IPL 2022: ಒಂದೇ ಓವರ್‌ನಲ್ಲಿ 10 ಬಾಲ್ ಎಸೆದು ಅನಗತ್ಯ ದಾಖಲೆ ಬರೆದಿದ್ದ ಇಬ್ಬರು ಆಲ್‌ರೌಂಡರ್‌ಗಳು ಇವರೇ..
IPL 2022: ಕ್ರಿಕೆಟ್ ದುನಿಯಾದಲ್ಲಿ ಪ್ರತಿಯೊಂದು ಪಂದ್ಯಗಳು ನಡೆದಾಗಲೂ ಒಂದಲ್ಲ ಒಂದು ರೀತಿಯಲ್ಲಿ ಹಲವು ದಾಖಲೆಗಳು ಹುಟ್ಟಿಕ್ಕೊಳ್ಳುತ್ತವೆ. ಜೊತೆಗೆ ಹೊಸದಾಗಿ ಹಲವು ದಾಖಲೆಗಳು ಸೃಷ್ಟಿಯಾಗುತ್ತವೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಯಾವುದೇ ಆಟಗಾರ ಕೆಲವು ಅನಗತ್ಯ ದಾಖಲೆಗಳನ್ನು ತನ್ನ ಹೆಸರನ್ನು ನೋಂದಾಯಿಸಲು ಬಯಸುವುದಿಲ್ಲ

ಕ್ರಿಕೆಟ್ ದುನಿಯಾದಲ್ಲಿ ಪ್ರತಿಯೊಂದು ಪಂದ್ಯಗಳು ನಡೆದಾಗಲೂ ಒಂದಲ್ಲ ಒಂದು ರೀತಿಯಲ್ಲಿ ಹಲವು ದಾಖಲೆಗಳು ಹುಟ್ಟಿಕ್ಕೊಳ್ಳುತ್ತವೆ. ಜೊತೆಗೆ ಹೊಸದಾಗಿ ಹಲವು ದಾಖಲೆಗಳು ಸೃಷ್ಟಿಯಾಗುತ್ತವೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಯಾವುದೇ ಆಟಗಾರ ಕೆಲವು ಅನಗತ್ಯ ದಾಖಲೆಗಳನ್ನು ತನ್ನ ಹೆಸರನ್ನು ನೋಂದಾಯಿಸಲು ಬಯಸುವುದಿಲ್ಲ. ಇಂತಹ ಆಟಗಾರರಿಂದ ಕೆಲವೊಮ್ಮೆ ತಂಡಕ್ಕೆ ಗಂಭೀರ ಹಾನಿಯಾಗುವುದರಲ್ಲಿ ಸಂದೇಹವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ವಿಷಯಕ್ಕೆ ಬಂದರೆ.. ಇಂತಹ ಹಲವು ಕೆಟ್ಟ ದಾಖಲೆಗಳು ಸೃಷ್ಟಿಯಾಗಿವೆ. ಇದರ ಸಾಲಿನಲ್ಲಿ ಇಬ್ಬರು ಆಲ್‌ರೌಂಡರ್‌ಗಳು ಅನಗತ್ಯ ದಾಖಲೆ ನಿರ್ಮಿಸಿದ್ದಾರೆ. ಈ ಆಲ್ ರೌಂಡರ್‌ಗಳು ಐಪಿಎಲ್ನ ಒಂದು ಓವರ್‌ನಲ್ಲಿ ಬರೋಬ್ಬರಿ 10 ಎಸೆತಗಳನ್ನು ಎಸೆದಿದ್ದು ತಂಡಕ್ಕೆ ದುಬಾರಿ ಎನಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್ ಎಂದರೆ ಪ್ರತಿ ಬಾಲ್ ತುಂಬಾ ಮೌಲ್ಯಯುತವಾಗಿರುತ್ತದೆ. ಆದರೆ, ಈ ಬೌಲರ್‌ಗಳು ಒಂದು ಓವರ್‌ನಲ್ಲಿ ಹೆಚ್ಚುವರಿ ಎಸೆತಗಳನ್ನು ಎಸೆಯುವ ಮೂಲಕ ತಮ್ಮ ತಂಡಕ್ಕೆ ತುಂಬಾ ದುಬಾರಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಇಬ್ಬರು ಆಲ್ ರೌಂಡರ್‌ಗಳು ಯಾರು ಎಂಬುದಕ್ಕೆ ಇಲ್ಲಿದೆ ಉತ್ತರ.
