RCB vs RR Highlights IPL 2023: ಆರ್‌ಸಿಬಿ ಬೌಲಿಂಗ್ ಮ್ಯಾಜಿಕ್; ರಾಜಸ್ಥಾನ್ಗೆ ರೋಚಕ ಸೋಲು
Royal Challengers Bangalore vs Rajasthan Royals IPL 2023 Highlights in Kannada: ಐಪಿಎಲ್ 2023 ರ 32 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತವರು ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ರನ್ಗಳಿಂದ ಮಣಿಸಿದೆ.
ಐಪಿಎಲ್ 2023 ರ 32 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತವರು ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ರನ್ಗಳಿಂದ ಮಣಿಸಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ತಂಡದ ಪರ ಗ್ಲೆನ್ ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 6 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 77 ರನ್ ಗಳಿಸಿ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇದಲ್ಲದೇ ಇನ್ನಿಂಗ್ಸ್ ಆರಂಭಿಸಿದ ಫಾಫ್ ಡು ಪ್ಲೆಸಿಸ್ 39 ಎಸೆತಗಳಲ್ಲಿ 62 ರನ್ ಕೊಡುಗೆ ನೀಡಿದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ದೇವದತ್ ಪಡಿಕಲ್ ಹಾಗೂ ಯಶಸ್ವಿ ಜೈಸ್ವಾಲ್ ಅದ್ಭುತ ಜೊತೆಯಾಟ ನಡಟೆಸಿದರು. ಇಲ್ಲಿ ಪಡಿಕಲ್ ಅರ್ಧಶತಕ ಸಿಡಿಸಿ ಔಟಾದರೆ, ಜೈಸ್ವಾಲ್ ಅರ್ಧಶತಕ ವಂಚಿತರಾದರು. ಈ ಎರಡು ವಿಕೆಟ್ ಉರುಳಿದ ಬಳಿಕ ಲಯ ಕಳೆದುಕೊಂಡು ರಾಜಸ್ಥಾನ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಲಷ್ಟೇ ಶಕ್ತವಾಯಿತು.
LIVE NEWS & UPDATES
-
ಆರ್ಸಿಬಿಗೆ 7 ರನ್ ಜಯ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡ, ರಾಜಸ್ಥಾನ ರಾಯಲ್ಸ್ ತಂಡವನ್ನು 7 ರನ್‌ಗಳ ಅಂತರದಿಂದ ಸೋಲಿಸಿ ಸೀಸನ್ನ ನಾಲ್ಕನೇ ಜಯ ದಾಖಲಿಸಿತು.
-
ಅಶ್ವಿನ್ ಪೆವಿಲಿಯನ್‌ಗೆ
ರಾಜಸ್ಥಾನ ತಂಡದ ಆರನೇ ವಿಕೆಟ್ ಪತನವಾಗಿದೆ. ರವಿಚಂದ್ರನ್ ಅಶ್ವಿನ್ ಆರು ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು.
-
ಹೆಟ್ಮೆಯರ್ ಔಟ್
8ನೇ ಓವರ್‌ನ 5ನೇ ಎಸೆತದಲ್ಲಿ ಹೆಟ್ಮೆಯರ್ ರನೌಟ್ ಆದರು. ಕವರ್‌ನಿಂದ ಪ್ರಭುದೇಸಾಯಿ ಅವರ ನೇರ ಹೊಡೆತವು ಹೆಟ್ಮೆಯರ್ ಅವರ ಇನ್ನಿಂಗ್ಸ್ ಅನ್ನು 3 ರನ್‌ಗಳಿಗೆ ನಿಲ್ಲಿಸಿತು. ರಾಜಸ್ಥಾನಕ್ಕೆ ದೊಡ್ಡ ಹೊಡೆತ
ರಾಜಸ್ಥಾನ ಸ್ಕೋರ್ 145/4
17 ಓವರ್‌ಗಳ ನಂತರ ರಾಜಸ್ಥಾನ್ ರಾಯಲ್ಸ್ ಸ್ಕೋರ್ 145/4. ಧ್ರುವ್ ಜುರೆಲ್ 7 ಎಸೆತಗಳಲ್ಲಿ 12 ಮತ್ತು ಶಿಮ್ರಾನ್ ಹೆಟ್ಮೆಯರ್ 7 ಎಸೆತಗಳಲ್ಲಿ 12 ರನ್ ಗಳಿಸಿ ಆಡುತ್ತಿದ್ದಾರೆ.
