Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs SRH: ಕ್ವಾಲಿಫೈಯರ್​ಗೆ ಕೆಕೆಆರ್ ರೆಡಿ: ಕೋಲ್ಕತ್ತಾ ಫೈನಲ್ ತಲುಪುವುದು ಖಚಿತ ಎನ್ನುತ್ತಿವೆ ಈ ಅಂಶ

Kolkata Knight Riders vs Sunrisers Hyderabad, Qualifier 1: ಇಂದು ಕ್ವಾಲಿಫೈಯರ್ ಒಂದರಲ್ಲಿ ಅಗ್ರ ಎರಡು ತಂಡಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಹಣಾಹಣಿ ನಡೆಯಲಿದೆ. ಗೆಲ್ಲುವ ತಂಡ ಫೈನಲ್‌ಗೆ ಹೋಗಲಿದ್ದು, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ತಜ್ಞರ ಪ್ರಕಾರ ಕೆಕೆಆರ್ ಮೇಲುಗೈ ಸಾಧಿಸಲಿದೆಯಂತೆ.

KKR vs SRH: ಕ್ವಾಲಿಫೈಯರ್​ಗೆ ಕೆಕೆಆರ್ ರೆಡಿ: ಕೋಲ್ಕತ್ತಾ ಫೈನಲ್ ತಲುಪುವುದು ಖಚಿತ ಎನ್ನುತ್ತಿವೆ ಈ ಅಂಶ
KKR
Follow us
Vinay Bhat
|

Updated on: May 21, 2024 | 8:36 AM

ಐಪಿಎಲ್ 2024 ಅಂತಿಮ ಘಟ್ಟಕ್ಕೆ ತಲುಪಿದೆ. ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದ್ದು, ನಾಲ್ಕು ತಂಡಗಳು ನಾಕೌಟ್‌ಗೆ ಲಗ್ಗೆ ಇಟ್ಟಿವೆ. ಇದೀಗ ಪ್ರಶಸ್ತಿ ಹಣಾಹಣಿಗೂ ಮುನ್ನ ಮೂರು ಪಂದ್ಯಗಳು ಮಾತ್ರ ನಡೆಯಲಿದ್ದು, ಇಂದಿನ ಕ್ವಾಲಿಫೈಯರ್-1ರ ಮೂಲಕ ಒಂದು ತಂಡ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಇಂದು ಕ್ವಾಲಿಫೈಯರ್ ಒಂದರಲ್ಲಿ ಅಗ್ರ ಎರಡು ತಂಡಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (KKR vs SRH) ನಡುವೆ ಹಣಾಹಣಿ ನಡೆಯಲಿದೆ. ಗೆಲ್ಲುವ ತಂಡ ಫೈನಲ್‌ಗೆ ಹೋಗಲಿದ್ದು, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ತಜ್ಞರ ಪ್ರಕಾರ ಕೆಕೆಆರ್ ಮೇಲುಗೈ ಸಾಧಿಸಲಿದೆಯಂತೆ. ಇದಕ್ಕೆ ಕಾರಣ ಕೂಡ ನೀಡಿದ್ದಾರೆ.

ಕೆಕೆಆರ್ ಈ ವರ್ಷ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ, ಆದರೆ ಸನ್‌ರೈಸರ್ಸ್ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಎರಡನೇ ಸ್ಥಾನ ಗಳಿಸಿತು. ಕೋಲ್ಕತ್ತಾ ಸಂಪೂರ್ಣ ತಂಡ ಫಾರ್ಮ್‌ನಲ್ಲಿದೆ. ಸುನಿಲ್ ನರೈನ್ ಮತ್ತು ಫಿಲ್ ಸಾಲ್ಟ್ ತಂಡಕ್ಕೆ ಪ್ರತಿ ಪಂದ್ಯದಲ್ಲೂ ಬಿರುಸಿನ ಆರಂಭ ನೀಡಿದರು. ಆಂಡ್ರೆ ರಸೆಲ್ ಬ್ಯಾಟ್ ಬಿರುಸಾಗಿ ಘರ್ಜಿಸುತ್ತಿದೆ. ಅವರು ಚೆಂಡಿನಲ್ಲೂ ಪರಿಣಾಮಕಾರಿಯಾಗಿದ್ದಾರೆ.

