KL Rahul: ಬರ್ತ್​ಡೇ ದಿನ ಕೇಕ್​ನಲ್ಲಿ ಮಿಂದೆದ್ದ ಕನ್ನಡಿಗ ಕೆಎಲ್​ ರಾಹುಲ್

|

Updated on: Apr 19, 2024 | 8:31 AM

ಕೆಎಲ್ ರಾಹುಲ್ ಮುಖಕ್ಕೆ ಕೇಕ್ ಹಚ್ಚೋಕೆ ಆರಂಭಿಸಿದರು ತಂಡದವರು. ಆ ಬಳಿಕ ರಾಹುಲ್ ಶರ್ಟ್ ತೆಗೆಯುತ್ತಿದ್ದಂತೆ ಅವರ ಮೈಗೆಲ್ಲ ಕೇಕ್ ಮೆತ್ತಲಾಯಿತು. ರಾಹುಲ್​ಗೆ ಈಗ 32 ವರ್ಷ ತುಂಬಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ. ಬರ್ತ್​ಡೇ ಸಂದರ್ಭದ ಫೋಟೋ ವೈರಲ್ ಆಗಿದೆ.

KL Rahul: ಬರ್ತ್​ಡೇ ದಿನ ಕೇಕ್​ನಲ್ಲಿ ಮಿಂದೆದ್ದ ಕನ್ನಡಿಗ ಕೆಎಲ್​ ರಾಹುಲ್
ರಾಹುಲ್
Follow us on

ಟೀಂ ಇಂಡಿಯಾ ಕ್ರಿಕೆಟರ್, ಕನ್ನಡಿಗ ಕೆಎಲ್ ರಾಹುಲ್ ಅವರು ಏಪ್ರಿಲ್ 18ರಂದು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಸದ್ಯ ಅವರು ಐಪಿಎಲ್​ನಲ್ಲಿ ಲಖ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಜೊತೆ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ಕೇಕ್​ನಲ್ಲೇ ಮಿಂದೆದ್ದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಇದಕ್ಕೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಲಖ್ನೋ ಸೂಪರ್ ಜೈಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ರಾಹುಲ್​ಗಾಗಿ ನಾನಾ ರೀತಿಯ ಕೇಕ್​ಗಳನ್ನು ಇಡಲಾಗಿತ್ತು. ಸಿಂಪಲ್ ಆಗಿ ಆಗಮಿಸಿದ ಅವರು ಇತರ ಆಟಗಾರರ ಜೊತೆ ಕೇಕ್ ಕತ್ತರಿಸಿದರು. ಈ ವೇಳೆ ಎಲ್ಲರೂ ರಾಹುಲ್ ಮುಖಕ್ಕೆ ಕೇಕ್ ಹಚ್ಚೋಕೆ ಆರಂಭಿಸಿದರು. ಆ ಬಳಿಕ ರಾಹುಲ್ ಶರ್ಟ್ ತೆಗೆಯುತ್ತಿದ್ದಂತೆ ಅವರ ಮೈಗೆಲ್ಲ ಕೇಕ್ ಮೆತ್ತಲಾಯಿತು. ರಾಹುಲ್​ಗೆ ಈಗ 32 ವರ್ಷ ತುಂಬಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ರಾಹುಲ್ ಅವರು ಬರ್ತ್​ಡೇ ದಿನವೂ ಪ್ರ್ಯಾಕ್ಟಿಸ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇಂದು (ಏಪ್ರಿಲ್ 19) ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರು ಎದುರಿಸಲಿದ್ದಾರೆ. ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಮ್ಯಾಚ್​ಗಳನ್ನು ಚೆನ್ನೈ ಗೆದ್ದಿದೆ. ಲಖನೌ ಆಡಿದ ಆರು ಪಂದ್ಯಗಳಲ್ಲಿ ಮೂರನ್ನು ಮಾತ್ರ ಗೆದ್ದಿದೆ. ಹೀಗಾಗಿ, ಚೆನ್ನೈ ವಿರುದ್ಧ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಅವರಿಗೆ ಇದೆ.

ಇದನ್ನೂ ಓದಿ: ‘ಮದುವೆ ಬಳಿಕ ಕೆಎಲ್​ ರಾಹುಲ್​, ಅಥಿಯಾ ಶೆಟ್ಟಿ ಪೋಸ್​ ಕೊಡ್ತಾರೆ’; ಪಾಪರಾಜಿಗಳಿಗೆ ಸುನೀಲ್​ ಶೆಟ್ಟಿ ಭರವಸೆ

ದೆಹಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಲ್​ಎಸ್​ಜಿ ಸೋಲು ಕಂಡಿದೆ. ಇದು ರಾಹುಲ್ ತಂಡದ ಸ್ಫೂರ್ತಿಯನ್ನು ಕುಗ್ಗಿಸಿದೆ. ಮತ್ತ ಚೈತನ್ಯ ಪಡೆಯಬೇಕು ಎಂದಾದರೆ ಬಲಿಷ್ಠ ಚೆನ್ನೈ ವಿರುದ್ಧ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ರಾಹುಲ್ ಅವರು ತಮ್ಮ ಕನ್ಸಿಸ್ಟನ್ಸಿ ಬಗ್ಗೆ ಗಮನಹರಿಸಬೇಕಿದೆ. ಅವರು ಈ ಬಾರಿ ಆರು ಮ್ಯಾಚ್​ಗಳಲ್ಲಿ 204 ರನ್ ಬಾರಿಸಿದ್ದು, 138 ಸ್ಟ್ರೈಕ್​ರೇಟ್ ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