Sachin Tendulkar Birthday: ಇಂದು ಕ್ರಿಕೆಟ್ ದೇವರ 50ನೇ ಹುಟ್ಟುಹಬ್ಬ: ಜೀವನದಲ್ಲಿ ಅರ್ಧಶತಕ ಬಾರಿಸಿದ ಸಚಿನ್ ತೆಂಡೂಲ್ಕರ್

Happy Birthday Sachin Tendulkar: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಯ 100 ಶತಕಗಳನ್ನು ಬಾರಿಸಿರುವ ಸಚಿನ್ ಇದೀಗ ಜೀವನದ ಅರ್ಧಶತಕವನ್ನು ಪೂರೈಸಿದ್ದಾರೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಸಚಿನ್ ಅವರ ಫೋಟೋವನ್ನು ಹಂಚಿಕೊಂಡು ಶುಭಾಶಯ ಕೋರುತ್ತಿದ್ದಾರೆ.

Sachin Tendulkar Birthday: ಇಂದು ಕ್ರಿಕೆಟ್ ದೇವರ 50ನೇ ಹುಟ್ಟುಹಬ್ಬ: ಜೀವನದಲ್ಲಿ ಅರ್ಧಶತಕ ಬಾರಿಸಿದ ಸಚಿನ್ ತೆಂಡೂಲ್ಕರ್
Sachin Tendulkar Birthday
Follow us
|

Updated on: Apr 24, 2023 | 6:45 AM

ಕ್ರಿಕೆಟ್ (Cricket) ಲೋಕ ಕಂಡ ಶ್ರೇಷ್ಠ ಆಟಗಾರ, ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್ (Sachin Tendulkar) ಅವರು ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದು ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಯ 100 ಶತಕಗಳನ್ನು ಬಾರಿಸಿರುವ ಸಚಿನ್ ಇದೀಗ ಜೀವನದ ಅರ್ಧಶತಕವನ್ನು ಪೂರೈಸಿದ್ದಾರೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಸಚಿನ್ ಅವರ ಫೋಟೋವನ್ನು ಹಂಚಿಕೊಂಡು ಶುಭಾಶಯ ಕೋರುತ್ತಿದ್ದಾರೆ. 16ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಅಂಗಳಕ್ಕೆ ಕಾಲಿಟ್ಟು ಇತಿಹಾಸ ಬರೆದ ಸಚಿನ್​ ಈಗಲೂ ಕೋಟ್ಯಾಂತರ ಕ್ರಿಕೆಟ್​ ಅಭಿಮಾನಿಗಳ ಆರಾಧ್ಯ ದೈವವ.

ಸಚಿನ್ ಅವರು 2013ರ ನವೆಂಬರ್​ 16 ರಂದು ವಾಂಖೆಡೆ ಮೈದಾನದಲ್ಲಿ ಕೊನೆಯ ಪಂದ್ಯವನ್ನಾಡಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಭಾವನಾತ್ಮಕ ವಿದಾಯ ಘೋಷಿಸಿದ್ದರು. ವಿಶೇಷ ಎಂದರೆ ಯಾವ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವನ್ನಾಡಿದ್ದರೋ, ಅದೇ ಕ್ರೀಡಾಂಗಣದಲ್ಲಿ ಸಚಿನ್​ ಅವರು ಶನಿವಾರ 50ನೇ ವರ್ಷದ ಹುಟ್ಟುಹಬ್ಬವನ್ನು ಮುಂಬೈ ಇಂಡಿಯನ್ಸ್​ ಆಟಗಾರರು ಮತ್ತು ಫ್ಯಾನ್ಸ್ ಜೊತೆ ಸೆಲೆಬ್ರೇಟ್​ ಮಾಡಿದರು. 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಲಿಟ್ಲ್ ಮಾಸ್ಟರ್ ಹಲವಾರು ಅವಿಸ್ಮರಣೀಯ ಸನ್ನಿವೇಷಗಳಿಗೆ ಸಾಕ್ಷಿಯಾಗಿದ್ದಾರೆ. ಇದರ ಜೊತಗೆ ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟ್ ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲೂ ಕ್ರಿಕೆಟ್ ನಂಟು ಬೆಳೆಸಿಕೊಂಡಿರುವ ಸಚಿನ್ ‘ನಿರಂತರ ಕ್ರಿಕೆಟ್ ಆಡುವುದು ನನ್ನ ಕರ್ತವ್ಯ’ ಎಂಬ ತಮ್ಮ ಮಾತಿಗೆ ಬದ್ಧರಾಗಿದ್ದಾರೆ.

IPL 2023: ಅತ್ಯಂತ ದುಬಾರಿ ಓವರ್: ಅರ್ಜುನ್ ತೆಂಡೂಲ್ಕರ್ ಹೆಸರಿಗೆ ಕೆಟ್ಟ ದಾಖಲೆ ಸೇರ್ಪಡೆ

ಇದನ್ನೂ ಓದಿ
Image
IPL 2023 Points Table: ಗೆದ್ದರೂ ಮೇಲೇರದ RCB: ಅಗ್ರಸ್ಥಾನದಲ್ಲಿ CSK
Image
IPL 2023: RCB ತಂಡದ ಮುಂದಿನ ಎದುರಾಳಿ ಯಾರು ಗೊತ್ತಾ?
Image
IPL 2023: 5 ಭರ್ಜರಿ ಸಿಕ್ಸ್, 6 ಫೋರ್: ರಹಾನೆ ಸಿಡಿಲಬ್ಬರಕ್ಕೆ ಕಂಗಾಲಾದ KKR
Image
IPL 2023: ವಿರಾಟ್ ಕೊಹ್ಲಿಯ ದಾಖಲೆ ಮುರಿದ ಕೆಎಲ್ ರಾಹುಲ್

ಮಹಾರಾಷ್ಟ್ರದ ಮುಂಬಯಿನಲ್ಲಿ 1973ರಂದು ಜನಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ಶತಕದ ಶತಕಗಳ ಸರದಾರ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಗಳನ್ನು ಬಾರಿಸಿ ದಾಖಲೆ ಮಾಡಿದ ಕ್ರಿಕೆಟ್‌ ದಂತಕತೆ. 24 ವರ್ಷಗಳ ಕಾಲ ಕ್ರಿಕೆಟ್ ಆಡಿ ಬ್ಯಾಟಿಂಗ್​​ನಲ್ಲಿ ನೂರಾರು ದಾಖಲೆ ಬರೆದ ಸಚಿನ್, ಭಾರತ ರತ್ನ ಪುರಸ್ಕೃತರೂ ಹೌದು. ಇಂದಿಗೂ ಸಚಿನ್ ಅವರು ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಖೇಲ್‌ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ ಎಂದರೆ ಅದು ಸಚಿನ್.

ತೆಂಡೂಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 16 ವರ್ಷದ ಹಾಲುಗಲ್ಲದ ಹುಡುಗ ಮುಂದೊಂದು ದಿನ 22 ಗಜಗಳ ಕ್ರಿಕೆಟ್ ಪಿಚ್ ಆಳುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕೆ ಸಾಧ್ಯವಿಲ್ಲ. 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಬರೋಬ್ಬರಿ 34,357 ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಏಕದಿನ ಪಂದ್ಯಾಗಳಲ್ಲಿ ಅಜೇಯ 200 ರನ್​ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 2010ರಲ್ಲೇ ಸಚಿನ್ ಅವರು ಪಾತ್ರರಾಗಿದ್ದರು. ದ. ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 147 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು.

ಏಕದಿನ ಕ್ರಿಕೆಟ್​​ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಇವರು 18,426 ರನ್ ಕಲೆಹಾಕಿದ್ದಾರೆ. 49 ಶತಕ ಹಾಗೂ 96 ಅರ್ಧಶತಕ ಸಿಡಿಸಿದ್ದಾರೆ. ಬೌಲಿಂಗ್​​ನಲ್ಲೂ 154 ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್​​ನಲ್ಲಿ 200 ಪಂದ್ಯಗಳನ್ನಾಡಿದ್ದು, 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಹಾಗೂ 68 ಅರ್ಧಶತಕ ಬಾರಿಸಿದ್ದಾರೆ.

ಸಚಿನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನೇಕ ಸಿನಿಮಾ, ಪುಸ್ತಕಗಳಿವೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಸ್ವತಃ ಸಚಿನ್ ಅವರೇ ಬರೆದಿರುವ ‘Playing It My Way: My Autobiography’ ಪುಸ್ತಕದಲ್ಲಿ ವಿಸ್ತಾರವಾಗಿ ಕ್ರಿಕೆಟ್ ದೇವರ ಬಗ್ಗೆ ನೀವು ತಿಳಿದುಕೊಳ್ಳಬಹುದು. ಹಾಗೆಯೆ ವೈಭವ್ ಪುರಂದರ್ ಬರೆದಿರುವ ‘Sachin Tendulkar: A Definitive Biography’ ಕೂಡ ಚೆನ್ನಾಗಿದೆ. ESPNcricinfo ಪ್ರಕಟಿಸಿರುವ ‘Sachin Tendulkar: The Man Cricket Loved Back’ ನಲ್ಲಿ ಅನೇಕ ಮಾಹಿತಿಗಳಿವೆ. ಖಲೀಲ್ ಎಹೆಚ್ ಅನ್ಸಾರಿ ಅವರ ‘Sachin, Born to Bat: The Journey of Cricket’s Ultimate Centurion’ ಕೂಡ ಉತ್ತಮವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಜೇಮ್ಸ್ ಎರ್ಸಿಕ್ಕಿನ್ ನಿರ್ದೇಶನದ ‘Sachin: A Billion Dreams’ ಎಂಬ ಡಾಕ್ಯುಮೆಂಟರಿಯಲ್ಲೂ ಸಚಿನ್ ಕುರಿತ ಅನೇಕ ವಿಶೇಷತೆಗಳಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