ಕಳೆದ ವರ್ಷ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಈ 3 ಆಟಗಾರರು ಈ ವರ್ಷ ಹೀರೋ

ಶ್ರೇಯಸ್ ಅಯ್ಯರ್ ನಾಯಕನ ಇನ್ನಿಂಗ್ಸ್ ಆಡುತ್ತಾರೆ. ವರುಣ್ ಚಕ್ರವರ್ತಿ ಸ್ಪಿನ್ ಮ್ಯಾಜಿಕ್ ಮುಂದುವರೆದಿದೆ. ನರೇನ್ ವಿಕೆಟ್ ಟೇಕಿಂಗ್ ಸ್ಪೆಲ್‌ಗಳನ್ನು ಮಾಡುತ್ತಿದ್ದಾರೆ. ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ಅವರಂತಹ ಸ್ವದೇಶಿ ಬೌಲರ್‌ಗಳೊಂದಿಗೆ ಮಿಚೆಲ್ ಸ್ಟಾರ್ಕ್ ಅವರ ಅನುಭವ ವೇಗದ ಬೌಲಿಂಗ್ ದಾಳಿ ಯಾವುದೇ ಬ್ಯಾಟಿಂಗ್ ಕ್ರಮಾಂಕವನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ.

ಇದರ ಜೊತೆಗೆ ಕೋಲ್ಕತ್ತಾದ ಗೌತಮ್ ಗಂಭೀರ್ ಮೆಂಟರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಮುಖ್ಯ ತರಬೇತುದಾರ ಚಂದ್ರಕಾಂತ್ ಪಂಡಿತ್ ಅವರ ಜುಗಲ್ಬಂದಿ ಯಶಸ್ಸು ತಂದುಕೊಟ್ಟಿದೆ. ಹೈದರಾಬಾದ್ ಆರಂಭಿಕ ಜೋಡಿಯಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ನಂತರ ಒಂದೋ ಎರಡೋ ವಿಕೆಟ್ ಪಡೆದರೆ ಹೈದರಾಬಾದ್ ಬ್ಯಾಟಿಂಗ್ ದುರ್ಬಲ ಎಂಬುದನ್ನು ಕೆಕೆರ್ ಬಯಲು ಮಾಡಲು ಹೊರಟಿದೆ. ಎರಡು ತಂಡಗಳು 26 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಅದರಲ್ಲಿ ಕೋಲ್ಕತ್ತಾ 17 ರಲ್ಲಿ ಜಯಗ ಮತ್ತು ಹೈದರಾಬಾದ್ ಒಂಬತ್ತು ಮಾತ್ರ ಗೆದ್ದಿದೆ.

ಪ್ಲೇ ಆಫ್ ಪಂದ್ಯಗಳಿಗೆ ವರುಣನ ಕಾಟ: ಮಳೆ ಬಂದರೆ ಏನು ನಿಯಮ?, ಇಲ್ಲಿದೆ ಸಂಪೂರ್ಣ ಮಾಹಿತಿ

ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. 2021ರಲ್ಲೂ ಫೈನಲ್ ತಲುಪಿದೆ. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ 11 ಬಾರಿ ಪ್ಲೇ ಆಫ್ ತಲುಪಿದೆ, ಅದರಲ್ಲಿ ಆರು ಬಾರಿ ಸೋಲನ್ನು ಎದುರಿಸಬೇಕಾಯಿತು. ಈ ಋತುವಿನಲ್ಲಿ ಕೆಕೆಆರ್ ತುಂಬಾ ಅಪಾಯಕಾರಿಯಾದಲು ಕಾರಣ ಪ್ರತಿ ಬಾರಿ ತಂಡವು ಹೊಸ ಮ್ಯಾಚ್ ವಿನ್ನರ್ ಅನ್ನು ಪಡೆಯುತ್ತದೆ. ಚೊಚ್ಚಲ ಬಾರಿಗೆ ಬ್ಯಾಟಿಂಗ್ ಮಾಡಿದ ಆಂಗ್ಕ್ರಿಶ್ ರಘುವಂಶಿ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ರಮಣದೀಪ್ ಸಿಂಗ್ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವ ಶ್ಲಾಘನೀಯ.

ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು