ಬೆಂಕಿ ಬೌಲಿಂಗ್ನೊಂದಿಗೆ ಹೊಸ ವಿಶ್ವ ದಾಖಲೆ ಬರೆದ ಶಾಹೀನ್ ಅಫ್ರಿದಿ
Shaheen Afridi Records: ಪಾಕಿಸ್ತಾನ್ ಪರ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 100 ವಿಕೆಟ್ ಕಬಳಿಸಿದ ಬೌಲರ್ ಎಂಬ ಹಿರಿಮೆಗೂ ಶಾಹೀನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸಕ್ಲೈನ್ ಮುಷ್ತಾಕ್ ಹೆಸರಿನಲ್ಲಿತ್ತು. ಸಕ್ಲೈನ್ 53 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ 51 ಪಂದ್ಯಗಳ ಮೂಲಕ ನೂರು ವಿಕೆಟ್ ಕಬಳಿಸಿ ಶಾಹೀನ್ ಈ ದಾಖಲೆಯನ್ನು ಮುರಿದಿದ್ದಾರೆ.
Updated on:Oct 31, 2023 | 5:59 PM

ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ನ 31ನೇ ಪಂದ್ಯದ ಮೂಲಕ ಪಾಕಿಸ್ತಾನ್ ವೇಗಿ ಶಾಹೀನ್ ಅಫ್ರಿದಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ್ ವಿರುದ್ಧ ಈ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಮೊದಲ ಓವರ್ನಲ್ಲೇ ವಿಕೆಟ್ ಕಬಳಿಸಿದರು.

ಈ ವಿಕೆಟ್ನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 100 ವಿಕೆಟ್ ಕಬಳಿಸಿದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಎಡಗೈ ವೇಗಿ ಶಾಹೀನ್ ಅಫ್ರಿದಿ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿತ್ತು. ಸ್ಟಾರ್ಕ್ 52 ಏಕದಿನ ಪಂದ್ಯಗಳ ಮೂಲಕ 100 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಕೇವಲ 51 ಮ್ಯಾಚ್ಗಳಲ್ಲೇ 100 ವಿಕೆಟ್ಗಳನ್ನು ಪೂರೈಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ ನೂರು ವಿಕೆಟ್ ಕಬಳಿಸಿದ ವೇಗಿ ಎಂಬ ದಾಖಲೆಯನ್ನು ಶಾಹೀನ್ ಅಫ್ರಿದಿ ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ಪಾಕಿಸ್ತಾನ್ ಪರ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 100 ವಿಕೆಟ್ ಕಬಳಿಸಿದ ಬೌಲರ್ ಎಂಬ ಹಿರಿಮೆಗೂ ಶಾಹೀನ್ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಸಕ್ಲೈನ್ ಮುಷ್ತಾಕ್ ಹೆಸರಿನಲ್ಲಿತ್ತು. ಸಕ್ಲೈನ್ 53 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ 51 ಪಂದ್ಯಗಳ ಮೂಲಕ ನೂರು ವಿಕೆಟ್ ಕಬಳಿಸಿ ಶಾಹೀನ್ ಈ ದಾಖಲೆಯನ್ನು ಮುರಿದಿದ್ದಾರೆ.

ಇನ್ನು ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 100 ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆ ನೇಪಾಳದ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಹೆಸರಿನಲ್ಲಿದೆ. ಸಂದೀಪ್ ಕೇವಲ 42 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದರು.

ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 9 ಓವರ್ಗಳನ್ನು ಬೌಲಿಂಗ್ ಮಾಡಿದ್ದ ಶಾಹೀನ್ ಅಫ್ರಿದಿ 23 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ಈ ಭರ್ಜರಿ ಬೌಲಿಂಗ್ ಪರಿಣಾಮ ಬಾಂಗ್ಲಾದೇಶ್ ತಂಡ 45.1 ಓವರ್ಗಳಲ್ಲಿ 204 ರನ್ಗಳಿಗೆ ಆಲೌಟ್ ಆಯಿತು.
Published On - 5:57 pm, Tue, 31 October 23
























