AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ತಂಡದ ಆಟದ ಶೈಲಿಯನ್ನೇ ಬದಲಿಸಿದ ವಿರಾಟ್; ಕೊಹ್ಲಿ ನಾಯಕತ್ವಕ್ಕೆ ಫಾಫ್ ಫಿದಾ

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡವನ್ನು ಹಿಂದೆಂದಿಗಿಂತಲೂ ಹೆಚ್ಚು ಕಠಿಣ ಹಾಗೂ ಬಲಿಷ್ಠ ತಂಡವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕರಾದ ಫಾಫ್ ಡು ಪ್ಲೆಸಿಸ್ ಮತ್ತು ಡೇಲ್ ಸ್ಟೇನ್ ಅವರು ಕೊಹ್ಲಿಯ ನಾಯಕತ್ವ, ತಂಡದಲ್ಲಿ ತಂದ ಫಿಟ್ನೆಸ್ ಸಂಸ್ಕೃತಿ ಮತ್ತು ಹೋರಾಟದ ಮನೋಭಾವವನ್ನು ಶ್ಲಾಘಿಸಿದ್ದಾರೆ. 2018ರ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯವನ್ನು ಉಲ್ಲೇಖಿಸಿ, ಭಾರತ ತಂಡದ ಬದಲಾದ ಶೈಲಿಯನ್ನು ಅವರು ವಿವರಿಸಿದ್ದಾರೆ.

ಭಾರತ ತಂಡದ ಆಟದ ಶೈಲಿಯನ್ನೇ ಬದಲಿಸಿದ ವಿರಾಟ್; ಕೊಹ್ಲಿ ನಾಯಕತ್ವಕ್ಕೆ ಫಾಫ್ ಫಿದಾ
ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on: Nov 16, 2026 | 6:24 PM

Share

ಭಾರತ ಕ್ರಿಕೆಟ್ ತಂಡವನ್ನು ಹಿಂದೆಂದಿಗಿಂತಲೂ ಹೆಚ್ಚು ಕಠಿಣ ಹಾಗೂ ಬಲಿಷ್ಠ ತಂಡವನ್ನಾಗಿ ರೂಪಿಸುವಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ 2018ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಂಡಿರುವ ಫಾಫ್, ವಿರಾಟ್ ನಾಯಕತ್ವದ ಗುಣವನ್ನು ಕೊಂಡಾಡಿದ್ದಾರೆ.

ತಂಡದ ಆಟದ ಶೈಲಿಯೇ ಬದಲಾಯಿತು

ಕ್ರಿಕ್‌ಇನ್ಫೋದಲ್ಲಿ ಪ್ರಸಾರವಾದ ‘ಕ್ರಿಕೆಟರ್ಸ್ ಆನ್ ಕ್ರಿಕೆಟರ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಫಾಫ್ ಡು ಪ್ಲೆಸಿಸ್, 2018ರ ಭಾರತ-ದಕ್ಷಿಣ ಆಫ್ರಿಕಾ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ. ‘2018ರ ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನನಗೆ ಇಂದಿಗೂ ನೆನಪಿರುವುದು ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯ. ಆ ಪಂದ್ಯ ಹಾಗೂ ನಂತರದ ಸರಣಿಯಲ್ಲಿ ವಿರಾಟ್ ನಾಯಕತ್ವದಿಂದ ಭಾರತೀಯ ತಂಡ ಹೆಚ್ಚು ಕಠಿಣ ಮತ್ತು ಬಲಿಷ್ಠವಾಗಿರುವುದನ್ನು ಸ್ಪಷ್ಟವಾಗಿ ಗಮನಿಸಿದ್ದೆ’ ಎಂದು ಫಾಫ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಗಾಯವಾದರೂ ದೂರು ನೀಡಲಿಲ್ಲ

ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಕೂಡ 2018ರ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ್ದು, ‘ಜೋಹಾನ್ಸ್‌ಬರ್ಗ್ ಪಂದ್ಯದಲ್ಲಿ ಡೀನ್ ಎಲ್ಗರ್ ಅವರ ತಲೆಗೆ ಚೆಂಡು ಬಡಿದಿತ್ತು. ಭಾರತೀಯ ಬ್ಯಾಟರ್‌ಗಳಿಗೂ ಚೆಂಡು ಕೈಗವಸು ಹಾಗೂ ದೇಹಕ್ಕೆ ಹಲವು ಬಾರಿ ಬಡಿದಿತ್ತು. ಆದರೂ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಅಂಪೈರ್‌ಗಳ ಬಳಿಯೂ ದೂರು ನೀಡಲಿಲ್ಲ. ಏಕೆಂದರೆ ಅವರು ಪಂದ್ಯದಲ್ಲಿ ಮುನ್ನಡೆಯಲ್ಲಿದ್ದರು. ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದ ಅತ್ಯಂತ ಕಠಿಣ ಮನೋಭಾವದ ಭಾರತೀಯ ತಂಡ ಅದಾಗಿತ್ತು.

