AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಜಸ್ಟ್‌ 13 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಮನೆಯ ಬೀಗದ ಕೈಯನ್ನು ಹುಡುಕಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಈ ಚಿತ್ರಗಳು ಕಣ್ಣು ಹಾಗೂ ಮೆದುಳನ್ನು ಪರೀಕ್ಷೆಗೆ ಒಳಪಡಿಸುತ್ತದೆ. ಒಂದು ಕ್ಷಣ ಇಂತಹ ಇಲ್ಯೂಷನ್ ಚಿತ್ರ ನೋಡಿದಾಗ ದಂಗಾಗುತ್ತೇವೆ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಮನೆಯ ಬೀಗದ ಕೈ ಎಲ್ಲಿದೆ ಎಂದು ಹುಡುಕುವ ಸವಾಲು ಇದೆ. ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಈ ಸಮಯ ಬಳಸಿಕೊಳ್ಳಿ.

Optical Illusion: ಜಸ್ಟ್‌ 13 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಮನೆಯ ಬೀಗದ ಕೈಯನ್ನು ಹುಡುಕಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media
ಸಾಯಿನಂದಾ
|

Updated on: Jan 25, 2026 | 10:19 AM

Share

ಆಪ್ಟಿಕಲ್ ಇಲ್ಯೂಷನ್​ಗಳು (Optical Illusion) ಮೋಜಿನ ಸಂಗತಿ. ಕೆಲವರು ಬೋರ್ ಎನಿಸಿದಾಗ ಇಂತಹ ಮೋಜಿನ ಆಟಗಳನ್ನು ಬಿಡಿಸಲು ಇಷ್ಟ ಪಡ್ತಾರೆ. ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಪ್ರತಿನಿತ್ಯ ವೈರಲ್‌ ಆಗುವುದನ್ನು ನೀವು ನೋಡಿರುತ್ತೀರಿ. ಕೆಲವರು ಈ ಚಿತ್ರಗಳತ್ತ ಕಣ್ಣಾಯಿಸಿ ಬಿಡಿಸುವಲ್ಲಿ ವಿಫಲರಾಗುತ್ತಾರೆ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಮಹಿಳೆ ಬೀಗದ ಕೈ ಹುಡುಕುತ್ತಿದ್ದು, ಕೀ ಎಲ್ಲಿದೆ ಎಂದು 13 ಸೆಕೆಂಡುಗಳಲ್ಲಿ ಹೇಳುವ ಸವಾಲು ಇಲ್ಲಿದೆ.

ಈ ಇಲ್ಯೂಷನ್ ಚಿತ್ರ ಏನು ಹೇಳುತ್ತದೆ?

Optical Illusion

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಲು ಸರಳವಾಗಿ ಕಂಡರೂ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ಮಹಿಳೆಯೊಬ್ಬಳು ಮನೆಯ ಹೊರಗಡೆ ನಿಂತುಕೊಂಡು ತನ್ನ ಬ್ಯಾಗ್‌ನಲ್ಲಿ ಮನೆಯ ಬೀಗದ ಕೈ ಹುಡುಕುತ್ತಿದ್ದಾಳೆ. ಆದರೆ ಇಲ್ಲಿರುವ ಸವಾಲು ಕೀಲಿ ಕೈ ಎಲ್ಲಿದೆ ಎಂದು ಹೇಳುವುದು. ಈ ಒಗಟು ಬಿಡಿಸಲು ಸಿದ್ಧರಿದ್ದೀರಿ ಅಂತಾದ್ರೆ 13 ಸೆಕೆಂಡುಗಳಲ್ಲಿ ಉತ್ತರ ಹೇಳಿ ಜಾಣರು ಎನಿಸಿಕೊಳ್ಳಿ.

ಇದನ್ನೂ ಓದಿ: ನೀವು ಜಾಣರೇ, ಈ ಚಿತ್ರದಲ್ಲಿ ಅಡಗಿರುವ ಜಿರಾಫೆಯನ್ನು ಕಂಡು ಹಿಡಿಯಬಲ್ಲಿರಾ

ಬೀಗದ ಕೈ ಸಿಕ್ಕಿತೇ?

ಸಾಮಾನ್ಯವಾಗಿ ನಾವು ಮನೆಯಲ್ಲಿ ಇಟ್ಟ ವಸ್ತುಗಳನ್ನು ಮರೆತು ಬಿಡುತ್ತೇವೆ. ಈ ಇಲ್ಯೂಷನ್ ಚಿತ್ರದಲ್ಲೂ ಹಾಗೆಯೇ ಆಗಿದೆ. ಮಹಿಳೆಯೂ ಬೀಗದ ಕೈ ಇಟ್ಟ ಜಾಗವನ್ನು ಮರೆತು ಬಿಟ್ಟಿದ್ದು ಈಗ ಹುಡುಕುತ್ತಿದ್ದಾಳೆ. ನಿಮಗೆ ಈ ಬೀಗದ ಕೈಯನ್ನು ಹುಡುಕಲು ಸಾಧ್ಯವಾಗಿದೆಯೇ. ಈ ಒಗಟು ಬಿಡಿಸುವಲ್ಲಿ ಗೆದ್ದಿದರೆ ಅಭಿನಂದನೆಗಳು. ಒಂದು ವೇಳೆ ಸೋತಿದ್ದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಚಿತ್ರದಲ್ಲಿ ಬೀಗದ ಕೈ ಎಲ್ಲಿದೆ ಎಂದು ಗುರುತಿಸಿದ್ದೇವೆ.  ಕೀಲಿ ಕೈ ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ಭಾವಿಸುತ್ತೇವೆ.

Optical Illusion Answer

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