
ಐಪಿಎಲ್ (IPL2022) ಟೂರ್ನಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮೈದಾನದಲ್ಲಿ ಕ್ರಿಕೆಟಿಗರ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಗಳು ಕೂಡ ಕಾತುರರಾಗಿದ್ದಾರೆ. ಐಪಿಎಲ್ ಸನಿಹದ ಬೆನ್ನಲ್ಲೇ ಹಲವು ಕ್ರಿಕೆಟಿಗರು ವೈವಾಹಿಕ ಜೀವನಕ್ಕೆ ಕಾಲಿರಿಸುವ ಮೂಲಕ ತಮ್ಮ ನೂತನ ಬದುಕನ್ನು ಆರಂಭಿಸುತ್ತಿದ್ದಾರೆ. ಅಂತಹವರಲ್ಲಿ ಆರ್ಸಿಬಿ ಆಲ್‌ರೌಂಡರ್ ಮ್ಯಾಕ್ಸ್‌ವೆಲ್ ಕೂಡ ಸೇರಿದ್ದಾರೆ. ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಬಹು ದಿನದ ಗೆಳತಿ ಹಾಗೂ ಭಾರತೀಯ ಮೂಲದ ವಿನೀರಮನ್ ಅವರನ್ನು ವಿವಾಹವಾದರು. ಈ ಇಬ್ಬರ ಮದುವೆಯಲ್ಲಿ ಅಷ್ಟೇನೂ ವಿಶೇಷತೆ ಇರದಿದ್ದರೂ, ನಾವೀಗ ಹೇಳ ಹೊರಟ್ಟಿರುವ ಕ್ರಿಕೆಟಿಗನ ಮುದುವೆ ಕೊಂಚ ಭಿನ್ನವಾಗಿದೆ. ಇತ್ತೀಚೆಗೆ ನ್ಯೂಜಿಲೆಂಡ್ ಸ್ಟಾರ್ ಕ್ರಿಕೆಟಿಗ, ಕೆಕೆಆರ್ ಆಲ್ ರೌಂಡರ್ ಟಿಮ್ ಸೌಥಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತನ್ನ ಗೆಳತಿ ಬ್ರ್ಯಾ ಫಾಹಿನಿಯೊಂದಿಗೆ ಜೀವನದ ಹೊಸ ಪ್ರಯಾಣವನ್ನು ಪ್ರಾರಂಭಿಸಿದರು. ಮದುವೆಯ ನಂತರ ಸೌಥಿ ತಮ್ಮ ಮದುವೆಯ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದು, ಹಲವು ಕ್ರಿಕೆಟಿಗರು ಹಾಗೂ ಅಭಿಮಾನಿಗಳು ನವ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.
ಮದುವೆಗೂ ಮುನ್ನ..
ಸೌಥಿ-ಬ್ರಿಯಾ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಸಹಜೀವನವನ್ನು ಸಹ ಹಲವು ದಿನಗಳಿಂದ ನಡೆಸುತ್ತಿದ್ದರು. ಅವರ ಪ್ರೀತಿಯ ಸಂಕೇತವಾಗಿ, ಅವರಿಗೆ ಇಂಡಿ ಮೇ ಸೌಥಿ ಮತ್ತು ಸ್ಲೋನೆ ಅವಾ ಸೌಥಿ ಎಂಬ ಇಬ್ಬರು ಮಕ್ಕಳಿದ್ದಾರೆ. ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರ ಸೌಥಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಈ ಸ್ಟಾರ್ ಕ್ರಿಕೆಟಿಗನನ್ನು ರೂ 1.5 ಕೋಟಿಗೆ ಖರೀದಿಸಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹಾಲಿ ಚಾಂಪಿಯನ್ ಚೆನ್ನೈ ತಂಡವನ್ನು ಎದುರಿಸಲಿದ್ದು, ಮಾರ್ಚ್ 26 ರಂದು ಮುಂಬೈನಲ್ಲಿ ಪಂದ್ಯ ನಡೆಯಲಿದೆ.
