KL Rahul: ಕಂಬ್ಯಾಕ್ ಯಾವಾಗ? ಈ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

| Updated By: ಝಾಹಿರ್ ಯೂಸುಫ್

Updated on: Jul 31, 2022 | 2:52 PM

KL Rahul: ಟಿ20 ವಿಶ್ವಕಪ್‌ಗೆ ಇನ್ನು 3 ತಿಂಗಳು ಮಾತ್ರವಿದೆ. ಹೀಗಾಗಿಯೇ ಕೆಎಲ್ ರಾಹುಲ್ ಅವರ ಫಿಟ್‌ನೆಸ್ ಕೂಡ ಮುಖ್ಯವಾಗಿದೆ. ಅದರಲ್ಲೂ ಏಷ್ಯಾಕಪ್​ನಲ್ಲಿ ಆಡುವ ಬಳಗವನ್ನೇ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

KL Rahul: ಕಂಬ್ಯಾಕ್ ಯಾವಾಗ? ಈ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
KL Rahul
Follow us on

ಐಪಿಎಲ್ 2022ರಲ್ಲಿ ಕೆಎಲ್ ರಾಹುಲ್ (KL Rahul) ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಫಾರ್ಮ್​ ಅನ್ನು ಟೀಮ್ ಇಂಡಿಯಾ (Team India) ಪರ ಬಳಸಿಕೊಳ್ಳಲು ಕೆಎಲ್​ಆರ್​ಗೆ ಸಾಧ್ಯವಾಗಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್​​ ಬಳಿಕ ಕೆಎಲ್ ರಾಹುಲ್ ನಿರಂತರವಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇದೀಗ ಜಿಂಬಾಬ್ವೆ ವಿರುದ್ದದ ಸರಣಿಯಲ್ಲೂ ಆಡುತ್ತಿಲ್ಲ. ಇದರ ಬೆನ್ನಲ್ಲೇ ಕೆಎಲ್​ಆರ್​ ಫಿಟ್​ನೆಸ್​ ಬಗ್ಗೆ ಪ್ರಶ್ನೆಗಳೆದ್ದಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಖುದ್ದು ಕೆಎಲ್ ರಾಹುಲ್ ಅವರೇ ಉತ್ತರ ನೀಡಿದ್ದಾರೆ.

ಜಿಂಬಾಬ್ವೆ ಸರಣಿಗೆ ತಂಡದ ಘೋಷಣೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಿಟ್​ನೆಸ್​ ಬಗ್ಗೆ ಮಾಹಿತಿ ನೀಡಿರುವ ಕೆಎಲ್ ರಾಹುಲ್, ನನ್ನ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಜೂನ್‌ನಲ್ಲಿ ನನ್ನ ಗಾಯದ ಯಶಸ್ವಿ ಶಸ್ತ್ರಚಿಕಿತ್ಸೆಯಾಯಿತು. ಅದರ ನಂತರ ನಾನು ತರಬೇತಿಯನ್ನು ಪ್ರಾರಂಭಿಸಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಾನು ತಂಡವನ್ನು ಸೇರಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದೆ. ದುರದೃಷ್ಟವಶಾತ್ ನಾನು ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದಾಗಲೇ, ಕೋವಿಡ್ -19 ಸೋಂಕಿಗೆ ಒಳಗಾಗಬೇಕಾಯಿತು. ಹೀಗಾಗಿಯೇ ವೆಸ್ಟ್​ ಇಂಡೀಸ್ ಸರಣಿಯಿಂದ ಹೊರಗುಳಿಯಬೇಕಾಯಿತು.

ಆದಷ್ಟು ಬೇಗ ಚೇತರಿಸಿಕೊಳ್ಳುವುದೇ ನನ್ನ ಗುರಿ. ಅಲ್ಲದೆ ಬೇಗನೇ ತಂಡದ ಆಯ್ಕೆಗೆ ಲಭ್ಯವಾಗಬೇಕು ಎಂದು ಬಯಸುತ್ತೇನೆ. ಏಕೆಂದರೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವುದನ್ನು ನಾನು ಗೌರವವೆಂದು ಪರಿಗಣಿಸುತ್ತೇನೆ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ. ಈ ಮೂಲಕ ಆದಷ್ಟು ಬೇಗನೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ಬಯಸುವುದಾಗಿ ಕೆಎಲ್​ಆರ್​ ತಮ್ಮ ಫಿಟ್​ನೆಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಟಿ20 ವಿಶ್ವಕಪ್‌ಗೆ ಇನ್ನು 3 ತಿಂಗಳು ಮಾತ್ರವಿದೆ. ಹೀಗಾಗಿಯೇ ಕೆಎಲ್ ರಾಹುಲ್ ಅವರ ಫಿಟ್‌ನೆಸ್ ಕೂಡ ಮುಖ್ಯವಾಗಿದೆ. ಅದರಲ್ಲೂ ಏಷ್ಯಾಕಪ್​ನಲ್ಲಿ ಆಡುವ ಬಳಗವನ್ನೇ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಹೀಗಾಗಿ ಆಗಸ್ಟ್ 27 ರಂದು ಶುರುವಾಗಲಿರುವ ಏಷ್ಯಾಕಪ್​ ವೇಳೆ ತಂಡವನ್ನು ಕೂಡಿಕೊಳ್ಳಲು ಕೆಎಲ್ ರಾಹುಲ್ ಬಯಸಿದ್ದಾರೆ.

ಭರ್ಜರಿ ಫಾರ್ಮ್​ನಲ್ಲಿದ್ದ ಕೆಎಲ್ಆರ್​:
ಕೆಎಲ್ ರಾಹುಲ್ ಐಪಿಎಲ್ 2022 ರಲ್ಲಿ 2 ಶತಕಗಳ ನೆರವಿನಿಂದ 600 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆದರೆ 2022ರಲ್ಲಿ ಟೀಮ್ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವನ್ನು ಆಡಲು ಸಾಧ್ಯವಾಗಿಲ್ಲ. ಅವರ ಅಲಭ್ಯತೆಯ ನಡುವೆ ಟೀಮ್ ಮ್ಯಾನೇಜ್ಮೆಂಟ್ ಇದುವರೆಗೆ 7 ಆಟಗಾರರನ್ನು ಆರಂಭಿಕರಾಗಿ ಪ್ರಯತ್ನಿಸಿದೆ. ಹೀಗಾಗಿಯೇ ಕೆಎಲ್ ರಾಹುಲ್ ಅವರ ಕಂಬ್ಯಾಕ್ ಅನ್ನು ಬಿಸಿಸಿಐ ಕೂಡ ಎದುರು ನೋಡುತ್ತಿದೆ.

ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಗೆ ಟೀಮ್ ಇಂಡಿಯಾ ಹೀಗಿದೆ:
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್.