KL Rahul Athiya Shetty Wedding: ಖಂಡಾಲಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕೆಎಲ್ ರಾಹುಲ್- ಅಥಿಯಾ ಶೆಟ್ಟಿ!

TV9kannada Web Team

TV9kannada Web Team | Edited By: pruthvi Shankar

Updated on: Jan 23, 2023 | 6:36 PM

KL Rahul Athiya Shetty Wedding: ವರ್ಷಗಳಿಂದ ಕೈ ಕೈ ಹಿಡಿದು ಪ್ರಣಯ ಪಕ್ಷಿಗಳಂತೆ ಪ್ರೇಮ ಲೋಕದಲ್ಲಿ ಹಾರಿಡಿದ್ದ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅಂತಿಮವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

KL Rahul Athiya Shetty Wedding: ಖಂಡಾಲಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕೆಎಲ್ ರಾಹುಲ್- ಅಥಿಯಾ ಶೆಟ್ಟಿ!
ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕೆಎಲ್ ರಾಹುಲ್- ಅಥಿಯಾ ಶೆಟ್ಟಿ

KL Rahul Athiya Shetty Wedding: ವರ್ಷಗಳಿಂದ ಕೈ ಕೈ ಹಿಡಿದು ಪ್ರಣಯ ಪಕ್ಷಿಗಳಂತೆ ಪ್ರೇಮ ಲೋಕದಲ್ಲಿ ಹಾರಿಡಿದ್ದ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ (KL Rahul Athiya Shetty) ಅಂತಿಮವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ (Sunil Shetty) ಅವರ ಫಾರ್ಮ್​ ಹೌಸನಲ್ಲಿ ಈ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಸಂಜೆ 4.15 ರ ಸುಮಾರಿಗೆ ಅಥಿಯಾ ಮತ್ತು ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವಿಶೇಷ ಸಂದರ್ಭದಲ್ಲಿ ಉಭಯ ಕುಟುಂಬಗಳ ಅನೇಕ ಆಪ್ತರು ಉಪಸ್ಥಿತರಿದ್ದರು. ಇವರಲ್ಲದೆ ಹಲವು ಸಿನಿಮಾ ತಾರೆಯರು ಹಾಗೂ ಕ್ರಿಕೆಟ್ ಲೋಕದ ಖ್ಯಾತನಾಮರು ಕೂಡ ಈ ಲವ್​ ಬಡ್ರ್ಸ್​ಗಳ ಮದುವೆಗೆ ಸಾಕ್ಷಿಯಾಗಿದ್ದಾರೆ.

ನಟರಾದ ಅಜಯ್ ದೇವಗನ್ ಮತ್ತು ಕ್ರಿಕೆಟಿಗ ಇಶಾಂತ್ ಶರ್ಮಾ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ನಟ ಅಜಯ್ ದೇವಗನ್, ರಾಹುಲ್ ಹಾಗೂ ಅಥಿಯಾ ವೈವಾಹಿಕ ಜೀವನಕ್ಕೆ ಕಾಲಿಡುವ ಈ ಸುವರ್ಣ ಗಳಿಗೆಗೆ ಸಾಕ್ಷಿಯಾಗುವಂತೆ ಮಾಡಿದ ಅಣ್ಣ ಸುನೀಲ್ ಶೆಟ್ಟಿಗೆ ಅಭಿನಂದನೆಗಳು. ದಂಪತಿಗಳ ಮುಂದಿನ ಜೀವನ ಪ್ರಯಾಣ ಅದ್ಭುತವಾಗಿರಲಿ ಎಂದು ಹಾರೈಸಿದ್ದಾರೆ.

ಮುಂಬೈನಲ್ಲಿ ಆರತಕ್ಷತೆ

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಯ ಸಂಗೀತ ಕಾರ್ಯಕ್ರಮ ನಿನ್ನೆ ರಾತ್ರಿ ಅಂದರೆ ಭಾನುವಾರ ನಡೆಯಿತು. ಸಿಕ್ಕಿರುವ ಮಾಹಿತಿ ಪ್ರಕಾರ, ಈ ಜೋಡಿ ತಮ್ಮ ಮದುವೆಯಲ್ಲಿ ನೋ ಫೋನ್ ಪಾಲಿಸಿ ಕೂಡ ಇಟ್ಟುಕೊಂಡಿದ್ದರು. ಹೀಗಾಗಿ ಮದುವೆಗೆ ಬರುವ ಅತಿಥಿಗಳು ಫೋನ್ ಇಲ್ಲದೆಯೇ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ಆರತಕ್ಷತೆ, ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವರದಿಗಳ ಪ್ರಕಾರ ಸುಮಾರು 3000 ಕ್ಕೂ ಹೆಚ್ಚು ಅತಿಥಿಗಳನ್ನು ಸ್ಟಾರ್-ಸ್ಟಡ್ ಪಾರ್ಟಿಗೆ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರ ಜೊತೆಗೆ ರಾಜಕಾರಣಿಗಳು ಮತ್ತು ಉದ್ಯಮಿಗಳು ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada