KKR vs SRH Highlights IPL 2023: ಬ್ರೂಕ್ ಶತಕ; 23 ರನ್‌ಗಳಿಂದ ಕೆಕೆಆರ್ ಮಣಿಸಿದ ಹೈದರಾಬಾದ್
Kolkata Knight Riders vs Sunrisers Hyderabad Highlights Live Score in Kannada: ಇಂದು ನಡೆದ ಐಪಿಎಲ್ನ 19 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು.
ಇಂದು ನಡೆದ ಐಪಿಎಲ್ನ 19 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ತಂಡದ ಪರ ಹ್ಯಾರಿ ಬ್ರೂಕ್ 100 ರನ್ ಗಳಿಸಿ ಅಜೇಯರಾಗಿ ಉಳಿದರೆ, ನಾಯಕ ಏಡೆನ್ ಮಾರ್ಕ್ರಾಮ್ 50 ರನ್ ಬಾರಿಸಿದರು. 229 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 205 ರನ್ ಗಳಿಸಲಷ್ಟೇ ಶಕ್ತವಾಯಿತು. ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ 75 ರನ್ ಗಳಿಸಿದರೆ, ರಿಂಕು ಸಿಂಗ್ 58 ರನ್ ಗಳಿಸಿ ಅಜೇಯರಾಗಿ ಉಳಿದರು.
LIVE NEWS & UPDATES
-
ಹೈದರಾಬಾದ್ಗೆ ಗೆಲುವು
ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 23 ರನ್ ಗಳಿಂದ ಸೋಲಿಸಿತು. 229 ರನ್‌ಗಳ ಗುರಿಗೆ ಉತ್ತರವಾಗಿ ಕೋಲ್ಕತ್ತಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 205 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಂಕು ಸಿಂಗ್ 58 ರನ್ ಗಳಿಸಿ ಅಜೇಯರಾಗಿ ಉಳಿದರು.
-
ಶಾರ್ದೂಲ್ ಠಾಕೂರ್ ಔಟ್
20ನೇ ಓವರ್‌ನ ಮೊದಲ ಎಸೆತದಲ್ಲಿ ಉಮ್ರಾನ್ ಮಲಿಕ್ ಶಾರ್ದೂಲ್ ಠಾಕೂರ್ ಅವರನ್ನು ಔಟ್ ಮಾಡಿದರು. ಕೆಕೆಆರ್‌ನ 7 ವಿಕೆಟ್‌ಗಳು ಪತನಗೊಂಡವು. ತಂಡ ಗೆಲುವಿನಿಂದ ದೂರ ಉಳಿದಂತೆ ಕಾಣುತ್ತಿದೆ
-
ರಿಂಕು ಅರ್ಧಶತಕ
ನಟರಾಜನ್ ಅವರ 19ನೇ ಓವರ್‌ನ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಬೌಂಡರಿ ಬಾರಿಸಿ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ರಿಂಕು 4 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದರು
18 ಓವರ್ ಅಂತ್ಯ
ಈ ಓವರ್‌ನಲ್ಲಿ ಕ್ಯಾಚ್ ಕೈಚೆಲ್ಲಿದ ಹೈದರಾಬಾದ್ ಒಟ್ಟು ಈ ಪಂದ್ಯದಲ್ಲಿ 6 ಕ್ಯಾಚ್ ಚೆಲ್ಲಿದೆ. ಕೋಲ್ಕತ್ತಾ ಪರ ಶಾರ್ದೂಲ್ ಠಾಕೂರ್ 12 ರನ್ ಹಾಗೂ ರಿಂಕು ಸಿಂಗ್ 35 ರನ್ ಗಳಿಸಿ ಆಡುತ್ತಿದ್ದಾರೆ. ಕೋಲ್ಕತ್ತಾ ಗೆಲುವಿಗೆ 12 ಎಸೆತಗಳಲ್ಲಿ 48 ರನ್ ಅಗತ್ಯವಿದೆ.
