ಒಂದೇ ಓವರ್​ನಲ್ಲಿ 100 ಮೀಟರ್​ಗೂ ಅಧಿಕ ಉದ್ದದ 4 ಸಿಕ್ಸರ್ ಸಿಡಿಸಿದ ಪೊಲಾರ್ಡ್​! ವಿಡಿಯೋ ನೋಡಿ

|

Updated on: Aug 28, 2023 | 1:18 PM

CPL 2023: ಪ್ರಸ್ತುತ ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಕೀರನ್ ಪೊಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಕೇವಲ 17.1 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಂದ ಮಣಿಸಿದೆ.

ಒಂದೇ ಓವರ್​ನಲ್ಲಿ 100 ಮೀಟರ್​ಗೂ ಅಧಿಕ ಉದ್ದದ 4 ಸಿಕ್ಸರ್ ಸಿಡಿಸಿದ ಪೊಲಾರ್ಡ್​! ವಿಡಿಯೋ ನೋಡಿ
ಕೀರಾನ್ ಪೊಲಾರ್ಡ್
Follow us on

ಪ್ರಸ್ತುತ ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ (CPL 2023) 12ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಕೀರನ್ ಪೊಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ (
SKN Patriots vs Trinbago Knight Riders) ಕೇವಲ 17.1 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಂದ ಮಣಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ತಂಡ 179 ರನ್‌ ಟಾರ್ಗೆಟ್ ಸೆಟ್ ಮಾಡಿತು. ಈ ಗುರಿ ಬೆನ್ನತ್ತಿದ ನೈಟ್ ರೈಡರ್ಸ್ ತಂಡ ನಿಕೋಲಸ್ ಪೂರನ್ (Nicholas Pooran) ಅವರ 61 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಹಾಗೂ ನಾಯಕ ಪೊಲಾರ್ಡ್ (Kieron Pollard) ಅವರು ಅಜೇಯ 37 ರನ್ ಸಹಾಯದಿಂದ ಸುಲಭವಾಗಿ ಪಂದ್ಯವನ್ನು ಗೆದ್ದು ಬೀಗಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಲಿವಿಸ್ 10 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಲಿವಿಸ್ ವಿಕೆಟ್ ಪತನದ ವೇಳೆಗೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮತ್ತೊಬ್ ಆರಂಭಿಕ ಆಂಡ್ರೆ ಫ್ಲೆಚರ್, 17 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಸಿಕ್ಸರ್ ಸಹಿತ 32 ರನ್ ಸಿಡಿಸಿದರು. ಈ ಇಬ್ಬರೂ ವಿಕೆಟ್ ಪತನದ ಬಳಿಕ ತಂಡದ ಮಧ್ಯಮ ಕ್ರಮಾಂಕ ಅಲ್ಪ ಮೊತ್ತಕ್ಕೆ ಕುಸಿಯಿತು.

IND vs WI: ಹಾರ್ದಿಕ್ ಹಾಕಿದ ಸವಾಲಿಗೆ ತಕ್ಕ ಪ್ರತ್ಯುತ್ತರ ನೀಡಿದ ಪೂರನ್..! ವಿಡಿಯೋ ನೋಡಿ

ಅಜೇಯ 62 ರನ್ ಸಿಡಿಸಿದ ರುದರ್ಫೋರ್ಡ್

ಆದರೆ ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ನಾಯಕ ಶೆರ್ಫೇನ್ ರುದರ್ಫೋರ್ಡ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 62 ರನ್ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಕಾರ್ಬಿನ್ ಬಾಷ್ 30 ರನ್​ಗಳ ಕೊಡುಗೆ ನೀಡಿದರು. ಹೀಗಾಗಿ ಸೇಂಟ್ ಕಿಟ್ಸ್ ತಂಡ 20 ಓವರ್‌ಗಳಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಅಬ್ಬರಿಸಿದ ಪೂರನ್

ಈ ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರೂ ಒಂದಂಕಿಗೆ ಪೆವಲಿಯನ್ ಸೇರಿಕೊಂಡರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಪೂರನ್ ಸ್ಫೋಟಕ ಬ್ಯಾಟಿಂಗ್ ಮಾಡಿ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಚಚ್ಚಿದರು. ಪೂರನ್​ಗೆ ಸಾಥ್ ನೀಡಿದ ಲೋರ್ಕನ್ ಟಕರ್ ಕೂಡ 36 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಬಳಿಕ ಕ್ರೀಸ್​ಗೆ ಬಂದ ನಾಯಕ ಪೊಲಾರ್ಡ್ ಮೈದಾನದಲ್ಲಿ ಸುನಾಮಿ ಎಬ್ಬಿಸಿದರು.

ಸುನಾಮಿ ಎಬ್ಬಿಸಿದ ಪೊಲಾರ್ಡ್​

ಪೂರನ್ ವಿಕೆಟ್ ಬಳಿಕ ಮೈದಾನಕ್ಕೆ ಬಂದ ಪೊಲಾರ್ಡ್, 15 ನೇ ಓವರ್‌ ಬೌಲ್ ಮಾಡಲು ಬಂದ ಇಜಾರುಲ್ಹಕ್ ನವೀದ್ ಅವರ ಓವರ್​ನ ನಾಲ್ಕು ಎಸೆತಗಳನ್ನು ಸಿಕ್ಸರ್​ಗಟ್ಟಿದರು. ಓವರ್ ಪ್ರಾರಂಭವಾದಾಗ, ಪೊಲಾರ್ಡ್ ಆರು ಎಸೆತಗಳಲ್ಲಿ ಮೂರು ರನ್ ಗಳಿಸಿದ್ದರು. ಆದರೆ ಓವರ್ ಮುಗಿಯುವ ವೇಳೆಗೆ ತಮ್ಮ ಖಾತೆಗೆ 29 ರನ್ ಹಾಕಿಕೊಂಡಿದ್ದರು. ಅದರಲ್ಲೂ ಈ ಸಿಕ್ಸರ್​ಗಳ ವಿಶೇಷತೆ ಎಂದರೆ ಈ ನಾಲ್ಕು ಸಿಕ್ಸರ್​ಗಳು ನೂರು ಮೀಟರ್​ಗೂ ಅಧಿಕ ದೂರ ಹೋಗಿ ಬಿದ್ದವು.

ಪೊಲಾರ್ಡ್​ ಅಬ್ಬರದಿಂದಾಗಿ ಈ ಓವರ್ ಮುಗಿಯುವ ವೇಳೆಗೆ ಸೇಂಟ್ ಕಿಟ್ಸ್ ತಂಡ ಸೋಲು ಖಚಿತವಾಗಿತ್ತು. ಓವರ್‌ ಪ್ರಾರಂಭವಾಗುವ ಮೊದಲು, ಟ್ರಿನ್‌ಬಾಗೊ ನೈಟ್ ರೈಡರ್ಸ್ ಗೆಲುವಿಗೆ 36 ಎಸೆತಗಳಲ್ಲಿ 59 ರನ್‌ಗಳ ಅಗತ್ಯವಿತ್ತು. ಆದರೆ 15ನೇ ಓವರ್​ನಲ್ಲಿ ಪೊಲಾರ್ಡ್ 26 ರನ್ ಚಚ್ಚವು ಮೂಲಕ ತಂಡವನ್ನು 18 ನೇ ಓವರ್‌ನಲ್ಲಿ ಗೆಲುವಿನ ದಡ ಸೇರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