
ಭಾನುವಾರ ಡಬಲ್ ಹೆಡರ್ ದಿನದ ಎರಡನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮತ್ತು ಡೆವೊನ್ ಕಾನ್ವೆ ಅವರ ಸ್ಫೋಟಕ ಇನ್ನಿಂಗ್ಸ್‌ನ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 49 ರನ್‌ಗಳಿಂದ ಸುಲಭವಾಗಿ ಸೋಲಿಸಿದೆ. ಇದರೊಂದಿಗೆ ಚೆನ್ನೈ ಸತತ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇತ್ತ ಕೆಕೆಆರ್ ಸತತ ನಾಲ್ಕನೇ ಸೋಲು ಕಂಡಿದೆ.
ಚೆನ್ನೈ ತಂಡ ಕೋಲ್ಕತ್ತಾವನ್ನು 49 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ 235 ರನ್ ಗಳಿಸಿತ್ತು. ಕೋಲ್ಕತ್ತಾ ತಂಡ ಎಂಟು ವಿಕೆಟ್ ಕಳೆದುಕೊಂಡು ಕೇವಲ 186 ರನ್ ಗಳಿಸಲಷ್ಟೇ ಶಕ್ತವಾಯಿತು.
ರಿಂಕು ಸಿಂಗ್ 30 ಎಸೆತಗಳಲ್ಲಿ 50 ರನ್ ಪೂರೈಸಿದರು. ರಿಂಕು ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 50 ರನ್ ಪೂರೈಸಿದರು.
ಕೋಲ್ಕತ್ತಾ ಪರ ರಿಂಕು 44 ರನ್ ಹಾಗೂ ಉಮೇಶ್ ಯಾದವ್ 4 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 12 ಎಸೆತಗಳಲ್ಲಿ 59 ರನ್‌ಗಳ ಅಗತ್ಯವಿದೆ. ಅಂತಿಮ ಎಸೆತದಲ್ಲಿ ಕ್ಯಾಚ್ ಕೈಬಿಡಲಾಯಿತು. 18 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 177/7
ದೇಶಪಾಂಡೆ ಅವರ ಓವರ್‌ನಲ್ಲಿ ಡೇವಿಡ್ ವೀಸಾ 1 ರನ್ ಗಳಿಸಿ ಎಲ್‌ಬಿಡಬ್ಲ್ಯೂಗೆ ಬಲಿಯಾದರು.
ಪತಿರಾನ ಅವರ ಓವರ್‌ನಲ್ಲಿ ಆಂಡ್ರೆ ರಸೆಲ್ 9 ರನ್‌ಗಳಿಗೆ ಔಟಾದರು. ಶಿವಂ ದುಬೆ ಕ್ಯಾಚ್ ಹಿಡಿದು ಚೆನ್ನೈಗೆ ಯಶಸ್ಸು ತಂದುಕೊಟ್ಟರು.
ರಸೆಲ್ 16ನೇ ಓವರ್ ನ ಐದನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ತಂಡದ 150 ರನ್ ಪೂರೈಸಿದರು.
16ನೇ ಓವರ್ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಬಂತ್ತು. 16 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 156/5. ಗೆಲುವಿಗೆ 24 ಎಸೆತಗಳಲ್ಲಿ 80 ರನ್‌ಗಳ ಅಗತ್ಯವಿದೆ.