17 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 171/6
ಕೋಲ್ಕತ್ತಾ ಗೆಲುವಿಗೆ 18 ಎಸೆತಗಳಲ್ಲಿ 58 ರನ್ ಅಗತ್ಯವಿದೆ. ಕೋಲ್ಕತ್ತಾ ಪರ ಶಾರ್ದೂಲ್ ಠಾಕೂರ್ 5 ರನ್ ಹಾಗೂ ರಿಂಕು ಸಿಂಗ್ 33 ರನ್ ವಿರುದ್ಧ ಆಡುತ್ತಿದ್ದಾರೆ. 17 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 171/6
ರಾಣಾ ಔಟ್
ನಟರಾಜನ್ ಅವರ ಓವರ್‌ನಲ್ಲಿ ನಾಯಕ ರಾಣಾ 75 ರನ್ ಗಳಿಸಿ ಔಟಾದರು. ಕೋಲ್ಕತ್ತಾ ಸ್ಕೋರ್ 16.3 ಓವರ್‌ಗಳಲ್ಲಿ 165/6
ರಿಂಕು ಸಿಕ್ಸ್
16ನೇ ಓವರ್‌ನ ಕೊನೆಯ 2 ಎಸೆತಗಳಲ್ಲಿ ರಿಂಕು ಸತತ 2 ಸಿಕ್ಸರ್ ಬಾರಿಸಿದರು. ಕೋಲ್ಕತ್ತಾ ಪರ ನಿತೀಶ್ ರಾಣಾ ವಿರುದ್ಧ 69 ರನ್ ಹಾಗೂ ರಿಂಕು ಸಿಂಗ್ 32 ರನ್ ವಿರುದ್ಧ ಆಡುತ್ತಿದ್ದಾರೆ. ಕೋಲ್ಕತ್ತಾ ಗೆಲುವಿಗೆ 24 ಎಸೆತಗಳಲ್ಲಿ 70 ರನ್ ಅಗತ್ಯವಿದೆ.
15ನೇ ಓವರ್ ಅಂತ್ಯ
ಭುವಿ ಎಸೆದ 15ನೇ ಓವರ್‌ನಲ್ಲಿ ರಿಂಕು ಬೌಂಡರಿ ಬಾರಿಸಿದರು. ಕೋಲ್ಕತ್ತಾ ಪರ ನಿತೀಶ್ ರಾಣಾ 68 ರನ್ ಹಾಗೂ ರಿಂಕು ಸಿಂಗ್ 19 ರನ್ ಗಳಿಸಿ ಆಡುತ್ತಿದ್ದಾರೆ. ಕೋಲ್ಕತ್ತಾ ಗೆಲುವಿಗೆ 30 ಎಸೆತಗಳಲ್ಲಿ 87 ರನ್ ಅಗತ್ಯವಿದೆ.15 ಓವರ್‌ಗಳಲ್ಲಿ ಕೋಲ್ಕತ್ತಾ ಸ್ಕೋರ್ 142/5.
36 ಎಸೆತಗಳಲ್ಲಿ 94 ರನ್‌ಗಳ ಅಗತ್ಯ
ಕೋಲ್ಕತ್ತಾ ಗೆಲುವಿಗೆ 36 ಎಸೆತಗಳಲ್ಲಿ 94 ರನ್‌ಗಳ ಅಗತ್ಯವಿದೆ. ನಿತೀಶ್ ರಾಣಾ 67 ರನ್ ಹಾಗೂ ರಿಂಕು ಸಿಂಗ್ 13 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಂತು. 14 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 135/5
ರಾಣಾ ಅರ್ಧಶತಕ
12ನೇ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಕೋಲ್ಕತ್ತಾ ನಾಯಕ ನಿತೀಶ್ ರಾಣಾ ಅರ್ಧಶತಕ ಪೂರೈಸಿದರು. ಅಲ್ಲದೆ 13ನೇ ಓವರ್‌ನಲ್ಲಿ ರಾಣಾ ಮತ್ತೊಂದು ಸಿಕ್ಸರ್ ಕೂಡ ಬಾರಿಸಿದರು.
ರಸೆಲ್ ಔಟ್
ಸತತ ವೈಫಲ್ಯಗಳಿಂದ ಬಳಲುತ್ತಿರುವ ರಸೆಲ್ ಇಂದಿನ ಪಂದ್ಯದಲ್ಲೂ 3 ರನ್ ಗಳಿಸಿ ಔಟಾದರು.
10 ಓವರ್ ಅಂತ್ಯ
ಕೋಲ್ಕತ್ತಾ ಪರ ನಿತೀಶ್ ರಾಣಾ 42 ರನ್ ಹಾಗೂ ರಸೆಲ್ 3 ರನ್ ವಿರುದ್ಧ ಆಡುತ್ತಿದ್ದಾರೆ. ಈ ಓವರ್‌ನ ಅಂತಿಮ ಎಸೆತದಲ್ಲಿ ಸಿಕ್ಸರ್ ಬಂತು. 10 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 96/4
ನಾಲ್ಕನೇ ವಿಕೆಟ್ ಪತನ
ಕೋಲ್ಕತ್ತಾದ ನಾಲ್ಕನೇ ವಿಕೆಟ್ ಪತನವಾಗಿದೆ. ಮಾರ್ಕಂಡೆ ಅವರ ಓವರ್‌ನಲ್ಲಿ ಜಗದೀಶನ್ 36 ರನ್ ಗಳಿಸಿ ಕ್ಯಾಚಿತ್ತು ಔಟಾದರು. 8.2 ಓವರ್‌ಗಳಲ್ಲಿ ಕೋಲ್ಕತ್ತಾ ಸ್ಕೋರ್ 82/4
8 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 82/3
ನಿತೀಶ್ ರಾಣಾ 34 ರನ್ ಮತ್ತು ಜಗದೀಶನ್ 36 ರನ್ ವಿರುದ್ಧ ಆಡುತ್ತಿದ್ದಾರೆ. 8 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 82/3
ಮಲಿಕ್ ದುಬಾರಿ
ಉಮ್ರಾನ್ ಮಲಿಕ್ ಎಸೆದ 6ನೇ ಓವರ್‌ನಲ್ಲಿ ರಾಣಾ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಈ ಓವರ್‌ನಲ್ಲಿ ರಾಣಾ 4 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು. ನಿತೀಶ್ ರಾಣಾ 30 ರನ್ ಮತ್ತು ಜಗದೀಶನ್ 20 ರನ್ ವಿರುದ್ಧ ಆಡುತ್ತಿದ್ದಾರೆ.
ಒಂದೇ ಓವರ್‌ನಲ್ಲಿ 2 ವಿಕೆಟ್
ಕೋಲ್ಕತ್ತಾ ನೈಟ್ ರೈಡರ್ಸ್‌ನ ಎರಡನೇ ಹಾಗೂ 3ನೇ ವಿಕೆಟ್ ಪತನಗೊಂಡಿತು, ಯಾನ್ಸನ್ ಅವರ ಓವರ್‌ನಲ್ಲಿ ವೆಂಕಟೇಶ್ ಅಯ್ಯರ್ 10 ರನ್ ಗಳಿಸಿ ಔಟಾದರು. ಅದೇ ಓವರ್‌ನಲ್ಲಿ ಸುನಿಲ್ ನರೈನ್ ಕೂಡ 0 ರನ್ ಗಳಿಸಿ ಔಟಾದರು. 3.3 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 20/3
ಜಗದೀಸನ್ ಬೌಂಡರಿ
3ನೇ ಓವರ್‌ನಲ್ಲಿ ಜಗದೀಸನ್ 1 ಬೌಂಡರಿ ಬಾರಿಸಿದರೆ, ವೆಂಕಟೇಶ್ ಕೂಡ 1 ಬೌಂಡರಿ ಹೊಡೆದರು. ಹೈದರಾಬಾದ್ ಪರ ವೆಂಕಟೇಶ್ ಅಯ್ಯರ್ 6 ರನ್ ಹಾಗೂ ಜಗದೀಸನ್ 8 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್ 16/1
ಕೋಲ್ಕತ್ತಾದ ಮೊದಲ ವಿಕೆಟ್ ಪತನ
ಕೋಲ್ಕತ್ತಾದ ಮೊದಲ ವಿಕೆಟ್ ಪತನವಾಗಿದ್ದು, ಭುವನೇಶ್ವರ್ ಕುಮಾರ್ ಅವರ ಓವರ್‌ನಲ್ಲಿ ರಹಮಾನುಲ್ಲಾ ಗುರ್ಬಾಜ್ 0 ರನ್‌ಗೆ ಕ್ಯಾಚ್ ನೀಡಿ ಔಟಾದರು.