ಜುರೆಲ್ ಬೌಂಡರಿ
ಧ್ರುವ್ ಜುರೆಲ್ 16ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಸ್ಯಾಮ್ಸನ್ 22ಕ್ಕೆ ಔಟ್
16ನೇ ಓವರ್‌ನ ಎರಡನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಶಹಬಾಜ್ ಅಹ್ಮದ್ಗೆ ಕ್ಯಾಚ್ ನೀಡಿದರು. ರಾಜಸ್ಥಾನಕ್ಕೆ ನಾಲ್ಕನೇ ಹೊಡೆತ ಬಿದ್ದಿದೆ. ಸಂಜು ಸ್ಯಾಮ್ಸನ್ 22 ರನ್ ಗಳಿಸಿ ಔಟಾದರು
30 ಎಸೆತಗಳಲ್ಲಿ 69 ರನ್ ಅಗತ್ಯ
ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ 15 ಓವರ್‌ಗಳು ಪೂರ್ಣಗೊಂಡಿವೆ. 15 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದೆ. ಕೊನೆಯ 30 ಎಸೆತಗಳಲ್ಲಿ RR ಗೆಲುವಿಗೆ 69 ರನ್‌ಗಳ ಅಗತ್ಯವಿದೆ.
ಜೈಸ್ವಾಲ್ ಔಟ್
108 ರನ್ ಗಳಿಸುವಷ್ಟರಲ್ಲಿ ರಾಜಸ್ಥಾನದ ಮೂರನೇ ವಿಕೆಟ್ ಪತನವಾಯಿತು. ಯಶಸ್ವಿ ಜೈಸ್ವಾಲ್ 37 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ಈಗ ಸಂಜು ಸ್ಯಾಮ್ಸನ್ ಅವರೊಂದಿಗೆ ಶಿಮ್ರಾನ್ ಹೆಟ್ಮೆಯರ್ ಕ್ರೀಸ್‌ನಲ್ಲಿದ್ದಾರೆ. ರಾಜಸ್ಥಾನದ ಸ್ಕೋರ್ 14 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 108 ರನ್ ಆಗಿದೆ.
ಶತಕ ಪೂರ್ಣ
ರಾಜಸ್ಥಾನದ ಸ್ಕೋರ್ 100 ರನ್ ದಾಟಿದೆ.ದೇವದತ್ ಪಡಿಕ್ಕಲ್ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ನಾಯಕ ಸಂಜು ಸ್ಯಾಮ್ಸನ್ ಕ್ರೀಸ್ಗೆ ಬಂದಿದ್ದಾರೆ.
ಪಡಿಕಲ್ ಪೆವಿಲಿಯನ್‌ಗೆ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ದೇವದತ್ ಪಡಿಕ್ಕಲ್ ರೂಪದಲ್ಲಿ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. 34 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದ ಪಡಿಕಲ್ ಡೇವಿಡ್ ವಿಲ್ಲಿಗೆ ಬಲಿಯಾದರು.
8 ನೇ ಅರ್ಧಶತಕ
ರಾಜಸ್ಥಾನ್ ರಾಯಲ್ಸ್ನ ಭರವಸೆಯ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಬೆಂಗಳೂರಿನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವಾಗ ತಮ್ಮ ಐಪಿಎಲ್ ವೃತ್ತಿಜೀವನದ ಎಂಟನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಸದ್ಯ ಅವರು 30 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ತಂಡದ ಪರ ಆಡುತ್ತಿದ್ದಾರೆ.
54 ಎಸೆತಗಳಲ್ಲಿ 93 ರನ್ ಅಗತ್ಯವಿದೆ
ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಇನ್ನಿಂಗ್ಸ್‌ನ 11 ಓವರ್‌ಗಳು ಪೂರ್ಣಗೊಂಡಿವೆ. 11 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.
10 ಓವರ್ ಅಂತ್ಯ
10ನೇ ಓವರ್ ಬೌಲ್ ಮಾಡಲು ಬಂದ ವೈಶಾಕ್ ಈ ಓವರ್ನಲ್ಲೂ ದುಬಾರಿಯಾದರು. ಈ ಓವರ್ನಲ್ಲಿ ಪಡಿಕಲ್ 2 ಬೌಂಡರಿ ಹೊಡೆದರು.
ಹಸರಂಗಗೂ ಬೌಂಡರಿ
ಕೋಟಾದ ಮೊದಲ ಓವರ್ ಬೌಲ್ ಮಾಡಿದ ಹಸರಂಗ ಮೊದಲ 5 ಎಸೆತಗಳಲ್ಲಿ ಬೌಂಡರಿ ಕೊಡಲಿಲ್ಲ. ಆದರೆ ಓವರ್‌ನ ಕೊನೆಯ ಎಸೆತದಲ್ಲಿ ಪಡಿಕಲ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಹೊಡೆದರು.
ಮ್ಯಾಕ್ಸಿ ಮತ್ತೆ ದುಬಾರಿ
8ನೇ ಓವರ್‌ನ ಮೊದಲ ಎಸೆತದಲ್ಲಿ ಜೈಸ್ವಾಲ್ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಬೌಂಡರಿ ಹೊಡೆದರು.
ಪಡಿಲ್ ಸಿಕ್ಸರ್
ಹರ್ಷಲ್ ಎಸೆದ 7ನೇ ಓವರ್‌ನ ಮೊದಲ ಎಸೆತದಲ್ಲೇ ಪಡಿಕಲ್ ಓವರ್ ದಿ ಲಾಂಗ್ನಲ್ಲಿ ಸಿಕ್ಸರ್ ಬಾರಿಸಿದರು.
ಮ್ಯಾಕ್ಸಿ ದುಬಾರಿ
ಪವರ್ ಪ್ಲೇಯ ಕೊನೆಯ ಓವರ್ ಬೌಲ್ ಮಾಡಿದ ಮ್ಯಾಕ್ಸಿ ಈ ಓವರ್ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಬಿಟ್ಟುಕೊಟ್ಟರು.
ಪಡಿಕಲ್ ಬೌಂಡರಿ
5ನೇ ಓವರ್ ಎಸೆದ ವೈಶಾಕ್ ತುಂಬಾ ದುಬಾರಿಯಾದರು. ಈ ಓವರ್ನಲ್ಲಿ ಪಡಿಕಲ್ ಒಟ್ಟು 3 ಬೌಂಡರಿ ಹೊಡೆದರು.
ಜೈಸ್ವಾಲ್ ಬೌಂಡರಿ
ಸಿರಾಜ್ ಎಸೆದ 3ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಜೈಸ್ವಾಲ್ ಬೌಂಡರಿ ಹೊಡೆದರು.
ಶೂನ್ಯಕ್ಕೆ ಬಟ್ಲರ್ ಔಟ್
ಸಿರಾಜ್ ಮೊದಲ ಓವರ್ನಲ್ಲೇ ವಿಕೆಟ್ ಉರುಳಿಸುವ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ. ಓವರ್‌ನ 4ನೇ ಎಸೆತದಲ್ಲಿ ಸಿರಾಜ್, ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
190 ರನ್ ಟಾರ್ಗೆಟ್
ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕದ ನೆರವಿನಿಂದಾಗಿ ಆರ್‌ಸಿಬಿ ಎದುರಾಳಿಗೆ 190 ರನ್ ಟಾರ್ಗೆಟ್ ನೀಡಿದೆ.
ಕಾರ್ತಿಕ್ ಔಟ್
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದಿನೇಶ್ ಕಾರ್ತಿಕ್ ರೂಪದಲ್ಲಿ ಎಂಟನೇ ಹೊಡೆತ ಬಿದ್ದಿದೆ. ಕಾರ್ತಿಕ್ 13 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 16 ರನ್ ಗಳಿಸಿ ಸಂದೀಪ್ ಶರ್ಮಾಗೆ ಬಲಿಯಾದರು. ನಂತರ ವಿಜಯ್ ಕುಮಾರ್ ಪೆವಿಲಿಯನ್‌ಗೆ ಮರಳಿದರು. ತಂಡದ ಸ್ಕೋರ್ 19.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 184 ರನ್ ಆಗಿದೆ.
ಕಾರ್ತಿಕ್ ಜೊತೆ ಕ್ರೀಸ್‌ನಲ್ಲಿ ಡೇವಿಡ್ ವಿಲ್ಲಿ
ಕಾರ್ತಿಕ್ ಜೊತೆ ಡೇವಿಡ್ ವಿಲ್ಲಿ ಕ್ರೀಸ್‌ನಲ್ಲಿದ್ದಾರೆ. ಆರ್‌ಸಿಬಿ ಸ್ಕೋರ್ 19 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 180 ಆಗಿದೆ.
