
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ (IPL 2021) 49ನೇ ಪಂದ್ಯದಲ್ಲಿ ಇಯಾನ್ ಮೊರ್ಗನ್ (Eion Morgan) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ (KKR vs SRH) ವಿರುದ್ದ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸನ್ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಎಸ್ಆರ್ಹೆಚ್ ತಂಡವು ನಿಗದಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 115 ರನ್ ಪೇರಿಸಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ 19.4 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 119 ರನ್ ಬಾರಿಸುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 21 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಸನ್ರೈಸರ್ಸ್ ಹೈದರಾಬಾದ್ ಕೇವಲ 7 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇನ್ನು ಎಸ್ಆರ್ಹೆಚ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಕೋಲ್ಕತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮೊರ್ಗನ್ (ನಾಯಕ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕರವರ್ತಿ
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್
ಭುವನೇಶ್ವರ್ ಕುಮಾರ್ ಎಸೆತದಲ್ಲಿ ದಿನೇಶ್ ಕಾರ್ತಿಕ್ ಆಫ್ ಸೈಡ್ನತ್ತ ಸೂಪರ್ ಶಾಟ್…ಫೋರ್
ಜೇಸನ್ ಹೋಲ್ಡರ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ನಿತೀಶ್ ರಾಣಾ (25)
ದಿನೇಶ್ ಕಾರ್ತಿಕ್ ಸ್ಟ್ರೈಟ್ ಡ್ರೈವ್…ಸಿದ್ದಾರ್ಥ್ ಕೌಲ್ ಎಸೆತಕ್ಕೆ ಬೌಂಡರಿ ಉತ್ತರ…ಫೋರ್
57 ರನ್ ಬಾರಿಸಿ ಸಿದ್ದಾರ್ಥ್ ಕೌಲ್ಗೆ ವಿಕೆಟ್ ಒಪ್ಪಿಸಿದ ಶುಭ್ಮನ್ ಗಿಲ್
ರಶೀದ್ ಖಾನ್ ಎಸೆತದಲ್ಲಿ ಸ್ಟ್ರೈಟ್ ಹಿಟ್..ರಾಣಾ ಬ್ಯಾಟ್ನಿಂದ ಫೋರ್
ಉಮ್ರಾನ್ ಮಲಿಕ್ ಓವರ್ನಲ್ಲಿ ಸೂಪರ್ ಬೌಂಡರಿ…ಗಿಲ್ ಬ್ಯಾಟ್ನಿಂದ ಫೋರ್
43 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಗಿಲ್
ಉಮ್ರಾನ್ ಮಲಿಕ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ…ಫೋರ್
ಜೇಸನ್ ಹೋಲ್ಡರ್ ಎಸೆತದಲ್ಲಿ ಶುಭ್ಮನ್ ಗಿಲ್ ಸೂಪರ್ ಶಾಟ್…ಫೋರ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ನಿತೀಶ್ ರಾಣಾ ಬ್ಯಾಟಿಂಗ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ನಿತೀಶ್ ರಾಣಾ ಬ್ಯಾಟಿಂಗ್
ರಶೀದ್ ಖಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ರಾಹುಲ್ ತ್ರಿಪಾಠಿ
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ರಾಹುಲ್ ತ್ರಿಪಾಠಿ ಬ್ಯಾಟಿಂಗ್