15ನೇ ಓವರ್‌ನ ಮೂರನೇ ಎಸೆತದಲ್ಲಿ ಜೇಸನ್ ರಾಯ್ ಔಟಾದರು. ಕೋಲ್ಕತ್ತಾದ ಐದನೇ ವಿಕೆಟ್ ತೀಕ್ಷಣ ಓವರ್ನಲ್ಲಿ ಪತನವಾಯಿತು. ಜೇಸನ್ ರಾಯ್ 26 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದರು. ಕೋಲ್ಕತ್ತಾ ಸ್ಕೋರ್ 14.3 ಓವರ್‌ಗಳಲ್ಲಿ – 135/5
14ನೇ ಓವರ್ನಲ್ಲಿ ಬೌಂಡರಿ ಹೊಡೆದ ರಾಯ್ ತಮ್ಮ ಅರ್ಧಶತಕ ಪೂರೈಸಿದರು. ಜೇಸನ್ ರಾಯ್ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 14 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 127/4
ತೀಕ್ಷಣ ಎಸೆದ 12ನೇ ಓವರ್ನಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಂತು. ಕೋಲ್ಕತ್ತಾ ಪರ ರಿಂಕು 12 ರನ್ ಮತ್ತು ಜೇಸನ್ ರಾಯ್ 45 ರನ್ ಗಳಿಸಿ ಆಡುತ್ತಿದ್ದಾರೆ. 11 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್- 109/4
ಜಡೇಜಾ 11ನೇ ಓವರ್ನಲ್ಲಿ 2 ಅದ್ಭುತ ಸಿಕ್ಸರ್‌ಗಳು ಸಿಡಿದವು. 11 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 95/4
ಕೋಲ್ಕತ್ತಾ ಪರ ರಿಂಕು 3 ರನ್ ಮತ್ತು ಜೇಸನ್ ರಾಯ್ 21 ರನ್ ಗಳಿಸಿ ಆಡುತ್ತಿದ್ದಾರೆ. 10 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 76/4
ಕೋಲ್ಕತ್ತಾಗೆ ದೊಡ್ಡ ಹೊಡೆತ ಬಿದ್ದಿದೆ. ಕೋಲ್ಕತ್ತಾದ ನಾಲ್ಕನೇ ವಿಕೆಟ್ ಪತನವಾಗಿದೆ.ನಿತೀಶ್ ರಾಣಾ ಔಟಾಗಿದ್ದಾರೆ.
8ನೇ ಓವರ್ನಲ್ಲಿ ಜೇಸನ್ ರಾಯ್ ಸಿಕ್ಸರ್ ಸಿಡಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. 8 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 66/3
ಮೊಯಿನ್ ಅಲಿ ಅವರ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್ 20 ರನ್ ಗಳಿಸಿ ಔಟಾದರು.
ಕೋಲ್ಕತ್ತಾ ಪರ ನಿತೀಶ್ ರಾಣಾ 16 ರನ್ ಹಾಗೂ ವೆಂಕಟೇಶ್ 18 ರನ್ ಗಳಿಸಿ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 38/2
5ನೇ ಓವರ್ನಲ್ಲೂ 2 ಬೌಂಡರಿ ಬಂದವೂ, ಮೊದಲ ಬೌಂಡರಿ ಅಯ್ಯರ್ ಬ್ಯಾಟ್‌ನಿಂದ ಬಂದರೆ, 2ನೇ ಬೌಂಡರಿ ರಾಣಾ ಬ್ಯಾಟ್‌ನಿಂದ ಬಂತು. ಕೋಲ್ಕತ್ತಾ ಪರ ನಿತೀಶ್ ರಾಣಾ 14 ಹಾಗೂ ವೆಂಕಟೇಶ್ 16 ರನ್ ಗಳಿಸಿ ಆಡುತ್ತಿದ್ದಾರೆ. 5 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 33/ 2
3ನೇ ಓವರ್‌ನ 4 ಮತ್ತು 5ನೇ ಎಸೆತದಲ್ಲಿ ಅಯ್ಯರ್ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು. ಕೋಲ್ಕತ್ತಾ ಪರ ನಿತೀಶ್ ರಾಣಾ 6 ರನ್ ಹಾಗೂ ವೆಂಕಟೇಶ್ 11 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ – 20/2
ಎನ್. ಜಗದೀಶನ್ ಔಟಾಗಿದ್ದಾರೆ. ಇದರೊಂದಿಗೆ ಕೋಲ್ಕತ್ತಾಗೆ ಮತ್ತೊಂದು ಹೊಡೆತ ಬಿದ್ದಿದೆ. ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ಅವರನ್ನು ತುಷಾರ್ ದೇಶಪಾಂಡೆ ಔಟಾದರು. ಜಗದೀಶನ್ ದೊಡ್ಡ ಹೊಡೆತವನ್ನು ಆಡಲು ಬಯಸಿದ್ದರು ಆದರೆ ರವೀಂದ್ರ ಜಡೇಜಾ ಬೌಂಡರಿಯಲ್ಲಿ ಕ್ಯಾಚ್ ಹಿಡಿದರು.
