IPL 2024: ಸೈನ್ಯಕ್ಕೆ ಸೇರಬೇಕೆಂದಿದ್ದ ಹುಡುಗ ಇದೀಗ KKR ವೇಗಿ

IPL 2024 Final KKR vs SRH: ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಗಲಿದೆ. ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೆಕೆಆರ್ ಪರ ಯುವ ವೇಗಿ ಶಾಕಿಬ್ ಹುಸೈನ್ ಕಣಕ್ಕಿಳಿಯಲಿದ್ದಾರಾ ಕಾದು ನೋಡಬೇಕಿದೆ.

IPL 2024: ಸೈನ್ಯಕ್ಕೆ ಸೇರಬೇಕೆಂದಿದ್ದ ಹುಡುಗ ಇದೀಗ KKR ವೇಗಿ
Shakib Hussain
Follow us
ಝಾಹಿರ್ ಯೂಸುಫ್
|

Updated on: May 26, 2024 | 12:09 PM

ಹೆಸರು ಶಾಕಿಬ್ ಹುಸೈನ್… ಕಟುಮಸ್ತಾದ ದೇಹ… ದೇಹದಾರ್ಢ್ಯದೊಂದಿಗೆ ಸಿಕ್ಸ್ ಪ್ಯಾಕ್ ಮೈಕಟ್ಟು. ಒಂದು ಕ್ಷಣ ಈ ಹುಡುಗನನ್ನು ನೋಡಿದ್ರೆ ಆರ್ಮಿಗೆ ಪರ್ಫೆಕ್ಟ್ ಫಿಟ್ ಎನ್ನಬಹುದು. ಆದರೆ ಶಾಕಿಬ್ ಕಾಣಿಸಿಕೊಂಡಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಕ್ಯಾಂಪ್​ನಲ್ಲಿ ಎಂಬುದು ವಿಶೇಷ.

ಮೊದಲೇ ಹೇಳಿದಂತೆ ಶಾಕಿಬ್ ಹುಸೈನ್ ಅವರನ್ನು ನೋಡಿದರೆ ಭಾರತೀಯ ಸೇನೆಗೆ ಯಾಕೆ ಸೇರಬಾರದು? ಎಂದು ಕೇಳದವರಿಲ್ಲ. ಅಂತಹದೊಂದು ಮೈಕಟ್ಟಿನೊಂದಿಗೆ ಯುವ ವೇಗಿ ಮಿಂಚುತ್ತಿದ್ದಾರೆ. ಆದರೆ ಈ ಮೈಕಟ್ಟಿನ ಹಿಂದಿರುವುದು ಕೂಡ ಸೈನ್ಯಕ್ಕೆ ಸೇರಬೇಕೆಂಬ ದೊಡ್ಡ ಕನಸು.

ಬಿಹಾರದ ಗೋಪಾಲ್​ಗಂಜ್ ಮೂಲದವರಾದ ಶಾಕಿಬ್ ಹುಸೈನ್ ಅವರದ್ದು ರೈತಾಪಿ ಕುಟುಂಬ. ಮಳೆ ಬಂದರೆ ಬೆಳೆ, ಮಳೆ ಜಾಸ್ತಿಯಾದರೆ ಬೆಳೆ ನಾಶ… ಹೀಗೆ ಸಾಗುವ ಕುಟುಂಬಕ್ಕೆ ಅಲಿ ಅಹ್ಮದ್ ಹುಸೈನ್ ಆಸರೆ. ಒಂದು ದಿನ ಅಹ್ಮದ್ ಹುಸೈನ್ ಕೆಲಸ ಮಾಡದಿದ್ದರೂ ಇಡೀ ಕುಟುಂಬ ಅರ್ಧ ಹೊಟ್ಟೆಯಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ.

ಹೀಗಾಗಿಯೇ ಶಾಕಿಬ್ ಹುಸೈನ್ ಹದಿಹರೆಯಕ್ಕೂ ಬರುವ ಮುನ್ನವೇ ದೃಢ ಸಂಕಲ್ಪ ತೊಟ್ಟಿದ್ದ. ಅದುವೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬುದು. ಇದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಬದಲಾಗಲಿದೆ ಎಂಬ ನಂಬಿಕೆ ಆತನದ್ದಾಗಿತ್ತು.

