Chirs Gayle: ಕ್ರಿಸ್ ಗೇಲ್ರನ್ನು ಪಂಜಾಬ್ ತಂಡ ಸರಿಯಾಗಿ ಉಪಯೋಗಿಸಿ ಹೊರ ದಬ್ಬಿದೆ ಎಂದ ಪೀಟರ್ಸನ್
KKR vs PBKS: ಕೆವಿನ್ ಪೀಟರ್ಸನ್ ಅವರು ಕ್ರಿಸ್ ಗೇಲ್ರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸೂಕ್ತ ರೀತಿಯಲ್ಲಿ ನಡೆಸಿಕೊಂಡಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ (Punjab Kings) ತಂಡ ಸ್ಫೋಟಕ ಬ್ಯಾಟ್ಸ್ಮನ್, ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (Chirs Gayle) ದಿಢೀರ್ ಆಗಿ ಇಂಡಿಯನ್ ಪ್ರೀಮಿಯರ್ ಲೀಗ್ 2021 ಟೂರ್ನಿಯಿಂದಲೇ ಹೊರ ನಡೆದಿದ್ದಾರೆ. ಪ್ಲೇ ಆಫ್ ಪ್ರವೇಶಿಸಲು ಕೂದಲೆಳೆ ಅವಕಾಶ ಹೊಂದಿರುವ ಪಂಜಾಬ್ ತಂಡಕ್ಕೆ ಗೇಲ್ ಶಾಕ್ ನೀಡಿದರು. ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಕ್ರಿಸ್ ಗೇಲ್ ಲಭ್ಯ ಇರುವುದಿಲ್ಲ ಎಂದು ಪಂಜಾಬ್ ತನ್ನ ಟ್ವಿಟ್ಟರ್ ಖಾತೆಯಲ್ಲಿ (Punjab Kings Twitter) ತಿಳಿಸಿದ್ದು, ಬಯೋಬಬಲ್ (Bio Bubble) ಆಯಾಸದಿಂದಾಗಿ ಐಪಿಎಲ್ ತೊರೆದಿದ್ದಾರೆ ಎಂದು ಟ್ವೀಟ್ ಮಾಡಿದೆ. ಆದರೆ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ಹಾಲಿ ಕಾಮೆಂಟೇಟರ್ ಕೆವಿನ್ ಪೀಟರ್ಸನ್ (Kevin Pietersen) ಈ ಬೆಳವಣಿಗೆ ಕುರಿತು ವಿಶೇಷವಾಗಿ ಮಾತನಾಡಿದ್ದಾರೆ.
ಹೌದು, ಪೀಟರ್ಸನ್ ಅವರು ಗೇಲ್ರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸೂಕ್ತ ರೀತಿಯಲ್ಲಿ ನಡೆಸಿಕೊಂಡಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸತತವಾಗಿ ಬಯೋಬಬಲ್ ವ್ಯಾಪ್ತಿಯಲ್ಲಿರುವುದರಿಂದ ಮಾನಸಿಕ ಚೈತನ್ಯಕ್ಕಾಗಿ ಗೇಲ್ ಪಂಜಾಬ್ ಕಿಂಗ್ಸ್ ತಂಡ ತೊರೆಯುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಮುಂಬರುವ ಟಿ-20 ವಿಶ್ವಕಪ್‌ಗೆ ಸಜ್ಜಾಗಬೇಕಿದ್ದು, ಹೀಗಾಗಿ ಐಪಿಎಲ್‌ನಿಂದ ಬ್ರೇಕ್ ಪಡೆಯುತ್ತಿರುವೆ ಎಂಬುದು ಗೇಲ್ ಮಾತಾಗಿತ್ತು.
