ಒಂದೇ ಓವರ್‌ನಲ್ಲಿ 100 ಮೀಟರ್ಗೂ ಅಧಿಕ ಉದ್ದದ 4 ಸಿಕ್ಸರ್ ಸಿಡಿಸಿದ ಪೊಲಾರ್ಡ್! ವಿಡಿಯೋ ನೋಡಿ
CPL 2023: ಪ್ರಸ್ತುತ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಕೀರನ್ ಪೊಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಕೇವಲ 17.1 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಂದ ಮಣಿಸಿದೆ.
ಪ್ರಸ್ತುತ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ (CPL 2023) 12ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಕೀರನ್ ಪೊಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ( SKN Patriots vs Trinbago Knight Riders) ಕೇವಲ 17.1 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ತಂಡ 179 ರನ್ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ತಂಡ ನಿಕೋಲಸ್ ಪೂರನ್ (Nicholas Pooran) ಅವರ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಹಾಗೂ ನಾಯಕ ಪೊಲಾರ್ಡ್ (Kieron Pollard) ಅವರು ಅಜೇಯ 37 ರನ್ ಸಹಾಯದಿಂದ ಸುಲಭವಾಗಿ ಪಂದ್ಯವನ್ನು ಗೆದ್ದು ಬೀಗಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಲಿವಿಸ್ 10 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಲಿವಿಸ್ ವಿಕೆಟ್ ಪತನದ ವೇಳೆಗೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮತ್ತೊಬ್ ಆರಂಭಿಕ ಆಂಡ್ರೆ ಫ್ಲೆಚರ್, 17 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಸಿಕ್ಸರ್ ಸಹಿತ 32 ರನ್ ಸಿಡಿಸಿದರು. ಈ ಇಬ್ಬರೂ ವಿಕೆಟ್ ಪತನದ ಬಳಿಕ ತಂಡದ ಮಧ್ಯಮ ಕ್ರಮಾಂಕ ಅಲ್ಪ ಮೊತ್ತಕ್ಕೆ ಕುಸಿಯಿತು.
IND vs WI: ಹಾರ್ದಿಕ್ ಹಾಕಿದ ಸವಾಲಿಗೆ ತಕ್ಕ ಪ್ರತ್ಯುತ್ತರ ನೀಡಿದ ಪೂರನ್..! ವಿಡಿಯೋ ನೋಡಿ
ಅಜೇಯ 62 ರನ್ ಸಿಡಿಸಿದ ರುದರ್ಫೋರ್ಡ್
ಆದರೆ ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ನಾಯಕ ಶೆರ್ಫೇನ್ ರುದರ್ಫೋರ್ಡ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 62 ರನ್ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಕಾರ್ಬಿನ್ ಬಾಷ್ 30 ರನ್‌ಗಳ ಕೊಡುಗೆ ನೀಡಿದರು. ಹೀಗಾಗಿ ಸೇಂಟ್ ಕಿಟ್ಸ್ ತಂಡ 20 ಓವರ್‌ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಅಬ್ಬರಿಸಿದ ಪೂರನ್
ಈ ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರೂ ಒಂದಂಕಿಗೆ ಪೆವಲಿಯನ್ ಸೇರಿಕೊಂಡರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಪೂರನ್ ಸ್ಫೋಟಕ ಬ್ಯಾಟಿಂಗ್ ಮಾಡಿ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಚಚ್ಚಿದರು. ಪೂರನ್ಗೆ ಸಾಥ್ ನೀಡಿದ ಲೋರ್ಕನ್ ಟಕರ್ ಕೂಡ 36 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಬಳಿಕ ಕ್ರೀಸ್ಗೆ ಬಂದ ನಾಯಕ ಪೊಲಾರ್ಡ್ ಮೈದಾನದಲ್ಲಿ ಸುನಾಮಿ ಎಬ್ಬಿಸಿದರು.
ಸುನಾಮಿ ಎಬ್ಬಿಸಿದ ಪೊಲಾರ್ಡ್
ಪೂರನ್ ವಿಕೆಟ್ ಬಳಿಕ ಮೈದಾನಕ್ಕೆ ಬಂದ ಪೊಲಾರ್ಡ್, 15 ನೇ ಓವರ್ ಬೌಲ್ ಮಾಡಲು ಬಂದ ಇಜಾರುಲ್ಹಕ್ ನವೀದ್ ಅವರ ಓವರ್ನ ನಾಲ್ಕು ಎಸೆತಗಳನ್ನು ಸಿಕ್ಸರ್ಗಟ್ಟಿದರು. ಓವರ್ ಪ್ರಾರಂಭವಾದಾಗ, ಪೊಲಾರ್ಡ್ ಆರು ಎಸೆತಗಳಲ್ಲಿ ಮೂರು ರನ್ ಗಳಿಸಿದ್ದರು. ಆದರೆ ಓವರ್ ಮುಗಿಯುವ ವೇಳೆಗೆ ತಮ್ಮ ಖಾತೆಗೆ 29 ರನ್ ಹಾಕಿಕೊಂಡಿದ್ದರು. ಅದರಲ್ಲೂ ಈ ಸಿಕ್ಸರ್ಗಳ ವಿಶೇಷತೆ ಎಂದರೆ ಈ ನಾಲ್ಕು ಸಿಕ್ಸರ್ಗಳು ನೂರು ಮೀಟರ್ಗೂ ಅಧಿಕ ದೂರ ಹೋಗಿ ಬಿದ್ದವು.
Wowza 🤩 @KieronPollard55 SMASHES 4 💯 meter sixes in a row 🔥 #CPL23 #SKNPvTKR #CricketPlayedLouder #BiggestPartyInSport #BetBarter pic.twitter.com/qVpn0fRKA1
— CPL T20 (@CPL) August 28, 2023
ಪೊಲಾರ್ಡ್ ಅಬ್ಬರದಿಂದಾಗಿ ಈ ಓವರ್ ಮುಗಿಯುವ ವೇಳೆಗೆ ಸೇಂಟ್ ಕಿಟ್ಸ್ ತಂಡ ಸೋಲು ಖಚಿತವಾಗಿತ್ತು. ಓವರ್ ಪ್ರಾರಂಭವಾಗುವ ಮೊದಲು, ಟ್ರಿನ್‌ಬಾಗೊ ನೈಟ್ ರೈಡರ್ಸ್ ಗೆಲುವಿಗೆ 36 ಎಸೆತಗಳಲ್ಲಿ 59 ರನ್‌ಗಳ ಅಗತ್ಯವಿತ್ತು. ಆದರೆ 15ನೇ ಓವರ್‌ನಲ್ಲಿ ಪೊಲಾರ್ಡ್ 26 ರನ್ ಚಚ್ಚವು ಮೂಲಕ ತಂಡವನ್ನು 18 ನೇ ಓವರ್‌ನಲ್ಲಿ ಗೆಲುವಿನ ದಡ ಸೇರಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