ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಸಿದ್ದತೆಗಳು ಶುರುವಾದ ಬೆನ್ನಲ್ಲೇ, ಇದೀಗ ಕೆಎಲ್ ರಾಹುಲ್ (KL Rahul) ಯಾವ ತಂಡದ ಪರ ಆಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಪಂಜಾಬ್ ತಂಡದಿಂದ ರಾಹುಲ್ ಹೊರಬರುವುದು ಬಹುತೇಕ ಖಚಿತ. ಇತ್ತ ರಾಹುಲ್ ಹೊಸ ಫ್ರಾಂಚೈಸಿ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತಿದೆ. ಆದರೀಗ ರಾಹುಲ್ ಅವರ ನಡೆಯೊಂದು ಇದೀಗ ಅವರು ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟುಹಾಕಿದೆ.
ಹೌದು, ಕೆಎಲ್ ರಾಹುಲ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಖಾತೆಯನ್ನು ಫಾಲೋ ಮಾಡಲಾರಂಭಿಸಿದ್ದಾರೆ. ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ಐಪಿಎಲ್ ಫ್ರಾಂಚೈಸಿ ಖಾತೆಯನ್ನೂ ಫಾಲೋ ಮಾಡುತ್ತಿರಲಿಲ್ಲ. ಆದರೆ ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖಾತೆಯನ್ನು ಫಾಲೋ ಮಾಡಲಾರಂಭಿಸಿದ್ದಾರೆ. ರಾಹುಲ್ ಅವರ ಈ ನಡೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೀಗಾಗಿಯೇ ಮುಂದಿನ ಸೀಸನ್ನಲ್ಲಿ ರಾಹುಲ್ ಮುಂಬೈ ಇಂಡಿಯನ್ಸ್ ಪಾಲಾಗಲಿದೆಯಾ ಎಂಬ ಅನುಮಾನವೊಂದು ಹುಟ್ಟುಹಾಕಿದೆ. ಏಕೆಂದರೆ ಮುಂದಿನ ಸೀಸನ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಬಹುತೇಕ ತಂಡಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಇತ್ತ ಸ್ಟಾರ್ ಆಟಗಾರರನ್ನು ಖರೀದಿಸಿ ಬಲಿಷ್ಠ ತಂಡವನ್ನು ರೂಪಿಸಲು ಮುಂಬೈ ಇಂಡಿಯನ್ಸ್ ಈಗಲೇ ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ. ಇದರ ಭಾಗವೇ ರಾಹುಲ್ ಮುಂಬೈ ಇಂಡಿಯನ್ಸ್ ತಂಡ ಅಧಿಕೃತ ಖಾತೆಯನ್ನು ಫಾಲೋ ಮಾಡಲಾರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಕೈ ಬಿಡಲಿದೆ ಎಂಬ ಸುದ್ದಿ ಕೂಡ ಇದೆ. ಅತ್ತ ಪಾಂಡ್ಯಗೆ ಮುಂಬೈ ನೀಡುತ್ತಿರುವ ಮೊತ್ತ 11 ಕೋಟಿ ರೂ. ಇತ್ತ ಕಡೆ ಪಂಜಾಬ್ ಕಿಂಗ್ಸ್ ಫ್ರಾಂಚೈಸ್ನಿಂದ ಕೆಎಲ್ ರಾಹುಲ್ ಪಡೆಯುತ್ತಿರುವುದು ಕೂಡ 11 ಕೋಟಿ ರೂ. ಹೀಗಾಗಿ ಅದೇ ಮೊತ್ತವನ್ನು ರಾಹುಲ್ ಮೇಲೆ ಬಿಡ್ ಮಾಡಿ, ತಮ್ಮ ತೆಕ್ಕೆಗೆ ಮುಂಬೈ ಇಂಡಿಯನ್ಸ್ ತೆಗೆದುಕೊಳ್ಳಲಿದೆಯಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕೆಎಲ್ ರಾಹುಲ್ ಪಂಜಾಬ್ ತಂಡದಿಂದ ಹೊರಬಂದರೆ, ಅವರ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬರುವುದಂತು ಖಚಿತ. ಹೀಗಾಗಿಯೇ ರಾಹುಲ್ ಮುಂದಿನ ಸೀಸನ್ನಲ್ಲಿ ರಾಹುಲ್ ಯಾವ ತಂಡದ ಪರ ಆಡಲಿದ್ದಾರೆ ಎಂಬ ಚರ್ಚೆಗಳು ಈಗಲೇ ಶುರುವಾಗಿದೆ.
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
ಇದನ್ನೂ ಓದಿ: T20 World Cup 2021: ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ಖುಷಿಯಾಯ್ತು ಎಂದ ಪಾಕ್ ಕ್ರಿಕೆಟಿಗ
(KL Rahul Giving Hints That He Will Be Joining Mumbai Indians?)