ಕೆಕೆಆರ್ ಉಳಿಸಿಕೊಂಡಿದ್ದ ಆಟಗಾರರು
ಆಂಡ್ರೆ ರಸೆಲ್ – 12 ಕೋಟಿ ರೂ
ವರುಣ್ ಚಕ್ರವರ್ತಿ – 8 ಕೋಟಿ ರೂ
ವೆಂಕಟೇಶ್ ಅಯ್ಯರ್ – 8 ಕೋಟಿ ರೂ
ಸುನಿಲ್ ನರೈನ್ – 6 ಕೋಟಿ ರೂ
ಕೆಕೆಆರ್ ಹರಾಜಿನಲ್ಲಿ ಖರೀದಿಸಿದ ಆಟಗಾರರು
ಪ್ಯಾಟ್ ಕಮ್ಮಿನ್ಸ್ – 7.75 ಕೋಟಿ ರೂ
ಶ್ರೇಯಸ್ ಅಯ್ಯರ್ – 12.25 ಕೋಟಿ ರೂ
ನಿತೀಶ್ ರಾಣಾ – 8 ಕೋಟಿ ರೂ
ಶಿವಂ ಮಾವಿ – 7.25 ಕೋಟಿ ರೂ
ಶೆಲ್ಡನ್ ಜಾಕ್ಸನ್ – 60 ಲಕ್ಷ ರೂ
ಅಜಿಂಕ್ಯ ರಹಾನೆ – 1 ಕೋಟಿ ರೂ
ರಿಂಕು ಸಿಂಗ್ – 55 ಲಕ್ಷ
ಅನುಕೂಲ್ ರಾಯ್ – 20 ಲಕ್ಷ
ಅಭಿಜಿತ್ ತೋಮರ್ – 40 ಲಕ್ಷ
ಪ್ರಥಮ್ ಸಿಂಗ್ – 20 ಲಕ್ಷ
ರಾಸಿಖ್ ಸಲಾಮ್ – 20 ಲಕ್ಷ
ಅಶೋಕ್ ಶರ್ಮಾ – 55 ಲಕ್ಷ
ಬಾಬಾ ಇಂದರ್‌ಜಿತ್ – 20 ಲಕ್ಷ
ಚಾಮಿಕಾ ಕರುಣಾರತ್ನ – 50 ಲಕ್ಷ
ಸ್ಯಾಮ್ ಬಿಲ್ಲಿಂಗ್ಸ್ – 2 ಕೋಟಿ
ಅಲೆಕ್ಸ್ ಹೇಲ್ಸ್ – 1.5 ಕೋಟಿ
ಟಿಮ್ ಸೌಥಿ – 1.5 ಕೋಟಿ
ಉಮೇಶ್ ಯಾದವ್ – 2 ಕೋಟಿ
ಮೊಹಮ್ಮದ್ ನಬಿ – 1 ಕೋಟಿ
ಅಮನ್ ಖಾನ್ – 20 ಲಕ್ಷ
ಕೋಲ್ಕತ್ತಾ ಎರಡು ಬಾರಿ ಚಾಂಪಿಯನ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 15 ಋತುಗಳಲ್ಲಿ ಎರಡು ಬಾರಿ ಚಾಂಪಿಯನ್ ಆಗಿದೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಈ ತಂಡ 2012 ಮತ್ತು 2014ರಲ್ಲಿ ಚಾಂಪಿಯನ್ ಆಗಿತ್ತು. ಆದಾಗ್ಯೂ, 2014 ರಿಂದ ಕೋಲ್ಕತ್ತಾದ ಪ್ರಯಾಣವು ಉತ್ತಮವಾಗಿರಲಿಲ್ಲ. ಕಳೆದ ಋತುವಿನಲ್ಲಿ ಫೈನಲ್ ತಲುಪಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದರಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಒಟ್ಟಾರೆ, ಈ ತಂಡವು ಏಳು ಬಾರಿ ನಾಕೌಟ್ ಪಂದ್ಯಗಳನ್ನು ತಲುಪಿದೆ ಮತ್ತು ಎರಡು ಬಾರಿ ಮಾತ್ರ ಫೈನಲ್ ಗೆದ್ದಿದೆ.
ಇದನ್ನೂ ಓದಿ:IPL 2022: ತಂಡದ ವಾತಾವರಣವನ್ನು ಬದಲಾಯಿಸುತ್ತೇನೆ! ಕೆಕೆಆರ್ ಅಭಿಮಾನಿಗಳಿಗೆ ಶ್ರೇಯಸ್ ಭರವಸೆ
Published On - 6:23 pm, Mon, 21 March 22