ನಾವು ಅಂಪೈರ್‌ಗಳಿಗೆ ಪಿಚ್ ಅಪಾಯಕಾರಿಯಾಗಿದೆ ಎಂದು ಹೇಳುತ್ತಿದ್ದೆವು. ಆದರೆ ಭಾರತೀಯ ಆಟಗಾರರು ಯಾವುದೇ ದೂರು ನೀಡುತ್ತಿರಲಿಲ್ಲ. ನಾವು ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದ ಕಾರಣ ಪಿಚ್ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದೆವು. ಆದರೆ ಭಾರತೀಯರು ಚೆಂಡು ಕೈಗವಸುಗಳಿಗೆ ಬಡಿದರೂ ಸುಮ್ಮನಿದ್ದರು’ ಎಂದು ಸ್ಟೇನ್ ವಿವರಿಸಿದ್ದಾರೆ.

ಫಿಟ್ನೆಸ್ ಸಂಸ್ಕೃತಿ ಬೆಳೆಸಿದ ವಿರಾಟ್

ಭಾರತದ ಈ ಗೆಲುವಿನ ಹಿಂದೆ ವಿರಾಟ್ ಕೊಹ್ಲಿಯ ಹೋರಾಟದ ಮನೋಭಾವ ಹಾಗೂ ಅವರ ದೃಢ ನಾಯಕತ್ವ ಪ್ರಮುಖ ಕಾರಣ ಎಂದು ಫಾಫ್ ಹಾಗೂ ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ. ‘ಭಾರತ ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಆರಂಭಿಸಿದವರು ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ನಾನು ಅವರನ್ನು ಮೊದಲ ಬಾರಿ ಭೇಟಿಯಾದಾಗ ಅವರು ದುಂಡುಮುಖದ ಯುವ ಆಟಗಾರನಾಗಿದ್ದರು. ಆದರೆ ಇಂದು ಫಿಟ್ನೆಸ್ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರಿಂದ ಪ್ರೇರಣೆ ಪಡೆದು ತಂಡದ ಇತರ ಆಟಗಾರರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

ರನ್ ಚೇಸ್ ಅಂದರೆ ವಿರಾಟ್ ಕೊಹ್ಲಿಯದ್ದೇ ಸಾಮ್ರಾಜ್ಯ; ಸಚಿನ್ ದಾಖಲೆ ಈಗ ಕಿಂಗ್ ಪಾಲು!

ಕೊಹ್ಲಿ ಟೆಸ್ಟ್ ನಾಯಕತ್ವ

2014ರಿಂದ 2022ರವರೆಗೆ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿದ್ದ ವಿರಾಟ್ ಕೊಹ್ಲಿ, ಒಟ್ಟು 68 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 40 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಕೇವಲ 17 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸೋನಿಯಾ ಗಾಂಧಿಯ ಆತ್ಮಕತೆ ಇಂದು ಅಧಿಕೃತ ಬಿಡುಗಡೆ
ಸೋನಿಯಾ ಗಾಂಧಿಯ ಆತ್ಮಕತೆ ಇಂದು ಅಧಿಕೃತ ಬಿಡುಗಡೆ
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮದ್ಯ ಮಾರಾಟ ನಿಷೇಧ
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮದ್ಯ ಮಾರಾಟ ನಿಷೇಧ
ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ: ತಪ್ಪಿದ ಅನಾಹುತ
ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ: ತಪ್ಪಿದ ಅನಾಹುತ
‘ತಲೆ ಮೇಲೆ ಗಾನವಿ ಕಾಲಿಟ್ಟಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ
‘ತಲೆ ಮೇಲೆ ಗಾನವಿ ಕಾಲಿಟ್ಟಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ
ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್‌:ಸಚಿವ ಬೈರತಿ ಸುರೇಶ್ ಮಹತ್ವದ ಮಾಹಿತಿ
ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್‌:ಸಚಿವ ಬೈರತಿ ಸುರೇಶ್ ಮಹತ್ವದ ಮಾಹಿತಿ
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