ರಾಹುಲ್ ತೆವಾಟಿಯಾ: ಐಪಿಎಲ್ 2020 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ರಾಹುಲ್ ತೆವಾಟಿಯಾ, RCB ವಿರುದ್ಧದ ಪಂದ್ಯದಲ್ಲಿ ಒಂದು ಓವರ್‌ನಲ್ಲಿ 10 ಎಸೆತಗಳನ್ನು ಎಸೆದಿದ್ದರು. ಇದು ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ 9ನೇ ಓವರ್ ಆಗಿತ್ತು. ಈ ಓವರ್‌ನಲ್ಲಿ ತೆವಾಟಿಯಾ ಒಟ್ಟು 8 ರನ್ ಬಿಟ್ಟುಕೊಟ್ಟರು. ತೆವಾಟಿಯಾ ಈ ಓವರ್‌ನಲ್ಲಿ ಸತತ ಮೂರು ವೈಡ್ ಬಾಲ್‌ಗಳನ್ನು ಎಸೆದಿದ್ದರು. 0 0 nb 1 2 wd wd wd 1 0 ಹೀಗೆ ಸಾಗಿತ್ತು ರಾಹುಲ್ ತೆವಾಟಿಯಾ ಓವರ್.
ಡ್ವೇನ್ ಬ್ರಾವೋ: ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವಾಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅತ್ಯಂತ ಕೆಟ್ಟ ಓವರ್ ಬೌಲ್ ಮಾಡಿದ್ದರು. ಈ ಓವರ್‌ನಲ್ಲಿ ಬ್ರಾವೋ 4 ವೈಡ್ ಬಾಲ್‌ಗಳನ್ನು ಎಸೆದಿದ್ದರು. ಆದರೆ, ಬ್ರಾವೋ ಈ ಓವರ್‌ನಲ್ಲಿ ಕೇವಲ 6 ರನ್‌ಗಳನ್ನು ಬಿಟ್ಟುಕೊಟ್ಟರು. ಬ್ರಾವೋ ಹಾಕಿದ್ದ ಓವರ್ ವಿವರ ಹೀಗಿದೆ .. wd wd 0 0 1 0 1 wd wd 0
IPL 2022 ರ ಸಂಪೂರ್ಣ ವೇಳಾಪಟ್ಟಿ ಹೀಗಿದೆ
1. ಮಾರ್ಚ್ 26, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ವಾಂಖೆಡೆ ಸ್ಟೇಡಿಯಂ
2. ಮಾರ್ಚ್ 27, ಮಧ್ಯಾಹ್ನ 3.30, ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್, ಬ್ರಬೋರ್ನ್ ಸ್ಟೇಡಿಯಂ-ಸಿಸಿಐ
3. ಮಾರ್ಚ್ 27, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಕ್ರೀಡಾಂಗಣ
4. 28 ಮಾರ್ಚ್, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
5. ಮಾರ್ಚ್ 29, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್, ಎಂಸಿಎ ಸ್ಟೇಡಿಯಂ ಪುಣೆ
6. ಮಾರ್ಚ್ 30, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್, ಡಿವೈ ಪಾಟೀಲ್ ಸ್ಟೇಡಿಯಂ
7. ಮಾರ್ಚ್ 31, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಬ್ರಬೋರ್ನ್ ಸ್ಟೇಡಿಯಂ, ಸಿಸಿಐ
8. ಏಪ್ರಿಲ್ 1, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
9. ಏಪ್ರಿಲ್ 2, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
10. ಏಪ್ರಿಲ್ 2, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್, MCA ಸ್ಟೇಡಿಯಂ, ಪುಣೆ
11. ಏಪ್ರಿಲ್ 3, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, ಬ್ರಬೋರ್ನ್ ಸ್ಟೇಡಿಯಂ CCI
12. ಏಪ್ರಿಲ್ 4, ರಾತ್ರಿ 7.30, ಸನ್‌ರೈಸರ್ಸ್ ಹೈದರಾಬಾದ್ vs ಲಕ್ನೋ ಸೂಪರ್‌ಜೈಂಟ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
13. ಏಪ್ರಿಲ್ 5, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
14. ಏಪ್ರಿಲ್ 6, ರಾತ್ರಿ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್, MCA ಸ್ಟೇಡಿಯಂ ಪುಣೆ
15. ಏಪ್ರಿಲ್ 7, ರಾತ್ರಿ 7.30, ಲಕ್ನೋ ಸೂಪರ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಡಿವೈ ಪಾಟೀಲ್ ಸ್ಟೇಡಿಯಂ
16. ಏಪ್ರಿಲ್ 8, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ಬ್ರಬೋರ್ನ್ ಸ್ಟೇಡಿಯಂ, CCI
17. ಏಪ್ರಿಲ್ 9, ಮಧ್ಯಾಹ್ನ 3.30, ಚೆನ್ನೈ ಸೂಪರ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, ಡಿವೈ ಪಾಟೀಲ್ ಕ್ರೀಡಾಂಗಣ
18. ಏಪ್ರಿಲ್ 9, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, MCA ಸ್ಟೇಡಿಯಂ ಪುಣೆ
19. ಏಪ್ರಿಲ್ 10, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಬ್ರಬೋರ್ನ್ ಸ್ಟೇಡಿಯಂ
20. ಏಪ್ರಿಲ್ 10, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
21. ಏಪ್ರಿಲ್ 11, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
22. ಏಪ್ರಿಲ್ 12, ರಾತ್ರಿ 7.30, ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಕ್ರೀಡಾಂಗಣ
23. ಏಪ್ರಿಲ್ 13, ರಾತ್ರಿ 7.30, ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್, MCA ಸ್ಟೇಡಿಯಂ ಪುಣೆ
24. ಏಪ್ರಿಲ್ 14, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಗುಜರಾತ್ ಟೈಟಾನ್ಸ್, ಡಿವೈ ಪಾಟೀಲ್ ಕ್ರೀಡಾಂಗಣ
25. ಏಪ್ರಿಲ್ 15, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, ಬ್ರಬೋರ್ನ್ ಸ್ಟೇಡಿಯಂ CCI
26. ಏಪ್ರಿಲ್ 16, ಮಧ್ಯಾಹ್ನ 3.30, ಮುಂಬೈ ಇಂಡಿಯನ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಬ್ರಬೋರ್ನ್ ಸ್ಟೇಡಿಯಂ
27. ಏಪ್ರಿಲ್ 16, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
28. ಏಪ್ರಿಲ್ 17, ಮಧ್ಯಾಹ್ನ 3.30, ಪಂಜಾಬ್ ಕಿಂಗ್ಸ್ vs ಸನ್ ರೈಸರ್ಸ್ ಹೈದರಾಬಾದ್, ಡಿವೈ ಪಾಟೀಲ್ ಸ್ಟೇಡಿಯಂ
29. ಏಪ್ರಿಲ್ 17, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
30. ಏಪ್ರಿಲ್ 18, ರಾತ್ರಿ 7.30, ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಬ್ರಬೋರ್ನ್ ಸ್ಟೇಡಿಯಂ
31. ಏಪ್ರಿಲ್ 19, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡಿವೈ ಪಾಟೀಲ್ ಸ್ಟೇಡಿಯಂ
32. ಏಪ್ರಿಲ್ 20, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್, MCA ಸ್ಟೇಡಿಯಂ, ಪುಣೆ
33. ಏಪ್ರಿಲ್ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಡಿವೈ ಪಾಟೀಲ್ ಸ್ಟೇಡಿಯಂ
34. ಏಪ್ರಿಲ್ 22, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್, MCA ಸ್ಟೇಡಿಯಂ, ಪುಣೆ
35. ಏಪ್ರಿಲ್ 23, ಮಧ್ಯಾಹ್ನ 3.30, ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ ಡಿವೈ ಪಾಟೀಲ್ ಕ್ರೀಡಾಂಗಣ
36. ಏಪ್ರಿಲ್ 23, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ
37. ಏಪ್ರಿಲ್ 24, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್, ವಾಂಖೆಡೆ ಸ್ಟೇಡಿಯಂ
38. ಏಪ್ರಿಲ್ 25, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
39. 26 ಏಪ್ರಿಲ್ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್, MCA ಸ್ಟೇಡಿಯಂ, ಪುಣೆ
40. ಏಪ್ರಿಲ್ 27, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಸನ್ ರೈಸರ್ಸ್ ಹೈದರಾಬಾದ್, ವಾಂಖೆಡೆ ಸ್ಟೇಡಿಯಂ
41. ಏಪ್ರಿಲ್ 28, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ವಾಂಖೆಡೆ ಸ್ಟೇಡಿಯಂ
42. ಏಪ್ರಿಲ್ 29, ರಾತ್ರಿ 7.30, ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಎಂಸಿಎ ಸ್ಟೇಡಿಯಂ, ಪುಣೆ
43. ಏಪ್ರಿಲ್ 30, ಮಧ್ಯಾಹ್ನ 3.30, ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬ್ರಬೋರ್ನ್ ಸ್ಟೇಡಿಯಂ
44. ಏಪ್ರಿಲ್ 30, ರಾತ್ರಿ 7.30, ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್, ಡಿವೈ ಪಾಟೀಲ್ ಸ್ಟೇಡಿಯಂ
