- Kannada News Photo gallery Cricket photos Virat Kohli in post-match presentation he said Josh Hazlewood comes in next game RCB vs RR IPL 2023
Virat Kohli: ಆ ಆಟಗಾರ ಬರುತ್ತಿದ್ದಾನೆ: ಪಂದ್ಯ ಮುಗಿದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ
RCB vs RR, IPL 2023: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲರ್ ಜೋಶ್ ಹ್ಯಾಜ್ಲೆವುಡ್ ಆಗಮನದ ಬಗ್ಗೆ ಸುಳಿವು ನೀಡಿದ್ದಾರೆ.
Updated on:Apr 24, 2023 | 9:52 AM

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಐಪಿಎಲ್ 2023ರ 32ನೇ ಪಂದ್ಯ ರಣರೋಚಕವಾಗಿತ್ತು. ಈ ಪಂದ್ಯದಲ್ಲಿ ಆರ್ಸಿಬಿ 7 ರನ್ಗಳ ರೋಚಕ ಜಯ ಸಾಧಿಸಿತು.

ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್‌ವೆಲ್ 77 ರನ್ ಹಾಗೂ ಫಾಫ್ ಡುಪ್ಲೆಸಿಸ್ 62 ರನ್ ಚಚ್ಚಿ 189 ರನ್ ಕಲೆಹಾಕಿದರು. ರಾಜಸ್ಥಾನ್ ರಾಯಲ್ಸ್ 182 ರನ್ ಗಳಿಸಿ ಸೋಲುಂಡಿತು. ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್ 3 ವಿಕೆಟ್ ಕಿತ್ತು ಮಿಂಚಿದರು.

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಅವರು ಮಾರಕ ಬೌಲರ್ ಜೋಶ್ ಹ್ಯಾಜ್ಲೆವುಡ್ ಆಗಮನದ ಬಗ್ಗೆ ಸುಳಿವು ನೀಡಿದ್ದಾರೆ.

ಹ್ಯಾಜ್ಲೆವುಡ್ ಮುಂದಿನ ಪಂದ್ಯದಿಂದ ಕಣಕ್ಕಿಳಿಯಲಿದ್ದಾರೆ ಎಂದಿರುವ ಕೊಹ್ಲಿ, ಅವರು ಬಂದ ನಂತರ ನಮ್ಮ ಬೌಲಿಂಗ್ ವಿಭಾಗ ಇನ್ನಷ್ಟು ಕಠಿಣವಾಗಲಿದೆ ಎಂದು ಹೇಳಿದ್ದಾರೆ. ಫಾಫ್ ಹಾಗೂ ಮ್ಯಾಕ್ಸಿ ಆಟವನ್ನೂ ಕೊಹ್ಲಿ ಕೊಂಡಾಡಿದ್ದಾರೆ.

ಕಳೆದ ಸಿಎಸ್ಕೆ ವಿರುದ್ಧದ ಪಂದ್ಯಕ್ಕಿಂತಲೂ ಈ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಹಾಗೂ ಡುಪ್ಲೆಸಿಸ್ ಅವರ ಕೌಂಟರ್ ಅಟ್ಯಾಕಿಂಗ್ ಜೊತೆಯಾಟ ಅದ್ಭುತವಾಗಿದೆ. ಹಿಂದಿನ ಪಂದ್ಯದ ಪಿಚ್‌ಗಿಂತ ಇಲ್ಲಿನ ಪಿಚ್ ಚೆನ್ನಾಗಿತ್ತು. ಕೇವಲ 4 ಓವರ್‌ಗಳಲ್ಲಿ ಮ್ಯಾಕ್ಸ್‌ವೆಲ್ ಪಂದ್ಯವನ್ನು ಕಸಿದುಕೊಂಡರು ಎಂದು ಹೇಳಿದ್ದಾರೆ.

ನಾವು 160 ರನ್ ಹೊಡೆದರೆ ಸಾಕು ಎಂದು ಭಾವಿಸಿದ್ದೆವೆ. ಆದರೆ ಮ್ಯಾಕ್ಸ್‌ವೆಲ್-ಫಾಫ್ ಆಟದಿಂದ ತಂಡದ ಮೊತ್ತ 190ಕ್ಕೆ ಬಂದು ನಿಂತಿತು. ಮೊಹಮ್ಮದ್ ಸಿರಾಜ್ ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಹೊಸ ಚೆಂಡಿನಲ್ಲಿ ಅವರು ತೋರುವ ವಿಶ್ವಾಸ ಅತ್ಯುತ್ತಮವಾಗಿದೆ. ಅವರು ಪರ್ಪಲ್ ಕ್ಯಾಪ್ ತೊಟ್ಟಿರುವುದು ಇದೇ ಕಾರಣಕ್ಕೆ. ನಮ್ಮ ಬೌಲಿಂಗ್ ವಿಭಾಗವನ್ನು ಅವರು ಮುನ್ನಡೆಸುತ್ತಿದ್ದಾರೆ - ವಿರಾಟ್ ಕೊಹ್ಲಿ.

ಬ್ಯಾಟಿಂಗ್ ಪಿಚ್ ಆಗಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲ್ ಮಾಡುವುದು ಸುಲಭವಲ್ಲ. ನಾವು ಸಾಕಷ್ಟು ಕಠಿಣ ಓವರ್‌ಗಳನ್ನು ಇಲ್ಲಿ ಹಾಕಿದ್ದೇವೆ. ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ಮೇಲೆ ನಮಗೆ ನಂಬಿಕೆ ಇದೆ. ಡೆಲ್ಲಿ ಹಾಗೂ ಇವತ್ತಿನ ಪಂದ್ಯದಲ್ಲಿ ಹರ್ಷಲ್ ಚೆನ್ನಾಗಿ ಬೌಲ್ ಮಾಡಿದ್ದಾರೆ ಎಂಬುದು ಕೊಹ್ಲಿ ಮಾತು.
Published On - 9:52 am, Mon, 24 April 23














