇಶ, ಇದನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು ಎಂದು ಮಲಿಕ್ ಹೇಳಿದ್ದಾರೆ.

ಇದನ್ನೂ ಓದಿ: IPL 2022: ಏನಿದು RCB ಹಾಲ್ ಆಫ್ ಫೇಮ್ ಪ್ರಶಸ್ತಿ?

ಇದನ್ನೂ ಓದಿ
IPL 2022: ಎಬಿಡಿ, ಕ್ರಿಸ್ ಗೇಲ್​ಗೆ RCB ಯ ಹಾಲ್ ಆಫ್ ಫೇಮ್ ಗೌರವ
IPL 2022: ಇಬ್ಬರು ಯುವ ಆಟಗಾರರ ಪ್ರದರ್ಶನಕ್ಕೆ ಗಂಗೂಲಿ ಫಿದಾ..!
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!

ನಾವು ಇತರ ಭಾರತೀಯ ಆಟಗಾರರಿಗೂ ಆತಿಥ್ಯ ನೀಡಲು ಸಿದ್ಧರಿದ್ದೇವೆ. ಎರಡು ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಕ್ರೀಡೆಯೊಂದೇ ದಾರಿ ಎಂದು ನಾವು ನಂಬುತ್ತೇವೆ ಎಂದು ಕೆಪಿಎಲ್ ಅಧ್ಯಕ್ಷ ಆರಿಫ್ ಮಲಿಕ್ ಹೇಳಿದ್ದಾರೆ. ಇದಾಗ್ಯೂ ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ತುಂಬಾ ಕೆಟ್ಟದಾಗಿದೆ. ದೀರ್ಘಕಾಲದವರೆಗೆ ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸಲಾಗಿಲ್ಲ. ಅದರಲ್ಲೂ ವಿವಾದಿತ ಪ್ರದೇಶವಾಗಿರುವ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಕೆಪಿಎಲ್​ನಲ್ಲಿ ಕೊಹ್ಲಿ ಕಾಣಿಸಿಕೊಂಡರೆ ವಿವಾದಗಳು ಹುಟ್ಟಿಕೊಳ್ಳಲಿದೆ. ಹೀಗಾಗಿ ಕೆಪಿಎಲ್​ನ ಆಹ್ವಾನವನ್ನು ಕೊಹ್ಲಿ ತಿರಸ್ಕರಿಸುವ ಸಾಧ್ಯತೆ ಹೆಚ್ಚು.

ಕಳೆದ ಸೀಸನ್​ನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಯೋಜಿಸಿದ್ದ ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. 2021 ರಲ್ಲಿ ನಡೆದ ಈ ಟೂರ್ನಿಯಲ್ಲಿ ರಾವಲ್ಕೋಟ್ ಹಾಕ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಲೀಗ್‌ನ ಎರಡನೇ ಸೀಸನ್‌ನಲ್ಲಿ 2 ಹೊಸ ತಂಡಗಳನ್ನು ಪರಿಚಯಿಸಲಾಗುತ್ತದೆ. ಅದರಂತೆ ಈ ಬಾರಿಯ ಟೂರ್ನಿ ಆಗಸ್ಟ್ 1 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಆಗಸ್ಟ್ 14 ರಂದು ನಡೆಯಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.