IPL 2022: ಸಿಎಸ್‌ಕೆಗೆ ಆನೆ ಬಲ! ಇಂಜುರಿಯಿಂದ ಗುಣಮುಖರಾದ ಕಳೆದ ಆವೃತ್ತಿಯ ಆರೆಂಜ್ ಕ್ಯಾಪ್ ವಿನ್ನರ್
IPL 2022: ರಿತುರಾಜ್ ಗಾಯಕ್ವಾಡ್ ಕಳೆದ ತಿಂಗಳಷ್ಟೇ ಟೀಮ್ ಇಂಡಿಯಾದೊಂದಿಗೆ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಸರಣಿಯ ಭಾಗವಾಗಿದ್ದರು. ಆದಾಗ್ಯೂ, ಎರಡೂ ಸರಣಿಗಳಲ್ಲೂ ವಿವಿಧ ಕಾರಣಗಳಿಂದ ಅವರಿಗೆ ಆಡಲು ಸಾಧ್ಯವಾಗಲಿಲ್ಲ.
ಐಪಿಎಲ್ 2022 (IPL 2022) ಮಾರ್ಚ್ 26 ರಿಂದ ಪ್ರಾರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಕಳೆದ ಋತುವಿನ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಮೊದಲ ಪಂದ್ಯದಲ್ಲಿಯೇ, MS ಧೋನಿ ಬಳಗ ಆ ಫೈನಲ್‌ನ ಪ್ರದರ್ಶನವನ್ನು ಪುನರಾವರ್ತಿಸಲು ಪ್ರಯತ್ನಿಸಲಿದೆ, ಆದರೆ 2021 ರಲ್ಲಿ ಇಡೀ ಆವೃತ್ತಿಯಣತೆಯೇ ಪ್ರಬಲ ಪ್ರದರ್ಶನ ನೀಡಲು ಬಯಸುತ್ತದೆ. ಇದನ್ನು ಸಾಧಿಸಲು ಪ್ರತಿ ಪಂದ್ಯದಲ್ಲೂ ತಂಡಕ್ಕೆ ತನ್ನ ಪ್ರಮುಖ ಆಟಗಾರರ ಅಗತ್ಯವಿದ್ದು ಈ ವಿಷಯದಲ್ಲಿ ಸಿಎಸ್‌ಕೆಗೆ ದೊಡ್ಡ ಪರಿಹಾರ ಸಿಕ್ಕಿದೆ. ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ತಂಡದ ಬಿಗ್ ಸ್ಟಾರ್ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (Ruturaj Gaikwad) ಈಗ ಸಂಪೂರ್ಣ ಫಿಟ್ ಆಗಿದ್ದು ಮೊದಲ ಪಂದ್ಯಕ್ಕೆ ಲಭ್ಯವಿದ್ದಾರೆ ಎಂದು ವರದಿಯಾಗಿದೆ.
ರಿತುರಾಜ್ ಗಾಯಕ್ವಾಡ್ ಕಳೆದ ತಿಂಗಳಷ್ಟೇ ಟೀಮ್ ಇಂಡಿಯಾದೊಂದಿಗೆ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಸರಣಿಯ ಭಾಗವಾಗಿದ್ದರು. ಆದಾಗ್ಯೂ, ಎರಡೂ ಸರಣಿಗಳಲ್ಲೂ ವಿವಿಧ ಕಾರಣಗಳಿಂದ ಅವರಿಗೆ ಆಡಲು ಸಾಧ್ಯವಾಗಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೂ ಟಿ20 ಸರಣಿಯಲ್ಲಿ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿತು. ನಂತರ ಶ್ರೀಲಂಕಾ ವಿರುದ್ಧದ ಟಿ 20 ಸರಣಿಯ ಮೊದಲು, ಬಲಗೈ ಮಣಿಕಟ್ಟಿನ ಗಾಯದಿಂದಾಗಿ ಅವರು ಆ ಸರಣಿಯಿಂದ ಹೊರಗುಳಿಯಬೇಕಾಯ್ತು.
ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಲಭ್ಯ ರಿತುರಾಜ್ ಅವರು ಮಣಿಕಟ್ಟಿನ ಗಾಯದಿಂದಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾಗಿದ್ದರು. ಇಂಜುರಿಯಿಂದ ಗುಣಮುಖರಾಗುವುದು ಕೊಂಚ ತಡವಾಗಲಿದೆ ಎಂಬ ವರದಿಗಲಿತ್ತು. ಆದ್ದರಿಂದ ಅವರು ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇತ್ತು, ಆದರೆ ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು ಆಯ್ಕೆಗೆ ಲಭ್ಯರಿರಲಿದ್ದಾರೆ. ಕ್ರೀಡಾ ವೆಬ್‌ಸೈಟ್ ಇನ್‌ಸೈಡ್ ಸ್ಪೋರ್ಟ್ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರನ್ನು ಉಲ್ಲೇಖಿಸಿ, ರಿತುರಾಜ್ ಈಗ ಸಂಪೂರ್ಣವಾಗಿ ಫಿಟ್ ಆಗಿದ್ದು ತಂಡವನ್ನು ಸೇರುವ ಮೂಲಕ ತರಬೇತಿಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು. ಆದರೆ, ಮಧ್ಯಮ ವೇಗಿ ದೀಪಕ್ ಚಹಾರ್ ಇನ್ನೂ ಫಿಟ್ ಆಗಿಲ್ಲ.
ಕಳೆದ ಆವೃತ್ತಿಯ ಆರೆಂಜ್ ಕ್ಯಾಪ್ ವಿನ್ನರ್ ಮಹಾರಾಷ್ಟ್ರದ 25 ವರ್ಷದ ಈ ಪ್ರತಿಭಾವಂತ ಆಟಗಾರ ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ದಕ್ಷಿಣ ಆಫ್ರಿಕಾದ ದಂತಕಥೆ ಮತ್ತು ಮಾಜಿ ಸಿಎಸ್‌ಕೆ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ರಿತುರಾಜ್ ಉತ್ತಮ ಆರಂಭಿಕ ಪಾಲುದಾರಿಕೆಯನ್ನು ರಚಿಸಿದರು. ಇಬ್ಬರೂ ಹಲವಾರು ಸಂದರ್ಭಗಳಲ್ಲಿ ತಂಡಕ್ಕೆ ಬಲವಾದ ಆರಂಭವನ್ನು ನೀಡಿದರು ಮತ್ತು CSK ತಂಡದ ಪ್ರಶಸ್ತಿ ಮೆರವಣಿಗೆಗೆ ಅಡಿಪಾಯ ಹಾಕಿದರು. ಋತುರಾಜ್ ಋತುವಿನಲ್ಲಿ 635 ರನ್ಗಳೊಂದಿಗೆ ಆರೆಂಜ್ ಕ್ಯಾಪ್ ಗೆದ್ದರು, ಆದರೆ ಡು ಪ್ಲೆಸಿಸ್ 634 ರನ್ಗಳೊಂದಿಗೆ ಎರಡನೇ ಸ್ಥಾನ ಪಡೆದರು.
ಇದನ್ನೂ ಓದಿ:IND vs BAN Head to Head Records: ಬಲಿಷ್ಠ ಭಾರತಕ್ಕೆ ಬಾಂಗ್ಲಾ ಎದುರಾಳಿ; ಉಭಯ ತಂಡಗಳ ಮುಖಾಮುಖಿ ವರದಿ