KL Rahul: ಧವನ್ ಕೈಯಿಂದ ಆರೆಂಜ್ ಕ್ಯಾಪ್ ಕಿತ್ತ ಕೆ. ಎಲ್ ರಾಹುಲ್: ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

TV9 Digital Desk

| Edited By: Vinay Bhat

Updated on: Oct 02, 2021 | 8:56 AM

KKR vs PBKS, IPL 2021: ಐಪಿಎಲ್ 2021 ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟಿದ್ದ ಆಟಗಾರರ ಸಾಲಿನಲ್ಲಿ ಕೆ. ಎಲ್ ರಾಹುಲ್ ಇದ್ದಾರೆ. ಇವರು ನಿನ್ನೆಯ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ 489 ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿದ್ದಾರೆ.

KL Rahul: ಧವನ್ ಕೈಯಿಂದ ಆರೆಂಜ್ ಕ್ಯಾಪ್ ಕಿತ್ತ ಕೆ. ಎಲ್ ರಾಹುಲ್: ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
KL Rahul

Follow us on

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣ ಅಂತಿಮ ಹಂತಕ್ಕೆ ತಲುಪುತ್ತಿದ್ದು ಸಾಷ್ಟು ರೋಚಕತೆ ಸೃಷ್ಟಿಸುತ್ತಿದೆ. ಈಗಾಗಲೇ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಇದರ ನಡುವೆ ಶುಕ್ರವಾರ ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ (KKR vs PBKS) ನಡುವಣ ಪಂದ್ಯದಲ್ಲಿ ರಾಹುಲ್ ಪಡೆ ಭರ್ಜರಿ ಜಯ ಸಾಧಿಸಿತು. ಕೆಕೆಆರ್ ಸೋತು ಪ್ಲೇ ಆಫ್ ರೇಸ್​ನಿಂದ ಹೊರಬೀಳುವ ಭೀತಿಯಲ್ಲಿದೆ. ನಿನ್ನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ (KL Rahul) ಆರೆಂಜ್ ಕ್ಯಾಪ್ (Oragne Cap) ಕಿತ್ತುಕೊಂಡಿದ್ದಾರೆ.

ಐಪಿಎಲ್ 2021 ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟಿದ್ದ ಆಟಗಾರರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ನಿನ್ನೆಯ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೆ. ಎಲ್ ರಾಹುಲ್ ಭರ್ಜರಿ ಅರ್ಧಶತಕ ಸಿಡಿಸಿ 489 ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿದ್ದಾರೆ. ಈ ಆವೃತ್ತಿಯಲ್ಲಿ ಇವರು 5 ಅರ್ಧಶತಕ ಬಾರಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದು ಇವರು 11 ಪಂದ್ಯಗಳಲ್ಲಿ 454 ರನ್ ಗಳಿಸಿದ್ದಾರೆ. ಧವನ್ ಹಿಂಭಾಗದಲ್ಲೇ ಸಂಜು ಸ್ಯಾಮ್ಸನ್ ಇದ್ದು ಇವರು 11 ಪಂದ್ಯಗಳಲ್ಲಿ 452 ರನ್ ಸಿಡಿಸಿದ್ದಾರೆ. ಇವರಿಬ್ಬರ ನಡುವೆ ಕೇವಲ 2 ರನ್​ಗಳ ಅಂತರವಿದೆಯಷ್ಟೆ. ಮೂರನೇ ಸ್ಥಾನದಲ್ಲಿ ಸಿಎಸ್​ಕೆ ತಂಡದ ಫಾಫ್ ಡುಪ್ಲೆಸಿಸ್ ಇದ್ದಾರೆ. ಇವರು 11 ಪಂದ್ಯಗಳಲ್ಲಿ 432 ರನ್ ಗಳಿಸಿದ್ದಾರೆ.

ಇನ್ನೂ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ತೊಟ್ಟಿರುವ ಆಟಗಾರ ಆರ್​ಸಿಬಿ ತಂಡದ ಹರ್ಷಲ್ ಪಟೇಲ್. ಇವರು 11 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ. ಈ ಬಾರಿ ಒಂದು ಸಲ 5 ವಿಕೆಟ್ ಮತ್ತು 1 ಬಾರಿ 4 ವಿಕೆಟ್ ಪಡೆದ ಸಾಧನೆ ಜೊತೆಗೆ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ.

ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆವೇಶ್ ಖಾನ್ ಇದ್ದು ಇವರು 11 ಪಂದ್ಯಗಳಲ್ಲಿ 18 ವಿಕೆಟ್ ಕಿತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜಸ್​ಪ್ರೀತ್ ಬುಮ್ರಾ ಅವರಿದ್ದು 11 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ.

IPL 2021, RR vs CSK: ರಾಜಸ್ಥಾನ್ ಸೋತರೆ ಟೂರ್ನಿಯಿಂದ ಔಟ್: ಅಗ್ರಸ್ಥಾನ ಭದ್ರ ಪಡಿಸಲು ಚೆನ್ನೈಗೆ ಬೇಕು ಗೆಲುವು

IPL 2021, MI vs DC: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ಗೆ ಪ್ಲೇ ಆಫ್​ ತಲುಪಿರುವ ಡೆಲ್ಲಿ ಸವಾಲ್

(KL Rahul snatch Orange Cap from Shikhar Dhawan after KKR vs PBKS Match IPL 2021)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada