KKR vs SRH Prediction Playing XI: ಐಪಿಎಲ್​ನಿಂದ ಕಮಿನ್ಸ್ ಔಟ್! ಉಭಯ ತಂಡಗಳ ಸಂಭಾವ್ಯ ಇಲೆವೆನ್

| Updated By: ಪೃಥ್ವಿಶಂಕರ

Updated on: May 13, 2022 | 6:12 PM

KKR vs SRH Prediction Playing XI: ಈ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ಭಾರಿ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಐಪಿಎಲ್-2022 ರಿಂದ ಹೊರಗುಳಿದಿದ್ದಾರೆ.

KKR vs SRH Prediction Playing XI: ಐಪಿಎಲ್​ನಿಂದ ಕಮಿನ್ಸ್ ಔಟ್! ಉಭಯ ತಂಡಗಳ ಸಂಭಾವ್ಯ ಇಲೆವೆನ್
SRH vs KKR IPL 2022
Follow us on

ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders ) ಹೊಸ ನಾಯಕನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 15 ನೇ ಸೀಸನ್​ಗೆ ಪ್ರವೇಶಿಸಿತು. ಕಳೆದ ವರ್ಷದ ರನ್ನರ್ ಅಪ್, ಈ ಸೀಸನ್​ನಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈಗ ಕೆಕೆಆರ್ ತಂಡ ಐಪಿಎಲ್-2022 ರ ಪ್ಲೇಆಫ್‌ಗೆ ಹೋಗಬೇಕೆಂದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ತಂಡವು ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದ್ದು, ಎರಡರಲ್ಲೂ ಉತ್ತಮ ರನ್​ ರೇಟ್​ನೊಂದಿಗೆ ಗೆಲ್ಲಬೇಕಿದೆ. ಸನ್‌ರೈಸರ್ಸ್ ಹೈದರಾಬಾದ್ ಸ್ಥಾನವು ಕೋಲ್ಕತ್ತಾಕ್ಕಿಂತ ಸ್ವಲ್ಪ ಉತ್ತಮವಾಗಿದ್ದು, ಈ ತಂಡವು ಕೊನೆಯ-4ರ ಘಟ್ಟಕ್ಕೆ ಬರಲು ಸಹ ಹೆಣಗಾಡಬೇಕಾಗಿದೆ. ಈ ತಂಡ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆದಾಗ್ಯೂ, ಕೇನ್ ವಿಲಿಯಮ್ಸನ್ ನಾಯಕತ್ವದ ಈ ತಂಡವು ಇನ್ನೂ ಮೂರು ಪಂದ್ಯಗಳನ್ನು ಹೊಂದಿದ್ದು, ಎಲ್ಲವನ್ನೂ ಗೆಲ್ಲಬೇಕು. ಹೀಗಾಗಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಉಭಯ ತಂಡಗಳು ಯಾವ ರೀತಿಯ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಕೋಲ್ಕತ್ತಾ ಕಳೆದ ಪಂದ್ಯದಲ್ಲಿ ಭಾರಿ ತಂಡದಲ್ಲಿ ಐದು ಬದಲಾವಣೆ ಮಾಡಿಕೊಂಡಿತ್ತು. ಕೋಲ್ಕತ್ತಾ ತನ್ನ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು 52 ರನ್‌ಗಳಿಂದ ಸೋಲಿಸಿ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಹೈದರಾಬಾದ್ ವಿರುದ್ಧವೂ ಈ ಪ್ರದರ್ಶನ ಮುಂದುವರಿಸಲು ಕೋಲ್ಕತ್ತಾ ಪ್ರಯತ್ನಿಸಲಿದೆ. ಮತ್ತೊಂದೆಡೆ, ಸನ್‌ರೈಸರ್ಸ್ ಕಳೆದ ಪಂದ್ಯದಲ್ಲಿ ಬೆಂಗಳೂರು ಎದುರು ಸೋಲನುಭವಿಸಿತು.

ಕೆಕೆಆರ್ ತಂಡದಲ್ಲಿ ಬದಲಾವಣೆ
ಆದರೆ, ಈ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ಭಾರಿ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಐಪಿಎಲ್-2022 ರಿಂದ ಹೊರಗುಳಿದಿದ್ದಾರೆ. ಕಮ್ಮಿನ್ಸ್‌ಗೆ ಸೊಂಟಕ್ಕೆ ಗಾಯವಾಗಿದ್ದು, ಅದಕ್ಕಾಗಿಯೇ ಅವರು ಮನೆಗೆ ಮರಳಿದ್ದಾರೆ. ಅಂದಹಾಗೆ, ಈ ಸೀಸನ್​ನಲ್ಲಿ ಕೇವಲ ಏಳು ಪಂದ್ಯಗಳನ್ನು ಆಡುವ ಅವಕಾಶವನ್ನು ಕೋಲ್ಕತ್ತಾ ಕಮ್ಮಿನ್ಸ್‌ಗೆ ನೀಡಿತ್ತು. ಅವರ ಜಾಗಕ್ಕೆ ಉಮೇಶ್ ಯಾದವ್ ಮರಳಬಹುದು. ಉಮೇಶ್ ಕೂಡ ಗಾಯದ ಸಮಸ್ಯೆಯಿಂದ ಕೆಲವು ಪಂದ್ಯಗಳನ್ನು ಆಡಿರಲಿಲ್ಲ. ಅವರ ಗಾಯದ ಬಗ್ಗೆ ಪರಿಸ್ಥಿತಿಯೂ ಸ್ಪಷ್ಟವಾಗಿಲ್ಲ. ಹೀಗಿರುವಾಗ ಅವರು ಬರದಿದ್ದರೆ ಶಿವಂ ಮಾವಿ, ಹರ್ಷಿತ್ ರಾಣಾಗೆ ಅವಕಾಶ ಸಿಗಬಹುದು. ತಂಡದಲ್ಲಿ ಬೇರೆ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ.

ಇದನ್ನೂ ಓದಿ
Thomas Cup 2022: 43 ವರ್ಷಗಳ ಬಳಿಕ ಥಾಮಸ್ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ! ದೇಶಕ್ಕೆ ಪದಕ ಖಚಿತ
IPL 2022: 44 ಎಸೆತಗಳಲ್ಲಿ 194 ರನ್ ದೋಚಿದ್ದ ಬ್ಯಾಟರ್ ಈ ಐಪಿಎಲ್‌ನಿಂದ ಔಟ್! ತಂಡದ ಕೋಚ್ ಹೇಳುವುದೇನು?
IPL 2022: ಧೋನಿ ನಿರ್ಧಾರವೇ ಅಂತಿಮ; ಮಹೀ ಮನವಿ ನೋಡಿ ನಿರ್ಧಾರ ಬದಲಿಸಿದ ಅಂಪೈರ್! ವಿಡಿಯೋ ವೈರಲ್

ಮಾರ್ಕೊ ಯಾನ್ಸನ್ ವಾಪಸ್!
ಕಳೆದ ಪಂದ್ಯದಲ್ಲಿ ಎಡಗೈ ವೇಗಿ ಮಾರ್ಕೊ ಯಾನ್ಸನ್‌ಗೆ ಕೇನ್ ವಿಲಿಯಮ್ಸನ್ ಅವಕಾಶ ನೀಡಲಿಲ್ಲ. ಈ ಪಂದ್ಯದಲ್ಲಿ ಅವರು ಕಮ್ ಬ್ಯಾಕ್ ಮಾಡಬಹುದು. ಕಳೆದ ಪಂದ್ಯದಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದ ಅಫ್ಘಾನಿಸ್ತಾನದ ಫಜ್ಲಾಕ್ ಫಾರೂಕಿ ಅವರಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಯಾನ್ಸನ್ ಬಂದರೆ ಅವರು ಹೊರಗೆ ಹೋಗಬೇಕಾಗಬಹುದು. ಅದೇ ಸಮಯದಲ್ಲಿ, ಟಿ.ನಟರಾಜನ್ ಗಾಯದ ಬಗ್ಗೆ ಪರಿಸ್ಥಿತಿಯೂ ಸ್ಪಷ್ಟವಾಗಿಲ್ಲ. ಅವರು ಆಡಿದರೆ ಸನ್ ರೈಸರ್ಸ್ ಬಲ ಹೆಚ್ಚಾಗಲಿದೆ.

ಎರಡೂ ತಂಡಗಳ ಸಂಭಾವ್ಯ-11
ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಜಗದೀಶ ಸುಚಿತ್, ಶಶಾಂಕ್ ಸಿಂಗ್, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಫಜಲ್ಹಾಕ್ ಫಾರೂಕಿ.

ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ಆಂಡ್ರೆ ರಸೆಲ್, ರಿಂಕು ಸಿಂಗ್, ಶೆಲ್ಡನ್ ಜಾಕ್ಸನ್, ಉಮೇಶ್ ಯಾದವ್/ಶಿವಂ ಮಾವಿ/ಹರ್ಷಿತ್ ರಾಣಾ, ಸುನಿಲ್ ನರೈನ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.