IND vs SA ಪಂದ್ಯದ ಟಿಕೆಟ್ ಅಕ್ರಮ ಮಾರಾಟ: ವ್ಯಕ್ತಿ ಬಂಧನ..!
India vs South Africa: ಏಕದಿನ ವಿಶ್ವಕಪ್ನ 38ನೇ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ನವೆಂಬರ್ 5 ರಂದು ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಇದೇ ದಿನದಂದು ವಿರಾಟ್ ಕೊಹ್ಲಿ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ನವೆಂಬರ್ 5 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಕಿತ್ ಅಗರ್ವಾಲ್ ಎನ್ನುವ ವ್ಯಕ್ತಿಯನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
2500 ರೂ. ಬೆಲೆಯ ಟಿಕೆಟ್ಗಳನ್ನು ಅಂಕಿತ್ 11 ಸಾವಿರ ರೂ.ಗಳಿಗೆ ಬ್ಲ್ಯಾಕ್ನಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೊಲ್ಕತ್ತಾ ಪೊಲೀಸರು ಅಂಕಿತ್ ಅಗರ್ವಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಅಂಕಿತ್ ಅಗರ್ವಾಲ್ ಅವರ ಬಳಿ ಒಟ್ಟು 20 ಟಿಕೆಟ್ಗಳಿದ್ದವು. ಭಾರತ-ಸೌತ್ ಆಫ್ರಿಕಾ ಪಂದ್ಯದ ಟಿಕೆಟ್ಗಳನ್ನು 2500 ರೂ.ಗೆ ಮೊದಲೇ ಖರೀದಿಸಿದ್ದ ಅಂಕಿತ್ ಅದನ್ನು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಇದೀಗ ಈ ಎಲ್ಲಾ ಟಿಕೆಟ್ಗಳನ್ನು ಕೊಲ್ಕತ್ತಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮಹತ್ವದ ಪಂದ್ಯ:
ಏಕದಿನ ವಿಶ್ವಕಪ್ನ 38ನೇ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ನವೆಂಬರ್ 5 ರಂದು ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಇದೇ ದಿನದಂದು ವಿರಾಟ್ ಕೊಹ್ಲಿ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ಬಲಿಷ್ಠ ಸೌತ್ ಆಫ್ರಿಕಾಗೆ ಸೋಲುಣಿಸಿ ಕೊಹ್ಲಿಗೆ ಗೆಲುವಿನ ಗಿಫ್ಟ್ ನೀಡಲು ಟೀಮ್ ಇಂಡಿಯಾ ಯೋಜನೆ ರೂಪಿಸಿಕೊಂಡಿದೆ. ಇನ್ನು ಈ ಪಂದ್ಯಕ್ಕೂ ಮುನ್ನ, ಅಂದರೆ ನವೆಂಬರ್ 2 ರಂದು ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾವನ್ನು ಎದುರಿಸಲಿದೆ.