ಕೆಕೆಆರ್ಗೆ 229 ರನ್‌ಗಳ ಗುರಿ
ಮೊದಲ ಇನ್ನಿಂಗ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 100 ರನ್ ಗಳಿಸಿದರು. ಮಯಾಂಕ್ ಅಗರ್ವಾಲ್ 9 ರನ್, ರಾಹುಲ್ ತ್ರಿಪಾಠಿ 9 ರನ್, ನಾಯಕ ಅಡೆನ್ ಮಾರ್ಕ್ರಾಮ್ 50 ರನ್, ಅಭಿಷೇಕ್ ಶರ್ಮಾ 32 ರನ್ ಮತ್ತು ಹೆನ್ರಿಚ್ 16 ರನ್ ಗಳಿಸಿದರು. ಇವರ ಆಟದಿಂದಾಗಿ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 228 ರನ್ ಕಲೆಹಾಕಿದೆ.
ಹ್ಯಾರಿ ಬ್ರೂಕ್ ಶತಕ
ಐಪಿಎಲ್ 2023 ರಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಹ್ಯಾರಿ ಬ್ರೂಕ್ ಕೇವಲ 55 ಎಸೆತಗಳಲ್ಲಿ ತಮ್ಮ ಮೊದಲ ಹಾಗೂ ಈ ಐಪಿಎಲ್ನ ಮೊದಲ ಶತಕವನ್ನು ಬಾರಿಸಿದರು.
ನಾಲ್ಕನೇ ವಿಕೆಟ್ ಪತನ
ಹೈದರಾಬಾದ್ ತಂಡದ ನಾಲ್ಕನೇ ವಿಕೆಟ್ ಪತನಗೊಂಡಿದ್ದು, ಆಂಡ್ರೆ ರಸೆಲ್ ಓವರ್‌ನ ಮೊದಲ ಎಸೆತದಲ್ಲಿ ಅಭಿಷೇಕ್ ಶರ್ಮಾ 32 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಹೈದರಾಬಾದ್ ಸ್ಕೋರ್ 18.1 ಓವರ್‌ಗಳಲ್ಲಿ 201/4
ದ್ವಿಶತಕ ಪೂರ್ಣ
ಹೈದರಾಬಾದ್ ಪರ ಹ್ಯಾರಿ ಬ್ರೂಕ್ 90 ರನ್ ಹಾಗೂ ನಾಯಕ ಅಭಿಷೇಕ್ ಶರ್ಮಾ 32 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಂತು. 18 ಓವರ್‌ಗಳಲ್ಲಿ ಹೈದರಾಬಾದ್ ಸ್ಕೋರ್ 200/3
ಒಂದು ಸಿಕ್ಸರ್ ಮತ್ತು 4 ಬೌಂಡರಿ
ಲಾಕಿ ಫರ್ಗುಸನ್ ಅವರ 16ನೇ ಓವರ್‌ನಲ್ಲಿ ಇಬ್ಬರು ಬ್ಯಾಟರ್ಗಳು ಸೇರಿ ಒಂದು ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಬಾರಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 77 ರನ್ ಹಾಗೂ ನಾಯಕ ಅಭಿಷೇಕ್ ಶರ್ಮಾ 3 ರನ್ ಗಳಿಸಿ ಆಡುತ್ತಿದ್ದಾರೆ.
14 ಓವರ್‌ಗಳ ನಂತರ 134/3
ಹೈದರಾಬಾದ್ ಪರ ಹ್ಯಾರಿ ಬ್ರೂಕ್ 55 ರನ್ ಹಾಗೂ ನಾಯಕ ಅಭಿಷೇಕ್ ಶರ್ಮಾ 3 ರನ್ ಗಳಿಸಿ ಆಡುತ್ತಿದ್ದಾರೆ. ಹೈದರಾಬಾದ್ ಆಟಗಾರರು ಇಲ್ಲಿಂದ ದೊಡ್ಡ ಗುರಿಯನ್ನು ಸೆಟ್ ಮಾಡುವ ತವಕದಲ್ಲಿದ್ದಾರೆ. 14 ಓವರ್‌ಗಳಲ್ಲಿ ಹೈದರಾಬಾದ್ ಸ್ಕೋರ್ 134/3
ಮೂರನೇ ವಿಕೆಟ್ ಪತನ
ಸನ್‌ರೈಸರ್ಸ್ ಹೈದರಾಬಾದ್‌ನ ಮೂರನೇ ವಿಕೆಟ್ ಪತನಗೊಂಡಿತು, ವರುಣ್ ಚಕ್ರವರ್ತಿ ಓವರ್‌ನಲ್ಲಿ 25 ಎಸೆತಗಳ ಅರ್ಧಶತಕ ಬಾರಿಸಿದ್ದ ಹೈದರಾಬಾದ್ ನಾಯಕ ಅಡೆನ್ ಮರ್ಕ್ರಾಮ್ ಔಟಾದರು. 13 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 130/3
ಮಾರ್ಕ್ರಾಮ್ ಅರ್ಧಶತಕ
12ನೇ ಓವರ್‌ನಲ್ಲಿ ಮಾರ್ಕ್ರಾಮ್ 2 ಅದ್ಭುತ ಸಿಕ್ಸರ್ ಮತ್ತು 1 ಬೌಂಡರಿ ಸಿಡಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 50 ರನ್ ಹಾಗೂ ನಾಯಕ ಮಾರ್ಕ್ರಾಮ್ 40 ರನ್ ಗಳಿಸಿ ಆಡುತ್ತಿದ್ದಾರೆ. 12 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 116/2
ಬ್ರೂಕ್ ಅರ್ಧಶತಕ
11ನೇ ಓವರ್ ಕೇವಲ ಸಿಂಗಲ್ಗಳಿಗೆ ಮೀಸಲಾಗಿತ್ತು. ಈ ಓವರ್‌ನಲ್ಲಿ ಸಿಂಗಲ್ ಕದ್ದ ಬ್ರೂಕ್ ತಮ್ಮ ಅರ್ಧಶತಕ ಪೂರೈಸಿದರು. ಅಲ್ಲದೆ ಇದೇ ಓವರ್‌ನಲ್ಲಿ ಹೈದರಾಬಾದ್ ಶತಕ ಕೂಡ ಪೂರ್ಣಗೊಳಿಸಿತು. 11 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 100/2
10 ಓವರ್ ಮುಕ್ತಾಯ
10ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಮಾರ್ಕ್ರಾಮ್ ಸಿಕ್ಸರ್ ಬಾರಿಸಿದರು. 10 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 94/2
ಕೇವಲ 5 ರನ್
ವರುಣ್ ಚಕ್ರವರ್ತಿ ಎಸೆದ 8ನೇ ಓವರ್‌ನಲ್ಲಿ ಕೇವಲ 5 ರನ್ ಬಂದವು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 43 ರನ್ ಹಾಗೂ ನಾಯಕ ಆಡೆನ್ ಮಾರ್ಕ್ರಾಮ್ 12 ರನ್ ಗಳಿಸಿ ಆಡುತ್ತಿದ್ದಾರೆ.8 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 80/2
ಪವರ್ ಪ್ಲೇ ಅಂತ್ಯ
6ನೇ ಓವರ್‌ನಲ್ಲಿ ಬ್ರೂಕ್ ಅದ್ಭುತ ಬೌಂಡರಿ ಬಾರಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 39 ರನ್ ಹಾಗೂ ನಾಯಕ ಅಡೆನ್ ಮಾರ್ಕ್ರಾಮ್ 1 ರನ್ ಗಳಿಸಿ ಆಡುತ್ತಿದ್ದಾರೆ.ಹೈದರಾಬಾದ್ ಸ್ಕೋರ್ 6 ಓವರ್‌ಗಳಲ್ಲಿ 65/2. ಹೈದರಾಬಾದ್ ತಂಡ ಪವರ್ ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದೆ.