ಈ ದೊಡ್ಡ ಕನಸಿನೊಂದಿಗೆ ಶಾಕಿಬ್ ಹುಸೈನ್ ಮನೆಯ ಹತ್ತಿರದಲ್ಲೇ ಇದ್ದ ಮೈದಾನದಲ್ಲಿ ಪ್ರತಿ ದಿನ ಮುಂಜಾನೆ ಓಡುತ್ತಿದ್ದ. ಸೇನೆಯ ಆಯ್ಕೆಗೆ ಬೇಕಾದ ಕಸರತ್ತುಗಳನ್ನು ಸಹ ಆರಂಭಿಸಿದ್ದ. ಈ ವೇಳೆ ಆತನನ್ನು ಗಮನಿಸಿದ ಒಂದಷ್ಟು ಮಂದಿ ಕ್ರಿಕೆಟ್ ಆಡುವಂತೆ ಸಲಹೆ ನೀಡಿದ್ದರು.

ಅದರಲ್ಲೂ ಪ್ರಮುಖರೆನಿಸಿಕೊಂಡಿದ್ದ ತುಣವ್ ಗಿರಿ, ಕುಮಾರ್ ಗಿರಿ, ಜಾವೇದ್ ಸರ್, ರಾಬಿನ್ ಸರ್ ಅವರು ಅಹ್ಮದ್ ಹುಸೈನ್ ಅವರಿಗೆ ಮಗನನ್ನು ಕ್ರಿಕೆಟ್ ಪಟು ಮಾಡುವಂತೆ ತಿಳಿ ಹೇಳಿದ್ದರು. ಏಕೆಂದರೆ ಆತನಲ್ಲಿ ಅತ್ಯುತ್ತಮ ವೇಗವಿದೆ. ಇದರಿಂದ ಉತ್ತಮ ಬೌಲರ್ ಆಗಬಹುದು ಎಂದು ತಿಳಿಸಿದ್ದರು.

ಇದಕ್ಕೂ ಮುನ್ನವೇ ಶಾಕಿಬ್ ಹುಸೈನ್ ಟೆನಿಸ್ ಬಾಲ್ ಕ್ರಿಕೆಟ್ ಮಾತ್ರ ಆಡಿದ್ದರು. ಇದಾಗ್ಯೂ ಕ್ರಿಕೆಟ್ ಮೇಲೆ ವಿಪರೀತ ಆಸಕ್ತಿ ಹೊಂದಿದ್ದ. ಆದರೆ ಲೆದರ್ ಬಾಲ್ ಕ್ರಿಕೆಟ್ ಆಡಲು ಉತ್ತಮ ಸ್ಪೈಕ್ ಶೂಸ್​ಗಳ ಅವಶ್ಯಕತೆಯಿತ್ತು.

ಸ್ಪೈಕ್ ಶೂಸ್ ಖರೀದಿಸಲು 10 ಸಾವಿರದಿಂದ 15 ಸಾವಿರ ಬೇಕಿತ್ತು. ನಾವು ಶೂಸ್ ಖರೀದಿಸಲು ಮುಂದಾದರೆ, ತಿನ್ನುವುದಾದರು ಏನು? ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅಂದರೆ ಮಗನ ಕನಸಿನ ಜೊತೆ ಮೊದಲ ಹೆಜ್ಜೆಯನ್ನಿಡಲು ತಂದೆಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಿತ್ತು.

ಇದಾಗ್ಯೂ ತಾಯಿಯು ತನ್ನ ಬಳಿಯಿದ್ದ ಚಿನ್ನಾಭರಣಗಳನ್ನು ಮಾರಿ ಮಗನಿಗಾಗಿ ಸ್ಪೈಕ್ ಶೂಸ್ ಕೊಡಿಸಿದ್ದರು. ಈ ಶೂಸ್​ನೊಂದಿಗೆ ಹೊಸ ಕನಸು ಕಟ್ಟಿಕೊಂಡ ಶಾಕಿಬ್ ತನ್ನ ವೇಗದ ಬೌಲಿಂಗ್​ನಿಂದ ಬಿಹಾರ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡರು.

ಅಲ್ಲದೆ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದು 4 ವಿಕೆಟ್ ಕಬಳಿಸಿ ಮಿಂಚಿದರು. ಈ ಪ್ರದರ್ಶನದ ಪರಿಣಾಮ ಐಪಿಎಲ್ 2023 ರಲ್ಲಿ ಸಿಎಸ್​ಕೆ ತಂಡವು ನೆಟ್ ಬೌಲರ್ ಆಗಿ ಆಯ್ಕೆ ಮಾಡಿಕೊಂಡಿತು. ಆದರೆ ಶಾಕಿಬ್ ಅವರ ಕನಸು ಐಪಿಎಲ್ ತಂಡದಲ್ಲಿ ಸ್ಥಾನ ಪಡೆಯುವುದಾಗಿತ್ತು.

ಹೀಗಾಗಿ ಈ ಬಾರಿ ಕೂಡ ಐಪಿಎಲ್ ಹರಾಜಿಗೆ ಹೆಸರು ನೀಡಿದ್ದರು. ಆದರೆ ಮೊದಲ ಸುತ್ತಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಈ ಬಾರಿ ಕೂಡ ಶಾಕಿಬ್ ಹುಸೈನ್ ಐಪಿಎಲ್ ಕನಸು ಕೈ ಬಿಟ್ಟಿದ್ದರು.

ಅಲ್ಲದೆ ಕೋಚ್​ ರಾಬಿನ್ ಸಿಂಗ್​ಗೆ ಕರೆ ಮಾಡಿ ತನ್ನ ಬೇಸರವನ್ನು ಹಂಚಿಕೊಂಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ನಡೆದ ಕೊನೆಯ ಸುತ್ತಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಶಾಕಿಬ್ ಹುಸೈನ್ ಅವರನ್ನು 20 ಲಕ್ಷ ರೂ.ಗೆ ಖರೀದಿಸಿತು. ಇತ್ತ ನಿನ್ನನ್ನು ಕೆಕೆಆರ್ ಖರೀದಿಸಿದೆ ಎಂದರೂ ಶಾಕಿಬ್ ನಂಬುವ ಪರಿಸ್ಥಿತಿಯಲ್ಲಿರಲಿಲ್ಲ.

ಯಾವಾಗ ಮನೆ ಮುಂದೆ ಕ್ರಿಕೆಟ್ ಪ್ರೇಮಿಗಳು ನೆರೆಯಲಾರಂಭಿಸಿದರೋ ಶಾಕಿಬ್ ಹುಸೈನ್ ವಾಸ್ತವ ಲೋಕಕ್ಕೆ ಮರಳಿದ್ದರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನನ್ನು ಖರೀದಿಸಿರುವುದು ಖಚಿತವಾಯಿತು. ಇಡೀ ಊರಿಗೆ ಊರೇ ಶಾಕಿಬ್ ಸಾಧನೆಗಾಗಿ ಸಂಭ್ರಮಿಸಿತು.

ನಮ್ಮ ಮಗ ಅಪ್ಪ-ಅಮ್ಮನ ಕಷ್ಟಗಳನ್ನು ತುಂಬಾ ಅರ್ಥ ಮಾಡಿಕೊಳ್ತಾನೆ. ತುಂಬಾ ಒಳ್ಳೆಯ ಹುಡುಗ. ಇದಕ್ಕಿಂತ ನಮಗೆ ಇನ್ನೇನು ಬೇಕು ಎನ್ನುತ್ತಾರೆ ಶಾಕಿಬ್ ಹುಸೈನ್ ತಂದೆ ಅಹ್ಮದ್.

145 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಶಾಕಿಬ್ ಹುಸೈನ್ ಇದೀಗ ಕೆಕೆಆರ್ ತಂಡದಲ್ಲಿದ್ದಾರೆ. ಆದರೆ ಈ ಬಾರಿಯ ಐಪಿಎಲ್​ನಲ್ಲಿ ಯುವ ವೇಗಿಗೆ ಕಣಕ್ಕಿಳಿಯಲು ಅವಕಾಶ ಸಿಕ್ಕಿಲ್ಲ. ಇದಾಗ್ಯೂ ಕೆಕೆಆರ್​ ಕ್ಯಾಂಪ್​ನಲ್ಲಿ ತನ್ನ ವೇಗದಿಂದಲೇ ಶಾಕಿಬ್ ಸಂಚಲನ ಸೃಷ್ಟಿಸಿದ್ದಾರೆ.

ಅಂದಹಾಗೆ ಪ್ರಸ್ತುತ 145 ಕಿ.ಮೀ ವೇಗದಲ್ಲಿ ಚೆಂಡೆಸೆಯುತ್ತಿರುವ ಶಾಕಿಬ್ ಹುಸೈನ್ ಅವರ ವಯಸ್ಸು ಕೇವಲ 20 ವರ್ಷ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತ ತಂಡಕ್ಕೆ ಮತ್ತೋರ್ವ ಸ್ಪೀಡ್ ಮಾಸ್ಟರ್ ಸಿಕ್ಕರೂ ಅಚ್ಚರಿಪಡಬೇಕಿಲ್ಲ.

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