ಹಸರಂಗ ಔಟ್
ಹಸರಂಗ ರನ್ ಔಟ್ ಆಗಿದ್ದಾನೆ. ವೈಡ್ ಬಾಲ್ನಲ್ಲಿ ಹಸರಂಗ ರನೌಟ್ ಆದರು. ಬೆಂಗಳೂರಿನ 7 ವಿಕೆಟ್‌ಗಳು ಪತನಗೊಂಡಿವೆ.
ಡಿಕೆ ಬೌಂಡರಿ
18ನೇ ಓವರ್‌ನ 3ನೇ ಎಸೆತದಲ್ಲಿ ಡಿಕೆ ಮಿಡ್ ವಿಕೆಟ್ ಕಡೆ ಬೌಂಡರಿ ಹೊಡೆದರು.
ಸುಯೇಶ್ ಔಟ್
ಇಲ್ಲದ ರನ್ ಕದಿಯುವ ಯತ್ನದಲ್ಲಿ 17ನೇ ಓವರ್ ಕೊನೆಯ ಎಸೆತದಲ್ಲಿ ಸುಯೇಶ್ ರನೌಟ್ ಆದರು.
ಮಹಿಪಾಲ್ ಔಟ್
16ನೇ ಓವರ್‌ನ 3ನೇ ಎಸೆತದಲ್ಲಿ ಮಹಿಪಾಲ್ ಕ್ಯಾಚಿತ್ತು ಔಟಾದರು.
ಮ್ಯಾಕ್ಸ್‌ವೆಲ್ ಔಟ್
ಅಶ್ವಿನ್ ಎಸೆದ 15ನೇ ಓವರ್ನಲ್ಲಿ ಮಹಿಪಾಲ್ ಕವರ್ಸ್ನಲ್ಲಿ ಬೌಂಡರಿ ಬಾರಿಸಿದರೆ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ಅರ್ಧಶತಕ ಬಾರಿಸಿದ್ದ ಮ್ಯಾಕ್ಸ್‌ವೆಲ್ ಕ್ಯಾಚಿತ್ತು ಔಟಾದರು.
ಫಾಫ್ ರನೌಟ್
14ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಫಾಫ್, 2ನೇ ಎಸೆತವನ್ನು ಮಿಡ್ ಆಫ್ ಕಡೆ ಆಡಿ ರನ್ಗಾಗಿ ಓಡಿದರು. ಆದರೆ ಅದ್ಭುತ ಫಿಲ್ಡಿಂಗ್ ಮಾಡಿದ ಜೈಸ್ವಾಲ್ ಕ್ವಿಕ್ ರನೌಟ್ ಮಾಡಿದರು. ಹೀಗಾಗಿ ಫಾಫ್ ಔಟಾಗಿ ಮರಳಬೇಕಾಯಿತು.
ಫಾಫ್ ಅರ್ಧಶತಕ
12ನೇ ಓವರ್ನಲ್ಲೇ ಬೌಂಡರಿ ಬಾರಿಸಿದ ಫಾಫ್ ತಮ್ಮ ಅರ್ಧಶತಕ ಪೂರೈಸಿದರು. ಹಾಗೆಯೇ ಓವರ್‌ನ ಕೊನೆಯ ಎಸೆತದಲ್ಲೂ ಮತ್ತೊಂದು ಬೌಂಡರಿ ಬಂತು.
ಫಾಫ್- ಮ್ಯಾಕ್ಸಿ ಶತಕದ ಜೊತೆಯಾಟ
ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್ಸಿಬಿಗೆ ಫಾಫ್ ಹಾಗೂ ಮ್ಯಾಕ್ಸಿ ಶತಕದ ಜೊತೆಯಾಟ ನೆರವಾಗಿದೆ. ಬೋಲ್ಟ್ ಎಸೆದ 12ನೇ ಓವರ್ನಲ್ಲಿ ವೈಡ್ ಮೂಲಕ ಬೌಂಡರಿ ಕೂಡ ಬಂತು.
ಮ್ಯಾಕ್ಸ್‌ವೆಲ್ ಅರ್ಧಶತಕ
10ನೇ ಓವರ್‌ನ 2ನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ಕಡೆ ಫಾಫ್ ಬೌಂಡರಿಗಟ್ಟಿದರೆ, 4ನೇ ಎಸೆತವನ್ನು ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಬಾರಿಸಿದ ಮ್ಯಾಕ್ಸಿ ತಮ್ಮ ಅರ್ಧಶತಕ ಪೂರೈಸಿದರು.