ರಸೆಲ್ಗೆ 2ನೇ ವಿಕೆಟ್
ಆಂಡ್ರೆ ರಸೆಲ್ ತಮ್ಮ ಓವರ್‌ನ ಮೊದಲ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದರೆ, ರಾಹುಲ್ ತ್ರಿಪಾಠಿ ಅವರನ್ನು ಕೊನೆಯ ಎಸೆತದಲ್ಲಿ ಔಟ್ ಮಾಡಿದರು. ಮಯಾಂಕ್ ಅಗರ್ವಾಲ್ ಮತ್ತು ರಾಹುಲ್ ತ್ರಿಪಾಠಿ 9 ರನ್ ಗಳಿಸಿ ಔಟಾದರು.
ಹೈದರಾಬಾದ್‌ನ ಮೊದಲ ವಿಕೆಟ್ ಪತನ
ಹೈದರಾಬಾದ್‌ನ ಮೊದಲ ವಿಕೆಟ್ ಪತನ, ಕೋಲ್ಕತ್ತಾ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರ ಮೊದಲ ಓವರ್‌ನಲ್ಲಿ ಮಯಾಂಕ್ ಅಗರ್ವಾಲ್ ಔಟಾದರು. ಸನ್‌ರೈಸರ್ಸ್ ಹೈದರಾಬಾದ್ ಸ್ಕೋರ್ 4.1 ಓವರ್‌ಗಳಲ್ಲಿ 46/1
ಉಮೇಶ್ಗೆ ಸಿಕ್ಸರ್
ಉಮೇಶ್ ಎಸೆದ 3ನೇ ಓವರ್‌ನಲ್ಲಿ ಬ್ರೂಕ್ 2 ಸಿಕ್ಸರ್ ಬಾರಿಸಿದರು. ಹೈದರಾಬಾದ್ ಪರ ಹ್ಯಾರಿ ಬ್ರೂಕ್ 31 ರನ್ ಹಾಗೂ ಮಯಾಂಕ್ ಅಗರ್ವಾಲ್ 7 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 43/0
ಬ್ರೂಕ್ ಬೌಂಡರಿ
ಹೈದರಾಬಾದ್ ಪರ ಹ್ಯಾರಿ ಬ್ರೂಕ್ 18 ರನ್ ಹಾಗೂ ಮಯಾಂಕ್ ಅಗರ್ವಾಲ್ 5 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ 3 ರನ್ ಮತ್ತು ಒಂದು ಬೌಂಡರಿ ಕೂಡ ಬಂತು. 2 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 28/0
ಹೈದರಾಬಾದ್ ಬ್ಯಾಟಿಂಗ್ ಆರಂಭ
ಹೈದರಾಬಾದ್ ಬ್ಯಾಟಿಂಗ್ ಆರಂಭಿಸಿದ್ದು, ಆರಂಭಿಕರಾಗಿ ಬ್ರೂಕ್ ಹಾಗೂ ಮಯಾಂಕ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಉಮೇಶ್ ಎಸೆದ ಮೊದಲ ಓವರ್‌ನಲ್ಲಿ ಬ್ರೂಕ್ 3 ಬೌಂಡರಿ ಬಾರಿಸಿದರು.
ಸನ್‌ರೈಸರ್ಸ್ ಹೈದರಾಬಾದ್
ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ಮಾರ್ಕೊ ಯಾನ್ಸೆನ್, ಮಯಾಂಕ್ ಮಾರ್ಕಂಡೇ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.
ಕೋಲ್ಕತ್ತಾ ನೈಟ್ ರೈಡರ್ಸ್
ರಹಮಾನುಲ್ಲಾ ಗುರ್ಬಾಜ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫರ್ಗುಸನ್, ಸುಯೇಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಎನ್. ಜಗದೀಶನ್
Match 19. Kolkata Knight Riders XI: R Gurbaz (wk), S Narine, N Jagadeesan, N Rana (c), R Singh, A Russell, L Ferguson, S Thakur, U Yadav, S Sharma, V Chakaravarthy. https://t.co/odv5HZvk4p #TATAIPL #KKRvSRH #IPL2023
— IndianPremierLeague (@IPL) April 14, 2023
ಟಾಸ್ ಗೆದ್ದ ಕೆಕೆಆರ್
ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಹೈದರಾಬಾದ್ ತಂಡದಲ್ಲಿ 1 ಬದಲಾವಣೆ ಮಾಡಲಾಗಿದೆ.
Published On - Apr 14,2023 7:01 PM