45. ಮೇ 1, ಮಧ್ಯಾಹ್ನ 3.30, ದೆಹಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ವಾಂಖೆಡೆ ಸ್ಟೇಡಿಯಂ
46. ಮೇ 1, ರಾತ್ರಿ 7.30, ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
47. ಮೇ 2, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್, ವಾಂಖೆಡೆ ಸ್ಟೇಡಿಯಂ
48. ಮೇ 3, ರಾತ್ರಿ 7.30, ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್, ಡಿವೈ ಪಾಟೀಲ್ ಸ್ಟೇಡಿಯಂ
49. ಮೇ 4, ರಾತ್ರಿ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಎಂಸಿಎ ಸ್ಟೇಡಿಯಂ, ಪುಣೆ
50. ಮೇ 5, ಸಂಜೆ 7.30, ದೆಹಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್, ಬ್ರಬೋರ್ನ್ ಸ್ಟೇಡಿಯಂ
51. ಮೇ 6, ಸಂಜೆ 7.30, ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್ ಬ್ರಬೋರ್ನ್
52. ಮೇ 7, ಸಂಜೆ 3.30 ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, ವಾಂಖೆಡೆ ಸ್ಟೇಡಿಯಂ
53. ಮೇ 7, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, MCA ಸ್ಟೇಡಿಯಂ, ಪುಣೆ
54. ಮೇ 8, ಮಧ್ಯಾಹ್ಯ 3.30, ಸನ್ ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಾಂಖೆಡೆ ಸ್ಟೇಡಿಯಂ
55. ಮೇ 8, ಸಂಜೆ 7.30, ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
56. ಮೇ 9, ಸಂಜೆ 7.30, ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, DY ಪಾಟೀಲ್ ಸ್ಟೇಡಿಯಂ
57. ಮೇ 10, ಸಂಜೆ 7.30, ಲಕ್ನೋ ಸೂಪರ್ ಜೈಂಟ್ಸ್ vs ಗುಜರಾತ್ ಟೈಟಾನ್ಸ್, MCA ಸ್ಟೇಡಿಯಂ, ಪುಣೆ
58. ಮೇ 11, ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
59. ಮೇ 12 ಮೇ 7.30 PM ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ವಾಂಖೆಡೆ ಸ್ಟೇಡಿಯಂ
50. ಮೇ 13, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, ಬ್ರಬೋರ್ನ್
61. ಮೇ 14, ಸಂಜೆ 7.30 ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್, MCA ಸ್ಟೇಡಿಯಂ, ಪುಣೆ
62. ಮೇ 15, ಮಧ್ಯಾಹ್ಯ 3.30 ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್, ವಾಂಖೆಡೆ ಸ್ಟೇಡಿಯಂ
63. ಮೇ 15, ಸಂಜೆ 7.30 ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್, ಬ್ರಬೋರ್ನ್
64. ಮೇ 16, ಸಂಜೆ 7.30, ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, DY ಪಾಟೀಲ್ ಸ್ಟೇಡಿಯಂ
65. ಮೇ 17, ಸಂಜೆ 7.30 ಮುಂಬೈ ಇಂಡಿಯನ್ಸ್ vs ಸನ್ ರೈಸರ್ಸ್ ಹೈದರಾಬಾದ್, ವಾಂಖೆಡೆ ಸ್ಟೇಡಿಯಂ
66. ಮೇ 18, ಸಂಜೆ 7.30, ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್, DY ಪಾಟೀಲ್ ಸ್ಟೇಡಿಯಂ
67. ಮೇ 19, ಸಂಜೆ 7.30, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್, ವಾಂಖೆಡೆ ಸ್ಟೇಡಿಯಂ
68. ಮೇ 20. ಸಂಜೆ 7.30, ರಾಜಸ್ಥಾನ್ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ಬ್ರಬೋರ್ನ್
69. ಮೇ 21, ಸಂಜೆ 7.30, ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್, ವಾಂಖೆಡೆ ಸ್ಟೇಡಿಯಂ
70. ಮೇ 22, ಸಂಜೆ 7.30, ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್, ವಾಂಖೆಡೆ ಸ್ಟೇಡಿಯಂ
ಇದನ್ನೂ ಓದಿ:IPL 2022: ಸಿಎಸ್ಕೆಗೆ ಆನೆ ಬಲ! ಇಂಜುರಿಯಿಂದ ಗುಣಮುಖರಾದ ಕಳೆದ ಆವೃತ್ತಿಯ ಆರೆಂಜ್ ಕ್ಯಾಪ್ ವಿನ್ನರ್