9 ಓವರ್ ಅಂತ್ಯ
8 ಮತ್ತು 9ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಸದ್ಯ 9 ಓವರ್ ಅಂತ್ಯಕ್ಕೆ ಆರ್‌ಸಿಬಿ 84/2
ಚಹಲ್ಗೆ ಸಿಕ್ಸರ್
ಚಹಲ್ ಎಸೆದ 7ನೇ ಓವರ್‌ನ 4ನೇ ಎಸೆತವನ್ನು ರಿವರ್ಸ್ವಿಪ್ ಆಡಿದ ಮ್ಯಾಕ್ಸಿ ಅದ್ಭುತ ಸಿಕ್ಸರ್ ಬಾರಿಸಿದರು.
ಪವರ್ ಪ್ಲೇ ಅಂತ್ಯ
ಪವರ್ ಪ್ಲೇಯ ಕೊನೆಯ ಓವರ್ ಬೌಲ್ ಮಾಡಲು ಬಂದ ಅಶ್ವಿನ್ ಅವರ 3ನೇ ಎಸೆತವನ್ನು ಸ್ಕ್ವೆರ್ ಲೆಗ್ನಲ್ಲಿ ಬೌಂಡರಿಗಟ್ಟಿದ ಮ್ಯಾಕ್ಸಿ, 5ನೇ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
5ನೇ ಓವರ್ನಲ್ಲೂ ಬೌಂಡರಿ
5ನೇ ಓವರ್‌ನ ಮೊದಲ ಎಸೆತವನ್ನು ಶಾರ್ಟ್ ಥರ್ಡ್ಮ್ಯಾನ್ ಕಡೆ ಬೌಂಡರಿಗಟ್ಟಿದ ಮ್ಯಾಕ್ಸಿ, 4ನೇ ಎಸೆತವನ್ನು ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು.
ಫಾಫ್ 2 ಸಿಕ್ಸರ್
ಸಂದೀಪ್ ಶರ್ಮಾ ಎಸೆದ 4ನೇ ಓವರ್‌ನ 3 ಮತ್ತು 4ನೇ ಎಸೆತವನ್ನು ಫಾಫ್ ಸಿಕ್ಸರ್ಗಟ್ಟಿದರು. ಹಾಗೆಯೇ 6ನೇ ಎಸೆತ ಬೌಂಡರಿ ದಾಟಿತು.
ಮ್ಯಾಕ್ಸಿ ಬೌಂಡರಿ
3ನೇ ಓವರ್‌ನ 2ಮತ್ತು 5ನೇ ಎಸೆತವನ್ನು ಮ್ಯಾಕ್ಸ್‌ವೆಲ್ ಕವರ್ಸ್ನಲ್ಲಿ ಬೌಂಡರಿಗಟ್ಟಿದರು.
ಶಹಬಾಜ್ ಔಟ್
ತಮ್ಮ ಕೋಟಾದ 2ನೇ ಓವರ್ ಎಸೆಯಲು ಬಂದ ಬೋಲ್ಟ್, ಶಹಬಾಜ್ ವಿಕೆಟ್ ಉರುಳಿಸಿದ್ದಾರೆ.
ಫಾಫ್ ಬೌಂಡರಿ
ಸಂದೀಪ್ ಎಸೆದ 2ನೇ ಓವರ್‌ನ 2 ಮತ್ತು 4ನೇ ಎಸೆತವನ್ನು ನಾಯಕ ಫಾಫ್ ಬೌಂಡರಿಗಟ್ಟಿದರು.
ಶೂನ್ಯಕ್ಕೆ ಕೊಹ್ಲಿ ಔಟ್
ಓವರ್‌ನ ಮೊದಲ ಎಸೆತದಲ್ಲೇ ಕೊಹ್ಲಿ ಕ್ಲೀನ್ ಎಲ್ಬಿಗೆ ಬಲಿಯಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ಕೀಪರ್/ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ಕೀಪರ್), ಸುಯಶ್ ಪ್ರಭುದೇಸಾಯಿ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯಕುಮಾರ್.
ಆರ್‌ಸಿಬಿ ಮೊದಲು ಬ್ಯಾಟಿಂಗ್
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ರಾಜಸ್ಥಾನ ಮತ್ತು ಬೆಂಗಳೂರು ಮುಖಾಮುಖಿ
ಐಪಿಎಲ್ 2023 ರ 32 ನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಕಳೆದ ವರ್ಷ ರಾಜಸ್ಥಾನ ಎರಡು ಬಾರಿ ಆರ್‌ಸಿಬಿಯನ್ನು ಸೋಲಿಸಿತ್ತು.
Published On - Apr 23,2023 2:45 PM