ಆಕಾಶ್ ಸಿಂಗ್ ಅವರ ಓವರ್‌ನ ನಾಲ್ಕನೇ ಎಸೆತದಲ್ಲಿ ಸುನಿಲ್ ನರೈನ್ 0 ರನ್ ಗಳಿಸಿ ಔಟಾದರು.
ಅಂತಿಮ ಓವರ್‌ನಲ್ಲಿ ಅಮೋಘ ಸಿಕ್ಸರ್ ಬಾರಿಸಿದ ಜಡೇಜಾ 18 ರನ್ ಗಳಿಸಿ ಔಟಾದರು. ಕೊನೆಯ ಎರಡು ಎಸೆತಗಳನ್ನಾಡಲು ಬಂದ ಧೋನಿ ಕೇವಲ 1 ರನ್ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಸಿಎಸ್ಕೆ 235 ರನ್ಗೆ ತನ್ನ ಇನ್ನಿಂಗ್ಸ್ ಮುಗಿಸಿದೆ.
19ನೇ ಓವರ್‌ನಲ್ಲಿ ರಹಾನೆ ಅವರ ಬ್ಯಾಟ್‌ನಿಂದ 2 ಅದ್ಭುತ ಸಿಕ್ಸರ್ ಮತ್ತು 1 ಬೌಂಡರಿ ಬಂತು. 19 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 218/3
18ನೇ ಓವರ್‌ನ ಕೊನೆಯ ಎಸೆತದಲ್ಲಿ ರಹಾನೆ ಆ ಅದ್ಭುತ ಫೋರ್ ಹೊಡೆದರು. ಚೆನ್ನೈ ಪರ ಜಡೇಜಾ 1 ರನ್ ಮತ್ತು ಅಜಿಕ್ಯ ರಹಾನೆ 55 ರನ್ ಗಳಿಸಿದರು. ಈ ಓವರ್‌ನಲ್ಲಿ ಚೆನ್ನೈ 13 ರನ್ ಗಳಿಸಿತು. 18 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 199/3
ಖೆಜ್ಡೋಲಿಯಾ ಅವರ ಓವರ್‌ನಲ್ಲಿ ಶಿವಂ ದುಬೆ 50 ರನ್ ಗಳಿಸಿ ಔಟಾದರು. 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 50 ರನ್ ಗಳಿಸಿದರು.
ಅಜಿಂಕ್ಯ ರಹಾನೆ ಮತ್ತೆ ಅರ್ಧಶತಕ ಬಾರಿಸಿದ್ದಾರೆ. 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 17ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರಹಾನೆ ಅರ್ಧಶತಕ ಪೂರೈಸಿದರು.
ಚೆನ್ನೈ ಪರ ಶಿವಂ ದುಬೆ 40 ಮತ್ತು ಅಜಿಕ್ಯ ರಹಾನೆ 38 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಈ ಓವರ್‌ನಲ್ಲಿ 1 ಸಿಕ್ಸರ್ ಕಾಣಿಸಿಕೊಂಡಿತ್ತು. 16 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 169/2
ವೀಸಾ ಎಸೆದ 15ನೇ ಓವರ್ ಕೂಡ ದುಬಾರಿಯಾಗಿತ್ತು. ಈ ಓವರ್ನಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಕಂಡುಬಂದಿತು. ಚೆನ್ನೈ ಪರ ಶಿವಂ ದುಬೆ 32 ಮತ್ತು ಅಜಿಕ್ಯ ರಹಾನೆ 37 ರನ್‌ಗಳೊಂದಿಗೆ ಆಡುತ್ತಿದ್ದಾರೆ. 15 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 160/2
ಉಮೇಶ್ ಬೌಲ್ ಮಾಡಿದ 14ನೇ ಓವರ್ನಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಬಂದವು. ಚೆನ್ನೈ ಪರ ಶಿವಂ ದುಬೆ 18 ಹಾಗೂ ಅಜಿಕ್ಯ ರಹಾನೆ 36 ರನ್‌ಗಳೊಂದಿಗೆ ಆಡುತ್ತಿದ್ದಾರೆ. 14 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 145/2
ವರುಣ್ ಎಸೆದ 12ನೇ ಓವರ್‌ನಲ್ಲಿ ಶಿವಂ ದುಬೆ ಸತತ 2 ಸಿಕ್ಸರ್‌ಗಳನ್ನು ಬಾರಿಸಿದರು.
ವರುಣ್ ಓವರ್‌ನಲ್ಲಿ 56 ರನ್ ಗಳಿಸಿ ಡೆವೊನ್ ಕಾನ್ವೆ ಕ್ಯಾಚಿತ್ತು ಔಟಾದರು. 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 40 ಎಸೆತಗಳಲ್ಲಿ 56 ರನ್ ಗಳಿಸಿದರು. ಚೆನ್ನೈ ಸ್ಕೋರ್ 12.1 ಓವರ್‌ಗಳಲ್ಲಿ – 109/2
ಸುಯಾಶ್ ಎಸೆದ 12ನೇ ಓವರ್‌ನಲ್ಲಿ ರಹಾನೆ ಫೋರ್ ಹೊಡೆದರು. ಚೆನ್ನೈ ಪರ ಕಾನ್ವೆ 56 ರನ್ ಮತ್ತು ಅಜಿಕ್ಯ ರಹಾನೆ 18 ರನ್‌ಗಳಿಸಿ ಆಡುತ್ತಿದ್ದಾರೆ. 12 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 108/1
ಡೆವೊನ್ ಕಾನ್ವೆ ಅರ್ಧಶತಕ ಪೂರೈಸಿದ್ದಾರೆ. 10ನೇ ಓವರ್‌ನ ಐದನೇ ಎಸೆತದಲ್ಲಿ ಒಂದು ರನ್ ತೆಗೆದುಕೊಳ್ಳುವ ಮೂಲಕ 50 ರನ್ ಪೂರೈಸಿದರು.
ಸುನಿಲ್ ನರೈನ್ ಅವರ ಓವರ್‌ನ ಅಂತಿಮ ಎಸೆತದಲ್ಲಿ ಕಾನ್ವೇ ಸಿಕ್ಸರ್ ಬಾರಿಸಿದರು. ಕಾನ್ವೆ 47 ರನ್ ಹಾಗೂ ಅಜಿಕ್ಯ ರಹಾನೆ 7 ರನ್ ಗಳಿಸಿ ಆಡುತ್ತಿದ್ದಾರೆ. 9 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 89/1
ಚೆನ್ನೈನ ಮೊದಲ ವಿಕೆಟ್ ಪತನವಾಯಿತು, ಸುಯ್ಯಾಶ್ ಅವರ ಓವರ್‌ನಲ್ಲಿ ಗಾಯಕ್ವಾಡ್ 35 ರನ್ ಗಳಿಸಿ ಔಟಾದರು. ಇದರಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. 7.3 ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸ್ಕೋರ್ – 73/1.
ಚೆನ್ನೈ ತಂಡದ ಆರಂಭಿಕರು ಪಂದ್ಯದ ಆರಂಭದಿಂದಲೂ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆದಿದ್ದಾರೆ. ಚೆನ್ನೈ ಪರ ಗಾಯಕ್ವಾಡ್ 23 ರನ್ ಹಾಗೂ ಡೆವೊನ್ ಕಾನ್ವೆ 26 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಂತು. 6 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 59/0
6ನೇ ಓವರ್ನಲ್ಲಿ ಬೌಂಡರಿ ಬಾರಿಸಿದ ಕಾನ್ವೇ ತಂಡದ ಮೊತ್ತವನ್ನುನ 50ರ ಗಡಿ ದಾಟಿಸಿದರು.
4ನೇ ಓವರ್ 5ನೇ ಎಸೆತದಲ್ಲಿ ಕಾನ್ವೇ ಸಿಕ್ಸರ್ ಬಾರಿಸಿದರು. ಚೆನ್ನೈ ಪರ ಗಾಯಕ್ವಾಡ್ 14 ರನ್ ಹಾಗೂ ಡೆವೊನ್ ಕಾನ್ವೆ 17 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 31/0
ಉಮೇಶ್ ಯಾದವ್ ಎಸೆದ 3ನೇ ಓವರ್‌ನ ಕೊನೆಯ ಎಸೆತ ಗಾಯಕ್ವಾಡ್ ಸಿಕ್ಸರ್ ಬಾರಿಸಿದರು. 3 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 22/0
2ನೇ ಓವರ್‌ನಲ್ಲಿ ಕಾನ್ವೇ ಪಂದ್ಯದ ಮೊದಲ ಸಿಕ್ಸರ್ ಬಾರಿಸಿದರು. ಚೆನ್ನೈ ಪರ ಗಾಯಕ್ವಾಡ್ 7 ರನ್ ಮತ್ತು ಡೆವೊನ್ ಕಾನ್ವೆ 7 ರನ್ ಗಳಿಸಿ ಆಡುತ್ತಿದ್ದಾರೆ. 2 ಓವರ್‌ಗಳ ನಂತರ ಚೆನ್ನೈ ಸ್ಕೋರ್ – 14/0
ಪಂದ್ಯ ಆರಂಭವಾಗಿದೆ. ಚೆನ್ನೈ ಪರ ಇನಿಂಗ್ಸ್ ಆರಂಭಿಸಲು ರಿತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಬಂದಿದ್ದಾರೆ. ಕೋಲ್ಕತ್ತಾ ಪರ ಉಮೇಶ್ ಯಾದವ್ ಬೌಲಿಂಗ್ ಮಾಡಿದರು. ಈ ಓವರ್ನಲ್ಲಿ ರುತುರಾಜ್ ಬೌಂಡರಿ ಬಾರಿಸಿದರು.
ನಿತೀಶ್ ರಾಣಾ (ನಾಯಕ), ಜೇಸನ್ ರಾಯ್, ನಾರಾಯಣ್ ಜಗದೀಸನ್, ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಡೇವಿಡ್ ವೀಸಾ, ಕುಲ್ವಂತ್ ಖೆಜ್ರೋಲಿಯಾ, ಸುಯಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಮಹೇಂದ್ರ ಸಿಂಗ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಮಥಿಸಾ ಪತಿರಾನ, ತುಷಾರ್ ದೇಶಪಾಂಡೆ, ಮನೀಶ್ ಟೀಕ್ಷಣ.
ರಾಜಸ್ಥಾನ್ ರಾಯಲ್ಸ್ ಸ್ಕೋರ್ ನಾಲ್ಕು ವಿಕೆಟ್ಗೆ 150 ರನ್ ದಾಟಿದೆ. ಧ್ರುವ್ ಜುರೆಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಕ್ರೀಸ್‌ನಲ್ಲಿದ್ದಾರೆ. ಜುರೆಲ್ ವೇಗದ ಗತಿಯಲ್ಲಿ ರನ್ ಗಳಿಸುತ್ತಿದ್ದು, ರಾಜಸ್ಥಾನ ತಂಡ ಪಂದ್ಯದಲ್ಲಿ ಉಳಿದುಕೊಂಡಿದೆ. ಆದರೆ, ಈ ಪಂದ್ಯವನ್ನು ಗೆಲ್ಲಲು ರಾಜಸ್ಥಾನಕ್ಕೆ ದೊಡ್ಡ ಓವರ್ ಅಗತ್ಯವಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಕೋಲ್ಕತ್ತಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಎನ್ ಜಗದೀಶನ್ ಮತ್ತು ಡೇವಿಡ್ ವೀಸಾ ಕೋಲ್ಕತ್ತಾಗೆ ಆಗಮಿಸಿದ್ದಾರೆ.
Published On - 7:07 pm, Sun, 23 April 23