AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಹುಲ್ ವೃತ್ತಿಬದುಕಿಗೆ ಗಂಭೀರ್ ಕೊಳ್ಳಿ ಇಡುತ್ತಿದ್ದಾರೆ’; ಮಾಜಿ ಆಟಗಾರನ ಗಂಭೀರ ಆರೋಪ

KL Rahul's Poor Form: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದಿದ್ದರೂ, ಕೆಎಲ್ ರಾಹುಲ್ ಅವರ ಕಳಪೆ ಪ್ರದರ್ಶನ ಚರ್ಚೆಗೆ ಕಾರಣವಾಗಿದೆ. ಮಾಜಿ ಆಟಗಾರ ಕೆ. ಶ್ರೀಕಾಂತ್, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರವನ್ನು ಟೀಕಿಸಿ, ರಾಹುಲ್‌ರ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯಿಂದ ಅವರ ಫಾರ್ಮ್‌ಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.

‘ರಾಹುಲ್ ವೃತ್ತಿಬದುಕಿಗೆ ಗಂಭೀರ್ ಕೊಳ್ಳಿ ಇಡುತ್ತಿದ್ದಾರೆ’; ಮಾಜಿ ಆಟಗಾರನ ಗಂಭೀರ ಆರೋಪ
ಗೌತಮ್ ಗಂಭೀರ್, ಕೆಎಲ್ ರಾಹುಲ್
ಪೃಥ್ವಿಶಂಕರ
|

Updated on: Feb 10, 2025 | 5:29 PM

Share

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಚಾಂಪಿಯನ್ಸ್ ಟ್ರೋಫಿ ಸನಿಹದಲ್ಲಿರುವಾಗ ತಂಡದ ಈ ಅಮೋಘ ಪ್ರದರ್ಶನ ಅಭಿಮಾನಿಗಳಿಗೆ ಸಂತಸ ತಂದಿದೆ. ಇದರ ಜೊತೆಗೆ ಇಡೀ ತಂಡ ಸಾಂಘಿಕ ಪ್ರದರ್ಶನ ನೀಡುತ್ತಿರುವುದು ಅದರಲ್ಲೂ ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿ ಕಾಣುತ್ತಿರುವುದು ಬಿಸಿಸಿಐ ನಿರಾಳವಾಗಿರುವಂತೆ ಮಾಡಿದೆ. ಆದಾಗ್ಯೂ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಮಾತ್ರ ಕಳಪೆ ಫಾರ್ಮ್​ನಿಂದ ಇದುವರೆಗೂ ಹೊರಬಂದಿಲ್ಲ. ಅದರಲ್ಲೂ ಕೆಎಲ್ ರಾಹುಲ್ ಆಡಿರುವ ಎರಡೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವುದು ಅಭಿಮಾನಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದೆ. ಆದರೆ ಇದರ ನಡುವೆ ರಾಹುಲ್ ಅವರ ಬ್ಯಾಟಿಂಗ್‌ ಕ್ರಮಾಂಕವನ್ನು ಪದೇಪದೇ ಬದಲಿಸುತ್ತಿರುವುದು ತಂಡದ ಮಾಜಿ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ವಾಸ್ತವವಾಗಿ ಇಂಗ್ಲೆಂಡ್‌ ವಿರುದ್ಧ ಪ್ರಸ್ತುತ ನಡೆದಿರುವ ಎರಡೂ ಪಂದ್ಯಗಳಲ್ಲೂ ರಾಹುಲ್​ಗೆ ರನ್​ಗಳಿಸಲು ಸಾಧ್ಯವಾಗಿಲ್ಲ. ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಂತೆ, ಕಟಕ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಕೆ.ಎಲ್. ರಾಹುಲ್ ವಿಫಲರಾಗಿದ್ದಾರೆ. ಕಟಕ್‌ನಲ್ಲಿ 14 ಎಸೆತಗಳನ್ನು ಎದುರಿಸಿದ ರಾಹುಲ್ 10 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು, ರಾಹುಲ್ ನಾಗ್ಪುರದಲ್ಲಿ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಂದರೆ ಮೊದಲ 2 ಏಕದಿನ ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 12 ರನ್ ಮಾತ್ರ. ಹೀಗಾಗಿ ರಾಹುಲ್​ಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಬಗ್ಗೆ ಅನುಮಾನ ಮೂಡಿದೆ. ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಎಲ್ಲಾ ತಪ್ಪಿಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನೇ ಹೊಣೆ ಮಾಡಿದ್ದಾರೆ. ಗಂಭೀರ್ ಅವರ ತಂತ್ರದಿಂದಾಗಿ ಕೆಎಲ್ ರಾಹುಲ್ ವಿಫಲರಾಗುತ್ತಿದ್ದು, ಅವರ ವೃತ್ತಿಜೀವನ ಅಪಾಯದಲ್ಲಿದೆ ಎಂದು ಶ್ರೀಕಾಂತ್ ಆರೋಪಿಸಿದ್ದಾರೆ.

