IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಭರ್ಜರಿ ಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಎಸ್ಆರ್ಹೆಚ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಹೆಚ್ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೊದಲ ಓವರ್ನಲ್ಲೇ ಮಿಚೆಲ್ ಸ್ಟಾರ್ಕ್ ಆಘಾತ ನೀಡಿದ್ದರು.
ಮೊದಲ ಓವರ್ನ 5ನೇ ಎಸೆತದಲ್ಲಿ ಅಭಿಷೇಕ್ ಶರ್ಮಾ (2) ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸ್ಟಾರ್ಕ್ ಶುಭಾರಂಭ ಮಾಡಿದ್ದರು. ಇದಾದ ಬಳಿಕ ಟ್ರಾವಿಸ್ ಹೆಡ್ (0) ವೈಭವ್ ಅರೋರಾಗೆ ವಿಕೆಟ್ ಒಪ್ಪಿಸಿದರು. ಪವರ್ಪ್ಲೇನಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡ ಸನ್ರೈಸರ್ಸ್ ಹೈದರಾಬಾದ್ ಈ ಆಘಾತದಿಂದ ಪಾರಾಗುವ ಮುನ್ನವೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಸನ್ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್ಗಳಲ್ಲಿ 113 ರನ್ಗಳಿಸಿ ಆಲೌಟ್ ಆಯಿತು.
114 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿತು. 2ನೇ ಓವರ್ನಲ್ಲಿ ಸುನಿಲ್ ನರೈನ್ (6) ವಿಕೆಟ್ ಕಳೆದುಕೊಂಡರೂ, ರಹಮಾನುಲ್ಲಾ ಗುರ್ಬಾಝ್ (39) ಹಾಗೂ ವೆಂಕಟೇಶ್ ಅಯ್ಯರ್ (52) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೆಕೆಆರ್ ತಂಡವು 10.3 ಓವರ್ಗಳಲ್ಲಿ 114 ರನ್ ಬಾರಿಸಿ ಗೆಲುವಿನ ನಗೆ ಬೀರಿದರು.
ಅತ್ತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವಿನ ನಗೆ ಬೀರುತ್ತಿದ್ದರೆ, ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡ ಮಾಲಕಿ ಕಾವ್ಯ ಮಾರನ್ ಬಿಕ್ಕಳಿಸಿ ಅಳುತ್ತಿರುವ ದೃಶ್ಯ ಕಂಡು ಬಂತು. ಸೋಲಿನ ನೋವನ್ನು ಅದುಮಿಟ್ಟುಕೊಳ್ಳಲಾಗದೇ ಕಣ್ಣೀರು ಸುರಿಸಿದರು. ಇದೀಗ ಎಸ್ಆರ್ಹೆಚ್ ಮಾಲಕಿಯ ಕಣ್ಣೀರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
A season to be proud of 🧡#KKRvSRH #IPLonJioCinema #IPLFinalonJioCinema pic.twitter.com/rmgo2nU2JM
— JioCinema (@JioCinema) May 26, 2024
ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್) , ಸುನಿಲ್ ನರೈನ್ , ವೆಂಕಟೇಶ್ ಅಯ್ಯರ್ , ಶ್ರೇಯಸ್ ಅಯ್ಯರ್ (ನಾಯಕ) , ರಿಂಕು ಸಿಂಗ್ , ಆಂಡ್ರೆ ರಸೆಲ್ , ರಮಣ್ದೀಪ್ ಸಿಂಗ್ , ಮಿಚೆಲ್ ಸ್ಟಾರ್ಕ್ , ವೈಭವ್ ಅರೋರಾ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ.
ಇದನ್ನೂ ಓದಿ: IPL Winners List 2024: ಐಪಿಎಲ್ನಲ್ಲಿ ಈವರೆಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಗಳಾವುವು? ಇಲ್ಲಿದೆ ಸಂಪೂರ್ಣ ಪಟ್ಟಿ
ಸನ್ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಅಭಿಷೇಕ್ ಶರ್ಮಾ , ರಾಹುಲ್ ತ್ರಿಪಾಠಿ , ಐಡೆನ್ ಮಾರ್ಕ್ರಾಮ್ , ನಿತೀಶ್ ರೆಡ್ಡಿ , ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಪ್ಯಾಟ್ ಕಮಿನ್ಸ್ (ನಾಯಕ) , ಭುವನೇಶ್ವರ್ ಕುಮಾರ್ , ಜಯದೇವ್ ಉನಾದ್ಕತ್ , ಟಿ ನಟರಾಜನ್.
Published On - 7:22 am, Mon, 27 May 24