ಆದರೆ, ಇತ್ತ ಪೀಟರ್ಸನ್ ಪಂಜಾಬ್ ಕಿಂಗ್ಸ್ ಕ್ರಿಸ್‌ಗೇಲ್‌ರನ್ನು ಉತ್ತಮವಾಗಿ ಬಳಸಿಕೊಂಡು ನಂತರ ಅವರನ್ನು ಎಸೆದಿದೆ ಎಂಬ ಭಾವನೆ ಕ್ರಿಸ್ ಗೇಲ್‌ಗೆ ಬಂದಿದೆ. ಹೀಗಾಗಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದಿದ್ದಾರೆ. “ಕ್ರಿಸ್ ಗೇಲ್‌ಗೆ ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡಿಲ್ಲ. ಅವರಿಗೆ ಈಗ ತಂಡ ತನ್ನನ್ನು ಚೆನ್ನಾಗಿ ಬಳಸಿಕೊಂಡ ನಂತರ ಎಸೆದ ರೀತಿಯ ಅನುಭವವಾಗಿದೆ. ಅವರ ಹುಟ್ಟುಹಬ್ಬದ ದಿನವೇ ಆವರು ಆಡಿರಲಿಲ್ಲ. ಅವರಿಗೆ ಈಗ 42 ವರ್ಷ, ಅವರಿಗೆ ಇಷ್ಟವಿಲ್ಲದಿದ್ದರೆ ಅವರಿಗೆ ಇಷ್ಟವಾಗುವುದನ್ನು ಮಾಡಲು ಬಿಡಿ” ಎಂದಿದ್ದಾರೆ ಕೆವಿನ್ ಪೀಟರ್ಸನ್.
ಐಪಿಎಲ್ ಆರಂಭಕ್ಕೂ ಮುನ್ನ ಕ್ರಿಸ್ ಗೇಲ್ ಕೆರೀಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಿದ್ದರು. ಈ ಸಿಪಿಎಲ್‌ನ ಬಯೋಬಬಲ್‌ನಿಂದ ಅವರು ನೇರವಾಗಿ ಐಪಿಎಲ್ ಬಬಲ್‌ಗೆ ಸೇರ್ಪಡೆಗಾಗಿದ್ದರು. ಈಗ ಐಪಿಎಲ್ ಅಂತ್ಯವಾಗುತ್ತಿದ್ದಂತೆಯೇ ಟಿ-20 ವಿಶ್ವಕಪ್ ಆರಂಭವಾಗಲಿರುವ ಕಾರಣದಿಂದಾಗಿ ಕೆಲ ಕಾಲ ಬಯೋಬಬಲ್‌ನಿಂದ ಹೊರಗುಳಿದು ಟಿ-20 ವಿಶ್ವಕಪ್‌ಗೆ ಸಜ್ಜಾಗಲು ನಿರ್ಧರಿಸಿದ್ದಾರೆ.
ಕ್ರಿಸ್ ಗೇಲ್ ಸದ್ಯ ಫಾರ್ಮ್ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ. ಐಪಿಎಲ್ 2021ರ ಎರಡನೇ ಚರಣದಲ್ಲಿ ಇವರು 2 ಪಂದ್ಯಗಳನ್ನು ಆಡಿದ್ದು ಕೇವಲ 15 ರನ್ ಗಳಿಸಿದ್ದಾರೆ. ಸಿಪಿಎಲ್ 2021 ಗೆದ್ದ ಬಳಿಕ ಅವರು ನೇರವಾಗಿ ಐಪಿಎಲ್ ಸೇರಿಕೊಂಡಿದ್ದರು. ಗೇಲ್ ಅವರ ನಿರ್ಧಾರವನ್ನು ಗೌರವಿಸುವುದಾಗಿ ಪಂಜಾಬ್ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
KL Rahul: ಧವನ್ ಕೈಯಿಂದ ಆರೆಂಜ್ ಕ್ಯಾಪ್ ಕಿತ್ತ ಕೆ. ಎಲ್ ರಾಹುಲ್: ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
(Chris Gayle Kevin Pietersen feels Punjab Kings mistreatment thats why Chris Gayle leaving the IPL 2021)