ರಾಹುಲ್ ವೈಫಲ್ಯಕ್ಕೆ ಗಂಭೀರ್ ಕಾರಣನಾ?

ಎರಡೂ ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸಿರುವುದು ಶ್ರೀಕಾಂತ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಶ್ರೀಕಾಂತ್, ‘ಕೆಎಲ್ ರಾಹುಲ್ ಬಗ್ಗೆ ನನಗೆ ತುಂಬಾ ಬೇಸರವಾಗುತ್ತಿದೆ. ಅಕ್ಷರ್ ಚೆನ್ನಾಗಿ ಆಡುತ್ತಿರುವುದು ಒಳ್ಳೇಯ ವಿಚಾರ ಆದರೆ ರಾಹುಲ್ ವಿಚಾರದಲ್ಲಿ ಗಂಭೀರ್ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಐದನೇ ಕ್ರಮಾಂಕದಲ್ಲಿ ರಾಹುಲ್ ಅವರ ದಾಖಲೆಯನ್ನು ನೋಡಿ, ಈ ಕ್ರಮಾಂಕದಲ್ಲಿ ಅವರ ಅಂಕಿಅಂಶಗಳು ಅನೇಕ ಆಟಗಾರರಿಗಿಂತ ಉತ್ತಮವಾಗಿವೆ. ಆದರೆ ತಂಡದ ಆಡಳಿತ ಮಂಡಳಿ ರಾಹುಲ್ ವಿಚಾರದಲ್ಲಿ ಏನು ಮಾಡುತ್ತಿದೆ ಎಂದು ನನಗೆ ತಿಳಿದಿಲ್ಲ. ಅವರಿಗೆ ಐದನೇ ಸ್ಥಾನದಲ್ಲಿ ಅವಕಾಶ ನೀಡುವ ಬದಲು, ಆರನೇ ಸ್ಥಾನದಲ್ಲಿ ಆಡಿಸಲಾಗುತ್ತಿದೆ

ಗಂಭೀರ್ ವಿರುದ್ಧ ನೇರ ಆರೋಪ

ಇಲ್ಲಿ ಗೌತಮ್ ಗಂಭೀರ್ ಅವರ ಹೆಸರನ್ನು ಉಲ್ಲೇಖಿಸಿರುವ ಶ್ರೀಕಾಂತ್, ಗಂಭೀರ್ ಮಾಡುತ್ತಿರುವುದು ಸಂಪೂರ್ಣವಾಗಿ ಸರಿಯಲ್ಲ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೆ ಅದು ತಂಡಕ್ಕೆ ನಷ್ಟ. ಟಾಪ್ 4 ರಲ್ಲಿ ನಿಮಗೆ ಎಡ-ಬಲ ಸಂಯೋಜನೆ ಬೇಕು. ಆದರೆ ಅದರ ನಂತರ ಈ ಎಡಬಲ ಸಂಯೋಜನೆಯ ತಂತ್ರ ತಪ್ಪಾಗಿದೆ. ಇದೇ ತಂತ್ರವನ್ನೇ ನೀವು ಮುಂದುವರೆಸುವುದಾದರೆ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಟ್ಟು ರಿಷಭ್ ಪಂತ್‌ಗೆ ಅವಕಾಶ ನೀಡಬೇಕು. ಹೀಗಾಗಿ ರಾಹುಲ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