IND vs SA: ಕೊಹ್ಲಿಯ ಕೆಟ್ಟ ದಾಖಲೆಯಿಂದ ಕೆಎಲ್ ರಾಹುಲ್ ಪಾರಾಗಲು ಟೀಮ್ ಇಂಡಿಯಾ ಗೆಲ್ಲಲೇಬೇಕು..!
KL Rahul: ಕೆಎಲ್ ರಾಹುಲ್ ಇದುವರೆಗೆ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಮೂರೂ ಮ್ಯಾಚ್ನಲ್ಲೂ ಭಾರತ ತಂಡ ಸೋತಿದೆ.
India vs South Africa T20: ಭಾರತ-ಸೌತ್ ಆಫ್ರಿಕಾ ನಡುವಣ ಟಿ20 ಸರಣಿ ಗುರುವಾರದಿಂದ ಶುರುವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೊದಲ ಮ್ಯಾಚ್ ಟೀಮ್ ಇಂಡಿಯಾ ಪಾಲಿಗೆ ಬಹಳ ಮಹತ್ವದ್ದು. ಏಕೆಂದರೆ ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸತತವಾಗಿ 13 ಟಿ20 ಪಂದ್ಯ ಗೆದ್ದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಲಿದೆ. ಆದರೆ ಪ್ರಸ್ತುತ ಸರಣಿಯಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (Rohit sharma), ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಪ್ರಮುಖ ಆಟಗಾರರು ಆಡುತ್ತಿಲ್ಲ ಎಂಬುದು ವಿಶೇಷ. ಹೀಗಾಗಿ ತಂಡದ ಸಾರಥ್ಯವನ್ನು ಕೆಎಲ್ ರಾಹುಲ್ (KL Rahul) ಅವರಿಗೆ ನೀಡಲಾಗಿದೆ. ಇತ್ತ ಕೆಎಲ್ ರಾಹುಲ್ ಟೀಮ್ ಇಂಡಿಯಾ ನಾಯಕನಾಗಿ ಗೆಲುವಿನ ರುಚಿ ನೋಡಿಲ್ಲ ಎಂಬುದು ವಿಶೇಷ.
ಅಂದರೆ ಕೆಎಲ್ ರಾಹುಲ್ ಇದುವರೆಗೆ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ಮೂರೂ ಮ್ಯಾಚ್ನಲ್ಲೂ ಭಾರತ ತಂಡ ಸೋತಿದೆ. ಈ ಪಂದ್ಯಗಳನ್ನು ಸೋತಿದ್ದು ಸೌತ್ ಆಫ್ರಿಕಾ ವಿರುದ್ದ ಎಂಬುದು ವಿಶೇಷ. ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು 1 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ರಾಹುಲ್ ಸೋಲಿನೊಂದಿಗೆ ನಾಯಕ ಅಭಿಯಾನ ಆರಂಭಿಸಿದ್ದರು.
ಇದೀಗ ಟಿ20 ಕ್ರಿಕೆಟ್ನಲ್ಲಿ ನಾಯಕನಾಗಿ ಪದಾರ್ಪಣೆ ಮಾಡಲು ಸಜ್ಜಾಗಿ ನಿಂತಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ಪಾಲಿನ ಮಹತ್ವದ ಪಂದ್ಯದ ಮೂಲಕ ಎಂಬುದು ವಿಶೇಷ. ಮತ್ತೊಂದೆಡೆ ಕೆಎಲ್ ರಾಹುಲ್ಗೂ ಮೊದಲ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಏಕೆಂದರೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ಸೋಲು ಕಂಡಿರುವ ರಾಹುಲ್ ಟಿ20 ಕ್ರಿಕೆಟ್ ಅನ್ನು ಗೆಲ್ಲುವ ಮೂಲಕ ಜಯದ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ.
ಒಂದು ವೇಳೆ ಸೋತರೆ ಕೆಟ್ಟ ದಾಖಲೆಯೊಂದು ಕೆಎಲ್ ರಾಹುಲ್ ಪಾಲಾಗಲಿದೆ. ಏಕೆಂದರೆ ಟೀಮ್ ಇಂಡಿಯಾ ಪರ ನಾಯಕನಾಗಿ ಆಡಿದ ಮೊದಲ ಪಂದ್ಯಗಳಲ್ಲಿ ಸೋತ ಕೆಟ್ಟ ದಾಖಲೆ ಒಂದು ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಿದ ಮೊದಲ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು. ಈ ಮೂಲಕ ಮೂರು ಸ್ವರೂಪಗಳಲ್ಲಿ ಸೋಲಿನೊಂದಿಗೆ ಕಪ್ತಾನಗಿರಿ ಆರಂಭಿಸಿದ ಕೆಟ್ಟ ದಾಖಲೆಯೊಂದನ್ನು ಕೊಹ್ಲಿ ಬರೆದಿದ್ದರು. ಇದೀಗ ದೆಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೆ ಆ ಕಳಂಕ ಕೆಎಲ್ ರಾಹುಲ್ಗೂ ಸೇರ್ಪಡೆಯಾಗಲಿದೆ.
ಅಲ್ಲದೆ ವಿರಾಟ್ ಕೊಹ್ಲಿ ಬಳಿಕ ಅಂತಹ ಕೆಟ್ಟ ದಾಖಲೆ ಮಾಡಿದ ಭಾರತದ ಎರಡನೇ ನಾಯಕರಾಗಲಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ದದ ಮೊದಲ ಪಂದ್ಯದಲ್ಲೇ ಗೆಲ್ಲುವ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಹೊಸ ವಿಶ್ವ ದಾಖಲೆ ಬರೆಯುವ ತವಕದಲ್ಲಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ್ ಹಾಗೂ ರೊಮೆನಿಯಾ ತಂಡಗಳು ಸತತ 12 ಗೆಲುವು ದಾಖಲಿಸಿ ವಿಶ್ವ ದಾಖಲೆ ಬರೆದಿದೆ. ಈ ದಾಖಲೆಯನ್ನು ಸರಿಗಟ್ಟಿರುವ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದದ ಮೊದಲ ಪಂದ್ಯ ಗೆದ್ದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಜೊತೆಗೆ ನಾಯಕನಾಗಿ ಕೆಎಲ್ ರಾಹುಲ್ ಖಾತೆ ಮೊದಲ ಗೆಲುವು ಕೂಡ ಸೇರ್ಪಡೆಯಾಗಲಿದೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ದದ ಮೊದಲ ಪಂದ್ಯವು ಟೀಮ್ ಇಂಡಿಯಾ ಹಾಗೂ ಕೆಎಲ್ ರಾಹುಲ್ ಪಾಲಿಗೆ ಬಹಳ ಮಹತ್ವದ ಪಂದ್ಯ.
ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ ಹೀಗಿದೆ: ಕೆಎಲ್ ರಾಹುಲ್ (ನಾಯಕ), ರಿಷಬ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಕುಲದೀಪ್ ಯಾದವ್, ಯುಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 pm, Tue, 7 June 22