ಭುವಿ ಓವರ್ನಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಗಿಲ್
ಜೇಸನ್ ಹೋಲ್ಡರ್ ಎಸೆತದಲ್ಲಿ ಕೇನ್ ವಿಲಿಯಮ್ಸನ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ವೆಂಕಟೇಶ್ ಅಯ್ಯರ್
ಎರಡು ಬೌಂಡರಿ ಬಾರಿಸಿ ಉತ್ತಮ ಇನಿಂಗ್ಸ್ ಕಟ್ಟುತ್ತಿರುವ ಶುಭ್ಮನ್ ಗಿಲ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್
ಕೆಕೆಆರ್ ತಂಡಕ್ಕೆ 116 ರನ್ಗಳ ಸಾಧಾರಣ ಗುರಿ ನೀಡಿದ ಸನ್ರೈಸರ್ಸ್ ಹೈದರಾಬಾದ್
8 ವಿಕೆಟ್ ಕಳೆದುಕೊಂಡ ಸನ್ರೈಸರ್ಸ್
ಮಾವಿ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಔಟ್
ಟಿಮ್ ಸೌಥಿ ಎಸೆತದಲ್ಲಿ ಗಿಲ್ಗೆ ಕ್ಯಾಚ್ ನೀಡಿ ಇನಿಂಗ್ಸ್ ಅಂತ್ಯಗೊಳಿಸಿದ ಅಬ್ದುಲ್ ಸಮದ್ (25)
ವರುಣ್ ಚಕ್ರವರ್ತಿ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಅಬ್ದುಲ್ ಸಮದ್
ವರುಣ್ ಚಕ್ರವರ್ತಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಜೇಸನ್ ಹೋಲ್ಡರ್
ಕ್ರೀಸ್ನಲ್ಲಿ ಅಬ್ದುಲ್ ಸಮದ್-ಜೇಸನ್ ಹೋಲ್ಡರ್ ಬ್ಯಾಟಿಂಗ್
ವರುಣ್ ಚಕ್ರವರ್ತಿ ಎಸೆತದಲ್ಲಿ ರಾಹುಲ್ ತ್ರಿಪಾಠಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ಪ್ರಿಯಂ ಗರ್ಗ್
ಶಕೀಬ್ ಎಸೆತದಲ್ಲಿ ಪ್ರಿಯಂ ಗರ್ಗ್ ಬಿಗ್ ಹಿಟ್…ಸಿಕ್ಸ್
ಶಕೀಬ್ ಎಸೆತದಲ್ಲಿ ಅಭಿಷೇಕ್ ಶರ್ಮಾ ಸ್ಟಂಪ್ಔಟ್
ಕ್ರೀಸ್ನಲ್ಲಿ ಅಭಿಷೇಕ್ ಶರ್ಮಾ-ಪ್ರಿಯಂ ಗರ್ಗ್ ಬ್ಯಾಟಿಂಗ್
ಶಕೀಬ್ ಅಲ್ ಹಸನ್ ಉತ್ತಮ ಫೀಲ್ಡಿಂಗ್…ವಿಲಿಯಮ್ಸನ್ ರನೌಟ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಪ್ರಿಯಂ ಗರ್ಗ್ ಬ್ಯಾಟಿಂಗ್
ಆಫ್ಸೈಡ್ನತ್ತ ಬೌಂಡರಿ…ಮಾವಿ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಕೇನ್ ವಿಲಿಯಮ್ಸನ್
ಶಿವಂ ಮಾವಿ ಎಸೆತದಲ್ಲಿ ಆಫ್ ಸೈಡ್ನತ್ತ ಕೇನ್ ವಿಲಿಯಮ್ಸನ್ ಸೂಪರ್ ಶಾಟ್- ಫೋರ್
ಕ್ರೀಸ್ನಲ್ಲಿ ಕೇನ್ ವಿಲಿಯಮ್ಸನ್-ಪ್ರಿಯಂ ಗರ್ಗ್ ಬ್ಯಾಟಿಂಗ್
ಶಿವಂ ಮಾವಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಜೇಸನ್ ರಾಯ್ (10)
ಟಿಮ್ ಸೌಥಿ ಎಸೆತ…ಜೇಸನ್ ರಾಯ್ ಬ್ಯೂಟಿಫುಲ್ ಶಾಟ್…ಲೆಗ್ ಸೈಡ್ನತ್ತ ಫೋರ್
ಸೌಥಿ ಎಸೆತದಲ್ಲಿ ಜೇಸನ್ ರಾಯ್ ಬ್ಯಾಟ್ ಇನ್ ಸೈಡ್ ಎಡ್ಜ್…ಫೋರ್
ಕ್ರೀಸ್ನಲ್ಲಿ ಜೇಸನ್ ರಾಯ್-ಕೇನ್ ವಿಲಿಯಮ್ಸನ್
ಟಿಮ್ ಸೌಥಿ ಎಸೆತದಲ್ಲಿ ವೃದ್ದಿಮಾನ್ ಸಾಹ ಎಲ್ಬಿಡಬ್ಲ್ಯೂ
ಕೋಲ್ಕತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮೊರ್ಗನ್ (ನಾಯಕ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕರವರ್ತಿ
ಸನ್ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಸಿದ್ದಾರ್ಥ್ ಕೌಲ್
Published On - 7:02 pm, Sun, 3 October 21