Optical Illusion: ಸಮುದ್ರ ಆಳದಲ್ಲಿರುವ ಮೀನನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ
ಆಪ್ಟಿಕಲ್ ಇಲ್ಯೂಷನ್ ಮತ್ತು ಪಝಲ್ ಚಿತ್ರಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೇ, ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿರುವ ಮೀನನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಕೇವಲ 10 ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ. ಒಂದು ವೇಳೆ ನಿಮಗೆ ಈ ಜಲಚರ ಜೀವಿಯನ್ನು ಗುರುತಿಸಲು ಸಾಧ್ಯವಾದರೆ ನೀವು ಬುದ್ಧಿವಂತರೆನ್ನುವುದು ಖಚಿತವಾಗುತ್ತದೆ.

ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದೀರಾ. ಹಾಗಾದ್ರೆ ಇದೀಗ ಒಳ್ಳೆಯ ಸಮಯ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳ ಮೂಲಕ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಬಹುದು. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಸಮುದ್ರ ತಳದಲ್ಲಿರುವ ಅನೇಕ ಜೀವಿಗಳ ನಡುವೆ ಮೀನು ಇದೆ. ಆ ಮೀನು ಎಲ್ಲಿದೆ ಎಂದು ಗುರುತಿಸುವುದೇ ನಿಮ್ಮ ಮುಂದಿರುವ ಸವಾಲು. ಇಲ್ಲಿ ನೀಡಿರುವ ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ ನೀವು ಬುದ್ಧಿವಂತರೇ ಎಂದು ಪರೀಕ್ಷಿಸಿಕೊಳ್ಳಿ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಮೊದಲು ನೋಡಿದಾಗ ನಿಮಗೆ ಸಮುದ್ರ ತಳವು ಕಾಣಿಸುತ್ತದೆ. ಈ ಸಮುದ್ರದ ತಳದಲ್ಲಿ ಅನೇಕ ಜೀವಿಗಳಾದ ಆಮೆಗಳು, ಜೆಲ್ಲಿ ಮೀನುಗಳು, ಆಕ್ಟೋಪಸ್‌ಗಳು, ನಕ್ಷತ್ರ ಮೀನುಗಳು ಮತ್ತು ಇತರ ಜೀವಿಗಳು ಗೋಚರಿಸುತ್ತವೆ. ನೀವು ಇಲ್ಲಿ ವಿವಿಧ ರೀತಿಯ ಸಸ್ಯಗಳನ್ನು ಸಹ ನೋಡಬಹುದು. ಈ ಫೋಟೋದಲ್ಲಿ ಮೀನೊಂದು ಅಡಗಿದೆ. ನೀವು ಸವಾಲು ಸ್ವೀಕರಿಸಲು ರೆಡಿ ಇದ್ರೆ ಈ ಚಿತ್ರದತ್ತ ಗಮನ ಹರಿಸಿ.
ಇದನ್ನೂ ಓದಿ:ಜಸ್ಟ್ 13 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಮನೆಯ ಬೀಗದ ಕೈಯನ್ನು ಹುಡುಕಬಲ್ಲಿರಾ
ಮೀನನ್ನು ಗುರುತಿಸಲು ಸಾಧ್ಯವಾಯಿತೇ?
ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ಹೀಗಾಗಿ ಈ ಚಿತ್ರದಲ್ಲಿರುವ ಮೀನು ನಿಮ್ಮ ಕಣ್ಣಿಗೆ ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ನೀವು ಸ್ವಲ್ಪ ಹತ್ತಿರದಿಂದ ನೋಡಬೇಕು. ಆದರೆ ಈ ಜಲಚರ ಜೀವಿ ಎಲ್ಲಿದೆ ಎಂದು ನಾವೇ ಹೇಳುತ್ತೇವೆ. ಹಚ್ಚ ಹಸಿರಿನ ಸಸ್ಯದ ನಡುವೆ ಮೀನು ಇದೆ. ಈ ಕೆಳಗಿನ ಚಿತ್ರದಲ್ಲಿ ನಾವು ಮೀನನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 am, Mon, 26 January 26
